Home » DK Suresh: ರಾಜಕಾರಣದಲ್ಲಿ ನೆಮ್ಮದಿಯೇ ಇಲ್ಲ, ವಿಶ್ರಾಂತಿ ಬೇಕಾಗಿದೆ ! ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತಾರಾ ಡಿಕೆ ಸುರೇಶ್?

DK Suresh: ರಾಜಕಾರಣದಲ್ಲಿ ನೆಮ್ಮದಿಯೇ ಇಲ್ಲ, ವಿಶ್ರಾಂತಿ ಬೇಕಾಗಿದೆ ! ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತಾರಾ ಡಿಕೆ ಸುರೇಶ್?

0 comments
DK Suresh

DK Suresh: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಕಾಂಗ್ರೆಸ್ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಐದು ಗ್ಯಾರಂಟಿ ಘೋಷಿಸಿದಂತೆ ಜಾರಿಗೆ ತಂದಿದೆ. ಈ ಮಧ್ಯೆ ಇದೀಗ ಡಿಕೆ ಸುರೇಶ್ (DK Suresh) ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ.

ಹೌದು, ಬೆಂಗಳೂರಿನಲ್ಲಿ ಇಂದು (ಜೂನ್ 18) ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಸುರೇಶ್, ರಾಜಕಾರಣದಲ್ಲಿ ನೆಮ್ಮದಿಯೇ ಇಲ್ಲ. ಹೊರಗೆ ಹೋದರೆ ಜನರ ಬಳಿಯೂ ನೆಮ್ಮದಿ ಇಲ್ಲ, ಇಲ್ಲಿ ಜೊತೆ ಇರುವವರ ಬಳಿಯೂ ನೆಮ್ಮದಿ ಇಲ್ಲ. ವಿಶ್ರಾಂತಿ ಬೇಕಾಗಿದೆ. ಹಾಗಾಗಿ ರಾಜಕಾರಣದಿಂದ ದೂರ ಉಳಿಯುತ್ತೇನೆ ಎಂದು ಹೇಳಿದರು.

ಪಕ್ಷವನ್ನು ಅಧಿಕಾರಕ್ಕೆ ತರಲು ಕಷ್ಟ ಪಟ್ಟವರು ಅಧಿಕಾರದಲ್ಲಿ ಇದ್ದಾರೆ. ಸಂತೋಷವಾಗಿದ್ದಾರೆ. ಹಾಗೇ ಇರಲಿ ನನಗೆ ರಾಜಕಾರಣ ಬೇಡ. ಸಾಕಷ್ಟು ಜನನಾಯಕರು ಇದ್ದಾರೆ. ಪಕ್ಷ ಸಂಘಟನೆ ಮಾಡಿರುವ ಹಿರಿಯರು ಇದ್ದಾರೆ. ಅವರಿಗೆ ಅವಕಾಶ ಸಿಗಬೇಕು. ನನಗೆ ಬೇಸರವಿಲ್ಲ, ನಾನು ಕಾರ್ಯಕರ್ತನಾಗಿ ಕೆಲಸ ಮಾಡಲು ಸಿದ್ದವಾಗಿದ್ದೇನೆ. ಕ್ಷೇತ್ರದ ಜನರ ಜೊತೆ ಖುಷಿಯಿಂದ ಕೆಲಸ ‌ಮಾಡುತ್ತಿದ್ದೇನೆ. ಇನ್ನೂ ಹನ್ನೊಂದು ತಿಂಗಳ ಅವಕಾಶ ಇದೆ. ಕ್ಷೇತ್ರದ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: KSRTC: ಮಾರ್ಗಮಧ್ಯೆ ಕೆಟ್ಟುಹೋದ ಟಿಕೆಟ್ ಯಂತ್ರ ; ಕಾಡು ಪ್ರದೇಶದಲ್ಲಿಯೇ ಮಹಿಳೆಯರನ್ನು ಬಸ್ಸಿನಿಂದಿಳಿಸಿದ ಚಾಲಕ !

You may also like

Leave a Comment