Home » Olle hudga pratham: ‘ವಿದೇಶಕ್ಕೆ ಹೋದ್ರೂ ಅದೇ ಆಗೋದು, ಇಲ್ಲಿ ಮಾಡಿದ್ರೂ ಅದೇ ಆಗೋದು’!! ಮದುವೆ ಮುಂಚೆಯೇ ಹನಿಮೂನ್ ಬಗ್ಗೆ ಮಾತಾಡಿದ ಒಳ್ಳೇ ಹುಡ್ಗ ಪ್ರಥಮ್!!

Olle hudga pratham: ‘ವಿದೇಶಕ್ಕೆ ಹೋದ್ರೂ ಅದೇ ಆಗೋದು, ಇಲ್ಲಿ ಮಾಡಿದ್ರೂ ಅದೇ ಆಗೋದು’!! ಮದುವೆ ಮುಂಚೆಯೇ ಹನಿಮೂನ್ ಬಗ್ಗೆ ಮಾತಾಡಿದ ಒಳ್ಳೇ ಹುಡ್ಗ ಪ್ರಥಮ್!!

by ಹೊಸಕನ್ನಡ
0 comments
Olle hudga pratham

Olle hudga pratham: ಬಿಗ್ ಬಾಸ್(Bigg boss) ಖ್ಯಾತಿಯ, ತನ್ನ ಮಾತಿನ ಶೈಲಿನಿಂದಲೇ ಜನಪ್ರಿಯರಾಗಿರೋ ಒಳ್ಳೆ ಹುಡ್ಗ ಪ್ರಥಮ್(Olle hudga pratham), ಸದ್ಧಿಲ್ಲದೆ ಸಿಂಪಲ್(Simple) ಆಗಿ ನಿಶ್ಚಿತಾರ್ಥ ಮಾಡಿಕೊಂಡು ಮೊನ್ನೆ ಸಾಕಷ್ಟು ಸುದ್ಧಿಯಲ್ಲಿದ್ದರು. ಆದರೀಗ ತಮ್ಮ ಹನಿಮೂನ್(Honeymoon) ವಿಚಾರದ ಬಗ್ಗೆ ಮಾತನಾಡಿರೋ ಒಳ್ಳೆಯ ಹುಡುಗ, ಎಲ್ಲರನ್ನೂ ನಗಿಸಿದ್ದಾರೆ. ನಗಿಸುವುದರೊಂದಿಗೆ ಈ ಮಾತೂ ಸತ್ಯವಲ್ಲವೇ ಅನ್ನೋದನ್ನು ಒರೆಗೆ ಹಚ್ಚಿದ್ದಾರೆ.

ಹೌದು, ಮಂಡ್ಯದ(Mandya) ಅಳಿಯ ಆಗುತ್ತಿರೋ ಪ್ರಥಮ್ ಮದುವೆಗೂ ಮುನ್ನ ಹನಿಮೂನ್ (Honeymoon) ಬಗ್ಗೆ ಮಾತನಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ತಾನು ಸಿಂಪಲ್ ಆಗಿ ಮದುವೆ ಆಗುವುದಾಗಿ ಹೇಳಿದ್ದಾರೆ. ಅಲ್ಲದೆ ವಿದೇಶಕ್ಕೆ ಹನಿಮೂನ್ ಗೆ ಹೋಗುವುದಕ್ಕೆ ವ್ಯಂಗ್ಯವಾಡಿದ್ದಾರೆ. ಸದ್ಯ ಅವರಾಡಿರೋ ಮಾತುಗಳು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.

ಹನಿಮೂನ್ ಅಂದ್ರೆ ಇದೀಗ ವಿದೇಶದಲ್ಲೇ(Foriegn) ಆಗ್ಬೇಕು ಅನ್ನೋ ತರ ಆಗ್ಬಿಟ್ಟಿದೆ. ಹನಿಮೂನ್ ಗಾಗಿ ವಿದೇಶಕ್ಕೆ ಹೋಗ್ಬೇಕಾ? ಎಲ್ಲಿಗೆ ಹೋದ್ರೂ ಆಗೋದು ಅದೇನೆ. ಅದಕ್ಕಾಗಿ ಬೇರೆ ದೇಶಕ್ಕೆ ಏಕೆ ಹೋಗ್ಬೇಕು. ಇಲ್ಲೇ ಹನಿಮೂನ್ ಮಾಡ್ಕೋಬೋದು. ಇಲ್ಲೂ ಅದೇ ಆಗೋದು, ಅಲ್ಲೂ ಅದೇ ಆಗೋದು ಅಲ್ವಾ?’ ಎಂದು ಪ್ರಶ್ನೆ ಮಾಡಿದ್ದಾರೆ.

ಅಲ್ಲದೆ ‘ಮಗುವಾದ ಮೇಲೂ ತಾವು ಆ ವಿಷಯವನ್ನು ಹಂಚಿಕೊಳ್ಳುವುದಿಲ್ಲ. ಹನಿಮೂನ್ ಗೆ ಹೋದ ಫೋಟೋಗಳನ್ನು ಶೇರ್ ಮಾಡುವುದಿಲ್ಲ ಎಂದಿರುವ ಅವರು, ಎಲ್ಲರಿಗೂ ಮಕ್ಕಳು ಆಗುತ್ತವೆ. ಅದರಲ್ಲೇನು ವಿಶೇಷ. ನನಗೇನೂ ಹುಲಿ-ಸಿಂಹ ಹುಟ್ಟುತ್ತಾ ಎಂದು ಅವರು ತಮಾಷೆಯಾಗಿಯೇ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಅಂದಹಾಗೆ ಪ್ರಥಮ್, ಮಂಡ್ಯ ಮೂಲದ ಭಾನುಶ್ರೀ (Bhanushree) ವರಿಸಲಿದ್ದು, ಟ್ರೆಡಿಷನಲ್ ಫ್ಯಾಮಿಲಿಯ ಸಿಂಪಲ್ ಹುಡುಗಿಯನ್ನ ಪ್ರಥಮ್ ಮದುವೆಯಾಗುತ್ತಿದ್ದಾರೆ. ಕರ್ನಾಟಕದ ಆಳಿಯ ಇನ್ಮುಂದೆ ಮಂಡ್ಯದ ಆಳಿಯ ಆಗಲಿದ್ದಾರೆ. ಪ್ರಥಮ್ ಮದುವೆ ಆಗುತ್ತಿರುವ ಭಾನುಶ್ರೀ ಡಿಗ್ರಿ ಕಂಪ್ಲೀಟ್ ಮಾಡಿದ್ದಾರೆ. ಇದೀಗ ಡಬಲ್ ಡಿಗ್ರಿ ಮಾಡುವ ಅಲೋಚನೆಯಲ್ಲಿ ಇದ್ದಾರಂತೆ. ಪ್ರಥಮ್ ಹಳ್ಳಿ ಹುಡುಗಿಯನ್ನು ಮದುವೆ ಆಗ್ತಿದ್ದಾರೆ.

 

ಇದನ್ನು ಓದಿ: Free Bus: ಉಚಿತ ಬಸ್‌ ನೆಪದಲ್ಲಿ ನೂಕು ನುಗ್ಗಲು : ಆಯತಪ್ಪಿ ಬಿದ್ದ ಪ್ರಯಾಣಿಕ 

You may also like

Leave a Comment