Home » Aadhaar card photo issues: ಅಶ್ಲೀಲ ಪದವಿರುವ ಬಟ್ಟೆ ಹಾಕಿ ಆಧಾರ್ ಕಾರ್ಡ್ ಫೋಟೋ ಅಪ್ಲೋಡ್ ಮಾಡಿಸಿದ ಯುವತಿ!! ತಮ್ಮದೇ ಶೈಲಿಯಲ್ಲಿ ಕಮೆಂಟಿಸಿದ ನೆಟ್ಟಿಗರು!!

Aadhaar card photo issues: ಅಶ್ಲೀಲ ಪದವಿರುವ ಬಟ್ಟೆ ಹಾಕಿ ಆಧಾರ್ ಕಾರ್ಡ್ ಫೋಟೋ ಅಪ್ಲೋಡ್ ಮಾಡಿಸಿದ ಯುವತಿ!! ತಮ್ಮದೇ ಶೈಲಿಯಲ್ಲಿ ಕಮೆಂಟಿಸಿದ ನೆಟ್ಟಿಗರು!!

by ಹೊಸಕನ್ನಡ
0 comments
Aadhaar card photo issues

Aadhaar card photo issues : ಆಧಾರ್ ಕಾರ್ಡಿಗೆ(Adhar card) ಫೋಟೋ ತೆಗೆಯುವಾಗ ಯುವತಿಯೊಬ್ಬರು ಅಶ್ಲೀಲ ಪದವಿರುವ ಬಟ್ಟೆ ತೊಟ್ಟು ಫೋಟೋ (Photo) ತೆಗೆಸಿ, ಆಧಾರ್ ಕಾರ್ಡ್ ಮಾಡಿಸಿದ್ದು, ಸದ್ಯ ಆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇತ್ತೀಚೆಗೆ ಆಧಾರ್ ಕಾರ್ಡಿನಲ್ಲಿರೋ ಫೋಟೋಗಳು ಹೆಚ್ಚು ಟ್ರೋಲ್ ಗೆ ಒಳಗಾಗುತ್ತವೆ. ಅದರಲ್ಲೂ ಕೂಡ ಹುಡುಗಿಯರ ಪೋಟೋಗಳೇ ಟಾರ್ಗೆಟ್ ಅನ್ನಬಹುದು. ಯಾಕೆಂದರೆ ಅದರಲ್ಲಿ ಮೇಕಪ್(Makeup) ಇಲ್ಲದೆ, ಲಿಪ್ಸ್ಟಿಕ್(Lipstick) ಇಲ್ಲದೆ ಚುಲುವೆಯರು ಸುಂದರವಾಗಿ ಕಾಣುತ್ತಾರೆ. ಅಂದರೆ ತಮ್ಮ ಒರಿಜಿನಲ್ ಬ್ಯೂಟಿಯಲ್ಲಿ(Original beauty)ಜಗಮಗಿಸುತ್ತಾರೆ ಎಂದು. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಚಂದದಲ್ಲಿ ರೆಡಿಯಾಗಿ ಆಧಾರ್ ಕಾರ್ಡ್ ಅಪ್ಲೋಡ್ ಮಾಡಿಸಲು ಹುಡುಗಿಯರು ಮುಂದಾಗಿದ್ದಾರೆ. ಆದರೆ ಇಲ್ಲೊಂದೆಡೆ ಯುವತಿಯೊಬ್ಬರು ಆಧಾರ್ ಕಾರ್ಡ್ ಅಪ್ಲೋಡ್ ಮಾಡಿಸಿ,( Aadhaar card photo issues) ಆ ಫೋಟೋ ಮೂಲಕ ಭಾರೀ ಸುದ್ದಿಯಾಗ್ತಿದ್ದಾರೆ.

ಹೌದು, ಅಂಜಿ ಉಚ್ಚಿಹಾ(anji ucchiha) ಎಂಬುವರ ಆಧಾರ್ ಕಾರ್ಡ್‌ ಫೋಟೋದಲ್ಲಿ F** off ಎಂಬ ಅಶ್ಲೀಲ ಪದವಿರುವ ಶರ್ಟ್ ಧರಿಸಿದ್ದು, ಸದ್ಯ ಈ ಫೋಟೋ ಭಾರೀ ವೈರಲ್ ಆಗುತ್ತಿದೆ. ಅಂಜಿ ಅವರೇ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಫೋಟೋವನ್ನು ಹಂಚಿಕೊಂಡಿದ್ದು, ನನಗೆ ಆಧಾರ್ ಕಾರ್ಡ್‌ನ ಅಗತ್ಯ ಇದ್ದಿದ್ರಿಂದ ನಾನು ಆಧಾರ್ ಕಾರ್ಡ್‌ ನವೀಕರಿಸಲು ಹೋಗಿದ್ದೆ. ಆದರೆ ನಾನು ಆ ದಿನ F** off ಎಂದು ಬರೆದಿದ್ದ ಟಿ ಶರ್ಟ್(T Shirt) ಅನ್ನು ಧರಿಸಿದ್ದೆ. ಅದು ನನ್ನ ಗಮನಕ್ಕೆ ಬಂದಿರಲಿಲ್ಲ. ಆದರೆ ಈಗ ಈ ಫೋಟೋ ನೋಡಿ ಸಮಸ್ಯೆಗೆ ಸಿಕ್ಕಿಹಾಕಿಕೊಂಡಿದ್ದೇನೆ. ಇದರಿಂದ ನನಗೆ ಖುಷಿಯಾಗ್ತಿಲ್ಲ. ಆದಷ್ಟು ಬೇಗ ಈ ಫೋಟೋವನ್ನ ಬದಲಿಸಬೇಕಿದೆ ಎಂದು ಹೇಳಿದ್ದಾರೆ.

ಅಂದಹಾಗೆ ಸದ್ಯ ಉಚ್ಚಿಹಾ ಅವರ ಫೋಟೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಗರು ತಮ್ಮದೇ ಶೈಲಿಯಲ್ಲಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕೆಲವರು ಫೋಟೋ ಬದಲಾಯಿಸಿ ಅಂತ ಸಲಹೆ ನೀಡಿದರೆ, ಮತ್ತೆ ಕೆಲವರು ಇದೊಂದು ನಗು ತರಿಸುವ ವಿಷಯ ಎಂದಿದ್ದಾರೆ.

ಇದನ್ನೂ ಓದಿ: Free bus travel Scheme: ರಾಜ್ಯದಲ್ಲಿ ಮಹಿಳೆಯರಂತೆ ಪುರುಷರಿಗೂ ಉಚಿತ ಬಸ್ ಪ್ರಯಾಣ!?? ಏನಿದು ಹೊಸ ಸಮಾಚಾರ?

You may also like

Leave a Comment