Home » Uttar pradesh: ಮುಸ್ಲಿಂ ವ್ಯಕ್ತಿಯನ್ನು ಥಳಿಸಿ, ಮರಕ್ಕೆ ಕಟ್ಟಿ, ತಲೆಬೋಳಿಸಿ, ಜೈ ಶ್ರೀ ರಾಮ್ ಹೇಳಲೇಬೇಕೆಂದು ಒತ್ತಾಯಿಸಿದ ನೀಚರು !! ವಿಡಿಯೋ ವೈರಲ್!!

Uttar pradesh: ಮುಸ್ಲಿಂ ವ್ಯಕ್ತಿಯನ್ನು ಥಳಿಸಿ, ಮರಕ್ಕೆ ಕಟ್ಟಿ, ತಲೆಬೋಳಿಸಿ, ಜೈ ಶ್ರೀ ರಾಮ್ ಹೇಳಲೇಬೇಕೆಂದು ಒತ್ತಾಯಿಸಿದ ನೀಚರು !! ವಿಡಿಯೋ ವೈರಲ್!!

by ಹೊಸಕನ್ನಡ
0 comments
Uttar pradesh

Muslim:ಕಳ್ಳತನ ಮಾಡಿದ್ದಾನೆಂದು ಅನುಮಾನಿಸಿ ಮುಸ್ಲಿಂ(Muslim) ಕಾರ್ಮಿಕನೊಬ್ಬನನ್ನು ಮರಕ್ಕೆ ಕಟ್ಟಿ ಹಾಕಿ, ತಲೆ ಬೋಳಿಸಿ, ಥಳಿಸಿ ಜೈ ಶ್ರೀರಾಮ್(Jai shreeram) ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

 

ಹೌದು, ಉತ್ತರ ಪ್ರದೇಶದ(Uttar pradesh) ಬುಲಂದ್‌ಶಹರ್(Bulandshahar) ಜಿಲ್ಲೆಯಲ್ಲಿ ಫೋನ್ ಕದ್ದಿದ್ದಾನೆಂದು ಅನುಮಾನಿಸಿ ಮೂವರು ಯುವಕರು ಸೇರಿ ಸಾಹಿಲ್ ಎಂಬ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ, ಮರಕ್ಕೆ ಕಟ್ಟಿ ಹಾಕಿ, ಬಳಿಕ ‘ಜೈ ಶ್ರೀ ರಾಮ್’ ಎಂದು ಕೂಗುವಂತೆ ಒತ್ತಾಯಿಸಿದ್ದಾರೆ. ಸದ್ಯ ಸಾಹಿಲ್(Sahil) ನನ್ನು ಕಟ್ಟಿ ಹಾಕಿ, ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗುವಂತೆ ಒತ್ತಾಯಿಸಿ ಥಳಿಸಿದ ವಿಡಿಯೋ ಸೋಷಿಯಲ್ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.

ಅಂದಹಾಗೆ ಸಾಹಿಲ್‌ನ ತಂದೆ ಶಕೀಲ್(Shakeel) ಮಗನ ಮೇಲೆ ಹಲ್ಲೆ ಮಾಡಿದವರ ವಿರುದ್ಧವಾಗಿ ದೂರು ನೀಡಿದ್ದು, ಆರೋಪಿಯೊಂದಿಗೆ ರಾಜಿ ಮಾಡಿಕೊಳ್ಳುವಂತೆ ಪೊಲೀಸರು ಕೇಳುತ್ತಿದ್ದಾರೆ ಮತ್ತು ಬೆದರಿಕೆ ಹಾಕುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೆ ತನ್ನ ಮಗ ಮಧ್ಯಾಹ್ನ ಊಟಕ್ಕೆಂದು ಮನೆಗೆ ಹೋಗುತ್ತಿದ್ದಾಗ ಆರೋಪಿಗಳು ಆತನನ್ನು ಹಿಡಿದು ಮರಕ್ಕೆ ಕಟ್ಟಿ ಥಳಿಸಿದ್ದಾರೆ. ನಮ್ಮ ಮನವಿಯನ್ನು ಯಾರೂ ಕೇಳುತ್ತಿಲ್ಲ, ನಮ್ಮನ್ನು ರಾಜಿ ಮಾಡಿಕೊಳ್ಳಲು ಕೇಳಲಾಗುತ್ತಿದೆ, ನಮಗೆ ಬೆದರಿಕೆ ಹಾಕಲಾಗುತ್ತಿದೆ. ನಮಗೆ ಇಲ್ಲಿ ಉಳಿಯಲು ಬಿಡಬೇಡಿ, ನಮಗೆ ನ್ಯಾಯ ಬೇಕು,” ಎಂದು ಕಣ್ಣೀರು ಹಾಕಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್​​ ಅಧಿಕಾರಿಯೊಬ್ಬರು(Police Officer’s) ಮಾತನಾಡಿ, ವಿಡಿಯೋವನ್ನು ಗಮನದಲ್ಲಿಟ್ಟುಕೊಂಡು, ಕುಟುಂಬದಿಂದ ಬಂದ ದೂರಿನ ಆಧಾರದ ಮೇಲೆ ಆರೋಪಿಗಳ ವಿರುದ್ಧ ಕಾಕೋಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಗಜೇಂದ್ರ, ಸೌರಭ್ ಮತ್ತು ಧನ್ನಿ ಎಂದು ಗುರುತಿಸಲಾಗಿದೆ ‘ ಎಂದು ಹೇಳಿದರು.

ಇದನ್ನೂ ಓದಿ : ತಿರುಗುತ್ತಿರುವ ಫ್ಯಾನ್‌ಗೆ ಸುತ್ತಿಕೊಂಡ ಹಾವು !ಮುಂದಾಗೋ ಟ್ವಿಸ್ಟ್ ನೋಡಿದ್ರೆ ನೀವು ಭಯಪಡೋದು ಪಕ್ಕಾ!!

You may also like

Leave a Comment