Home » Vijay Thalapathy- Anbumani Ramadoss: ಮಾಜಿ ಸಚಿವ ಅನ್ಬುಮಣಿ ರಾಮದಾಸ್‌ ಅವರಿಂದ ತಮಿಳು ನಟ ವಿಜಯ್ ಗೆ ಖಡಕ್ ಎಚ್ಚರಿಕೆ! ಅಷ್ಟಕ್ಕೂ ದಳಪತಿ ಮಾಡಿದ ತಪ್ಪಾದರೂ ಏನು?

Vijay Thalapathy- Anbumani Ramadoss: ಮಾಜಿ ಸಚಿವ ಅನ್ಬುಮಣಿ ರಾಮದಾಸ್‌ ಅವರಿಂದ ತಮಿಳು ನಟ ವಿಜಯ್ ಗೆ ಖಡಕ್ ಎಚ್ಚರಿಕೆ! ಅಷ್ಟಕ್ಕೂ ದಳಪತಿ ಮಾಡಿದ ತಪ್ಪಾದರೂ ಏನು?

by ಹೊಸಕನ್ನಡ
0 comments
Vijay Thalapathy

Vijay Thalapathy: ತಮಿಳಿನ(Tamil)) ಖ್ಯಾತ ನಟ ವಿಜಯ್​ ದಳಪತಿ(Vijay dalapati) ಅವರ ರಾಜಕೀಯ ಎಂಟ್ರಿ ಕುರಿತು ಇತ್ತೀಚೆಗೆ ಭಾರೀ ಚರ್ಚೆಗಳಾಗುತ್ತಿವೆ. ಈ ಬಗ್ಗೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ(Annamalai) ಅವರು ಕೂಡ ವಿಜಯ್​ಗೆ ಬೆಂಬಲ ಸೂಚಿಸಿದ್ದಾರೆ. ಆದರೆ ಈ ಬೆನ್ನಲ್ಲೇ ತಮಿಳುನಾಡಿನ ಹಿರಿಯ ರಾಜಕಾರಣಿಯೊಬ್ಬರು, ವಿಜಯ್‌ಗೆ ಎಚ್ಚರಿಕೆಯ ಬುದ್ಧಿಮಾತುಗಳನ್ನು ಹೇಳಿದ್ದಾರೆ. ಹಾಗಾದರೆ ವಿಜಯ್ ಮಾಡಿದ ತಪ್ಪೇನಾದರೂ ಏನು?

ದಳಪತಿ’ ವಿಜಯ್ ತಾವಾಯಿತು, ತಮ್ಮ ಸಿನಿಮಾಗಳಾಯಿತು ಎಂದು ಇರುವ ನಟ. ಆದರೆ ನಟ ‘ದಳಪತಿ’ ವಿಜಯ್‌ (Vijay Thalapathy) ಈಗ ಸಖತ್ ಸುದ್ದಿಯಲ್ಲಿದ್ದಾರೆ. ಶನಿವಾರವಷ್ಟೇ (ಜೂನ್ 17) ಅವರು ತಮಿಳುನಾಡಿನ(Tamilnad) ಎಲ್ಲ ವಿಧಾನ ಸಭಾ ಕ್ಷೇತ್ರಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿದ್ದಾರೆ. ಹಾಗೆಯೇ, ಅವರು ರಾಜಕೀಯಕ್ಕೆ ಎಂಟ್ರಿ ಕೊಡಲು ಸಜ್ಜಾಗುತ್ತಿದ್ದಾರೆ ಎಂಬ ಟಾಕ್ ಕೂಡ ಜೋರಾಗಿ ಕೇಳಿಬಂದಿದೆ. ಆದರೆ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ವಿಜಯ್ ಹೆಸರು ಕಾಂಟ್ರವರ್ಸಿಗೆ ಸಿಲುಕಿದೆ. ಅಲ್ಲದೆ ಮಾಜಿ ಕೇಂದ್ರ ಸಚಿವ ಅನ್ಬುಮಣಿ ರಾಮದಾಸ್‌(Anbumani ramdas) ಅವರು ಕೂಡ ವಿಜಯ್ ಅವರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಹಾಗಿದ್ದರೆ ವಿಜಯ್ ಮಾಡಿದ ತಪ್ಪಾದರೂ ಏನು ಎಂದು ಯೋಚಿಸ್ತಿದ್ದೀರಾ? ಅದೇನಪ್ಪಾ ಅಂದ್ರೆ ಸದ್ಯ ‘ದಳಪತಿ’ ವಿಜಯ್ ಅವರು ಲೋಕೇಶ್ ಕನಕರಾಜ್‌ ನಿರ್ದೇಶನ ‘ಲಿಯೋ'(Leo) ಸಿನಿಮಾದಲ್ಲಿ ನಡೆಸುತ್ತಿದ್ದು, ಅಕ್ಟೋಬರ್ 19ರಂದು ಇದು ತೆರೆಗೆ ಬರಲಿದೆ. ಹೀಗಾಗಿ ಜೂನ್ 22ರಂದು ವಿಜಯ್ ಹುಟ್ಟುಹಬ್ಬ ಸಲುವಾಗಿ ‘ಲಿಯೋ’ ಚಿತ್ರದ ‘ನಾ ರೆಡಿ..’ ಹಾಡನ್ನು ರಿಲೀಸ್(Song release ಮಾಡುವುದಕ್ಕೆ ಚಿತ್ರತಂಡ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಅದರ ಅನೌನ್ಸ್‌ಮೆಂಟ್‌ಗಾಗಿ ಒಂದು ಪೋಸ್ಟರ್(Poster) ಹಂಚಿಕೊಳ್ಳಲಾಗಿತ್ತು. ಇದೀಗ ಈ ಒಂದು ಪೋಸ್ಟರ್‌ ಕಾಂಟ್ರವರ್ಸಿಗೆ ಸಿಲುಕಿದೆ. ಯಾಕೆಂದರೆ ಆ ಪೋಸ್ಟರ್‌ನಲ್ಲಿ ವಿಜಯ್ ಬಾಯಲ್ಲಿ ಸಿಗರೇಟ್ ಇದೆ. ಅದೇ ಈಗ ವಿವಾದಕ್ಕೆ ಕಾರಣವಾಗಿದೆ.

ಈ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸ ಬಹಿರಂಗವಾಗಿ ಹೇಳಿಕೆ ನೀಡಿರುವ ತಮಿಳುನಾಡಿನ ಮಾಜಿ ಕೇಂದ್ರ ಸಚಿವ ಅನ್ಬುಮಣಿ ರಾಮದಾಸ್‌ ಅವರು ‘ನಟ ವಿಜಯ್ ಧೂಮಪಾನ ಮಾಡುವಂತಹ ದೃಶ್ಯಗಳಿಂದ ದೂರವಿರಬೇಕು. ‘ಲಿಯೋ’ ಚಿತ್ರದ ಫಸ್ಟ್‌ ಲುಕ್ ಪೋಸ್ಟರ್‌ನಲ್ಲಿ ವಿಜಯ್ ಧೂಮಪಾನ ಮಾಡುತ್ತಿರುವುದನ್ನು ಕಂಡು ಬೇಸರವಾಯಿತು. ಮಕ್ಕಳು ಮತ್ತು ವಿದ್ಯಾರ್ಥಿಗಳು ವಿಜಯ್ ಅವರ ಸಿನಿಮಾಗಳನ್ನು ನೋಡುತ್ತಾರೆ. ವಿಜಯ್ ಧೂಮಪಾನದ(Smokimg) ದೃಶ್ಯದಲ್ಲಿ ನಟಿಸುವುದನ್ನು ನೋಡಿ ಅವರಿಗೂ ಅದು ಚಟವಾಗಬಾರದು. ಧೂಮಪಾನದಿಂದ ಸಾರ್ವಜನಿಕರನ್ನು ರಕ್ಷಿಸುವ ಸಾಮಾಜಿಕ ಜವಾಬ್ದಾರಿಯೂ ವಿಜಯ್ ಮೇಲಿದೆ,
ಅದನ್ನೇ ಕಾನೂನು ಹೇಳುತ್ತದೆ. ಹಾಗಾಗಿ ನಟ ವಿಜಯ್ ಅವರು ಧೂಮಪಾನದ ದೃಶ್ಯಗಳಲ್ಲಿ ನಟಿಸುವುದನ್ನು ನಿಲ್ಲಿಸಬೇಕು’ ಎಂದು ಹೇಳಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಇದನ್ನೂ ಓದಿ: Actor Vijay Gift: ಹೈಸ್ಕೂಲ್ ವಿದ್ಯಾರ್ಥಿನಿಗೆ ಡೈಮಂಡ್ ನೆಕ್ಲೇಸ್ ಗಿಫ್ಟ್ ನೀಡಿದ ನಟ ವಿಜಯ್ !

You may also like

Leave a Comment