Home » Adipurush movie ban: ದೇಶಾದ್ಯಂತ ಸಂಚಲನ ಸೃಷ್ಟಿಸಿದ ‘ಆದಿಪುರುಷ್’ ಸಿನಿಮಾ ಬ್ಯಾನ್.. !? ಏನಿದು ಹೊಸ ಸಮಾಚಾರ!!

Adipurush movie ban: ದೇಶಾದ್ಯಂತ ಸಂಚಲನ ಸೃಷ್ಟಿಸಿದ ‘ಆದಿಪುರುಷ್’ ಸಿನಿಮಾ ಬ್ಯಾನ್.. !? ಏನಿದು ಹೊಸ ಸಮಾಚಾರ!!

by ಹೊಸಕನ್ನಡ
0 comments
Adipurush movie ban

Adipurush movie ban: ಭಾರತದಾದ್ಯಂತ ಭಾರೀ ನಿರೀಕ್ಷೆ ಮೂಡಿಸಿದ್ದ, ಸ್ಟಾರ್ ನಟ ಪ್ರಭಾಸ್(Prabhas) ನಟನೆಯ ಬಹುನಿರೀಕ್ಷಿತ ಸಿನಿಮಾ ಆದಿಪುರುಷ್ ಕೆಲ ದಿನಗಳ ಹಿಂದಷ್ಟೇ ಅದ್ದೂರಿಯಾಗಿ ತೆರೆಗೆ ಬಂದಿದ್ದು, ಪ್ಯಾನ್ ಇಂಡಿಯಾ(Pan India movie) ಪಟ್ಟದಲ್ಲಿ ರಿಲೀಸ್ ಆಗಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದೆ. ಸಿನಿಮಾ ನೋಡಿ ಪ್ರೇಕ್ಷಕರು ನಿರಾಸೆ ವ್ಯಕ್ತಪಡಿಸುತ್ತಿದ್ದಾರೆ. ನಿರ್ದೇಶಕ ಓಂ ರಾವುತ್(Om raout) ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ಬೆನ್ನಲ್ಲೇ ಸಿನಿಮಾ (Adipurush movie ban) ಬ್ಯಾನ್ ಅನ್ನೋ ವಿಚಾರ ಒಂದು ಸಣ್ಣದಾಗಿ ಸದ್ದುಮಾಡುತ್ತಿದೆ.

ಹೌದು, ‘ಆದಿಪುರುಷ್'(Adipurush) ಸಿನಿಮಾ ಬಗ್ಗೆ ಜನರ ಆಕ್ರೋಶ ಕಮ್ಮಿಯಾಗಿಲ್ಲ. ಹಿಂದೂಗಳ ಭಾವನೆಗೆ ಈ ಸಿನಿಮಾ ಧಕ್ಕೆ ತಂದಿದೆ ಎಂದು ಹಲವೆಡೆ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಸಿನಿಮಾದ ಪಾತ್ರಗಳು ಹಾಗೂ ಡೈಲಾಗ್‌ಗಳು ಹಿಂದೂ ಸಂಸ್ಕೃತಿಗೆ ಅಗೌರವ ತೋರಿದೆ ಎಂದು ಕೆಲವರು ಸಿಟ್ಟಿಗೆದ್ದಿದ್ದಾರೆ. ಇದರಲ್ಲಿನ ತಪ್ಪುಗಳನ್ನು ಹೇಳುತ್ತಾ ಹೋದರೆ ಟೀಕೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ಕಾರಣಕ್ಕೆ ‘ಆದಿಪುರುಷ್’ ಚಿತ್ರವನ್ನು ಬ್ಯಾನ್(Ban) ಮಾಡಬೇಕು ಎನ್ನುವ ಆಗ್ರಹ ಜೋರಾಗಿದೆ.

ಅಲ್ಲದೆ ರಾವಣನ(Ravana) ವೇಷ ಭೂಷಣ, ಹನುಮಥನ(Hanumanta) ಡೈಲಾಗ್ಸ್‌ ಸೇರಿದಂತೆ ಹಲವಾರು ವಿಷಯಗಳಿಗಾಗಿ ಸಿನಿಮಾ ಟ್ರೋಲ್‌ ಆಗುತ್ತಿದೆ. ಸಿನಿಮಾ ತೆರೆಗೆ ಬಂದಾಗಿನಿಂದಲೂ ಇದರ ವಿರುದ್ಧ ಟೀಕೆಗಳು ಹೆಚ್ಚಾಗುತ್ತವೆ. ಇದೀಗ ಆದಿಪುರುಷ್‌ ಸಿನಿಮಾ ಪ್ರದರ್ಶನವನ್ನು ನಿಷೇಧಿಸಬೇಕು ಎಂದು ಆಲ್‌ ಇಂಡಿಯಾ ಸಿನಿ ಅಸೋಸಿಯೇಷನ್‌ (AICWA) ಪ್ರಧಾನಿ ಮೋದಿಗೆ ಪತ್ರಬರೆದಿದೆ. ಅಲ್ಲದೇ ಈ ಸಿನಿಮಾ ವಿರುದ್ಧ ಎಫ್‌ಐಆರ್‌ ದಾಖಲಾಗಬೇಕು ಎಂದು ಒತ್ತಡ ಹೇರಿದೆ.

ಜೊತೆಗೆ ‘ಆದಿಪುರುಷ್’ ಚಿತ್ರದಲ್ಲಿ ವಿವಾದ ಹುಟ್ಟು ಹಾಕುವಂಥ ಸಾಕಷ್ಟು ವಿಚಾರಗಳು ಕಾಣಿಸಿವೆ. ರಾವಣ ಪುಷ್ಪಕ ವಿಮಾನದ ಬದಲು ಬಾವಲಿ ಸಾಕುತ್ತಾನೆ ಮತ್ತು ಅದಕ್ಕೆ ಮಾಂಸ ಹಾಕುತ್ತಾನೆ. ಬ್ರಾಹ್ಮಣನಾಗಿ ರಾವಣನ ಕೈಯಲ್ಲಿ ಮಾಂಸ ಮುಟ್ಟಿಸಿದ್ದು ಎಷ್ಟು ಸರಿ ಎನ್ನುವ ಪ್ರಶ್ನೆಯನ್ನು ಅನೇಕರು ಕೇಳಿದ್ದಾರೆ. ಚಿತ್ರದಲ್ಲಿ ಗ್ಲಾಮರ್(Glamour) ತೋರಿಸುವ ಪ್ರಯತ್ನ ಆಗಿದೆ. ಕಥೆಯನ್ನು ಮನಸ್ಸಿಗೆ ಬಂದಂತೆ ಕಟ್ಟಿಕೊಡಲಾಗಿದೆ. ಹೀಗೆ ಹೇಳುತ್ತಾ ಹೋದರೆ ಟೀಕೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ಕಾರಣಕ್ಕೆ ‘ಆದಿಪುರುಷ್’ ಚಿತ್ರವನ್ನು ಬ್ಯಾನ್ ಮಾಡಬೇಕು ಎನ್ನುವ ಆಗ್ರಹ ಜೋರಾಗಿದೆ.

ಇನ್ನು ಆದಿಪುರುಷ್ ಚಿತ್ರದ ಕಥೆ ಹಾಗೂ ಸಂಭಾಷಣೆ ರಾಮ ಹಾಗೂ ಹನುಮಂತನ ವರ್ಚಸ್ಸಿಗೆ ಧಕ್ಕೆ ತರುವಂತಿದೆ. ಹಿಂದೂಗಳ ಭಾವನೆಗಳಿಗೆ ಧಕ್ಕೆ ಆಗುವ ರೀತಿಯಲ್ಲಿ ಸಿನಿಮಾ ಇದೆ. ಈ ಚಿತ್ರದ ಸಂಭಾಷಣೆ ಎಲ್ಲರಿಗೂ ನೋವುಂಟು ಮಾಡುವ ರೀತಿಯಲ್ಲಿದೆ’ ಎಂದು ಪತ್ರ ಆರಂಭಿಸಲಾಗಿದೆ. ನಿರ್ದೇಶಕ ಓಂ ರಾವತ್, ಚಿತ್ರಕಥೆ ಸಂಭಾಷಣೆ ಬರೆದ ಮನೋಜ್ ಮುಂತಾಶಿರ್ ಶುಕ್ಲಾ(Manoj Muntashir Shukla) ಹಾಗೂ ಚಿತ್ರದ ನಿರ್ಮಾಪಕರ ವಿರುದ್ಧ ಎಫ್​ಐಆರ್ ದಾಖಲಾಗಬೇಕು. ಈ ರೀತಿಯ ಸಿನಿಮಾಗಳಲ್ಲಿ ಪ್ರಭಾಸ್, ಕೃತಿ ಸನೋನ್ ಹಾಗೂ ಸೈಫ್ ಅಲಿ ಖಾನ್ ನಟಿಸಬಾರದಿತ್ತು. ನಟ ಪ್ರಭಾಸ್ (Prabhas) ಅವರು ಇಂತಹ ಕೆಟ್ಟ ಸಿನಿಮಾದ ಭಾಗವಾಗಬಾರದಿತ್ತು. ಕೃತಿ ಸನೂನ್ ಸೇರಿದಂತೆ ನುರಿತ ಕಲಾವಿದರೇ ಈ ಸಿನಿಮಾದಲ್ಲಿದ್ದಾರೆ. ಶೂಟಿಂಗ್ ಮಾಡುವಾಗ ಇವರಿಗೆ ಅರ್ಥವಾಗಲಿಲ್ಲವೆ? ಎಂದು ಹಲವರು ಕೇಳಿದ್ದಾರೆ.

 

ಇದನ್ನು ಓದಿ: Madhya Pradesh: ಪುಣ್ಣಕೋಟಿ ಕಥೆಗೆ ಹೊಸ ತಿರುವು ನೀಡಿದ ಹಸುಗಳ ಸತ್ಯ ಕಥೆ, ದಾಳಿ ಮಾಡಿದ ವ್ಯಾಘ್ರನನ್ನೇ ಎದುರಿಸಿ ನಿಂತ ಹಸುಗಳು, ವಿಡಿಯೋ ವೈರಲ್

You may also like

Leave a Comment