ರಾಜ್ಯದಲ್ಲಿ ವ್ಯಾಪಕವಾಗಿ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಸರ್ವ ಸಮಸ್ಯೆ ಉಂಟಾಗುತ್ತಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಫಲಾನುಭವಿಗಳಾಗಲು ಜನತೆ ಅರ್ಜಿ ಸಲ್ಲಿಸಲು ಮುಂದಾಗುತ್ತಿರುವುದರಿಂದ ಸರ್ವರ್ ಡೌನ್ ಸಮಸ್ಯೆ ಸಾಮಾನ್ಯ ಎಂಬಂತಾಗಿದೆ ಜನರು ಕೂಡ ಈ ಸರ್ವರ್ ಸಮಸ್ಯೆ ವಿರುದ್ಧ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಜನಾಕ್ರೋಶ ಕ್ರೋಢೀಕರಣಗೊಳ್ಳುತ್ತಿದೆ.
ಇದೀಗ ಅಕ್ಕಿ ಹಂಚಿಕೆ ವಿಷಯದಲ್ಲಿ ಕೇಂದ್ರ ಸರ್ಕಾರದ ಜತೆ ಫೈಟ್ ಗೆ ನಿಂತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಇದೀಗ ಸರ್ವರ್ ಡೌನ್ ಸಮಸ್ಯೆಗೆ ಕೇಂದ್ರ ಸರ್ಕಾರ ಕಾರಣ ಎಂಬ ಗಂಭೀರ ಆರೋಪ ಮಾಡಿದೆ. ಅಷ್ಟೇ ಅಲ್ಲ ರಾಜ್ಯದ ಸರ್ವ ಸಮಸ್ಯೆಗೆ ಕೇಂದ್ರ ಸರ್ಕಾರ ಕಾರಣ ಕೇಂದ್ರವು ಸರ್ವರಗಳನ್ನು ಹ್ಯಾಕ್ ಮಾಡಿದೆ ಎನ್ನುವ ಬಹುದೊಡ್ಡ ಆಪಾದನೆಯನ್ನು ಕೇಂದ್ರದ ಮೇಲೆ ರಾಜ್ಯ ಸಚಿವರೊಬ್ಬರು ಮಾಡಿದ್ದಾರೆ.
ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿಯವರು, ರಾಜ್ಯದ ಸರ್ವರ್ ಗಳನ್ನು ಕೇಂದ್ರ ಸರ್ಕಾರವು ಹ್ಯಾಕ್ ಮಾಡಿದೆ, ಹೀಗಾಗಿ ಸರ್ವರ್ ಡೌನ್ ಸಮಸ್ಯೆ ಎದುರಾಗುತ್ತಿದೆ ಎಂದು ಹೇಳುವ ಮೂಲಕ ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದಾರೆ.ಸರ್ಕಾರವು ಯಾವುದೇ ಪೂರ್ವ ಯೋಜನೆ ಮಾಡದೆ ಯೋಜನಗಳನ್ನು ಜಾರಿಗೆ ತರುತ್ತಿದೆ ಎಂಬ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ ಸತೀಶ್ ಜಾರಕಿಹೊಳಿ.
“ನಾವು ಉತ್ತಮವಾಗಿ ಪ್ಲಾನ್ ಮಾಡಿದ್ದೇವೆ. ಆದರೆ ನಮ್ಮ ಸಿಸ್ಟಮ್ ಗಳನ್ನು ಕೇಂದ್ರದವರು ಹ್ಯಾಕ್ ಮಾಡಿ ಸ್ಥಗಿತ ಮಾಡಿದ್ದಾರೆ ಎಂಬ ಗಂಭೀರ ಹೇಳಿಕೆ ನೀಡಿದ್ದಾರೆ.
ಸರ್ವರ್ ಅನ್ನು ಕೂಡಾ ಇವಿಎಂ ರೀತಿಯಲ್ಲಿ ಹ್ಯಾಕ್ ಮಾಡಲಾಗಿದೆ. ಅಷ್ಟೇ ಅಲ್ಲದೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಡಿಪಾರ್ಟ್‌ಮೆಂಟ್ ಕೂಡ ಹ್ಯಾಕ್ ಆಗಿದೆ. ಹೀಗಾಗಿ ಎಲ್ಲವೂ ತಡವಾಗುತ್ತಿದೆ. ಅದನ್ನ ಸರಿ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ. ಎಷ್ಟೇ ಹ್ಯಾಕ್ ಮಾಡಿದರೂ ನಮ್ಮ ಯೋಜನೆ ಜಾರಿಗೆ ತರುತ್ತೇವೆ ” ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಅತ್ತ ಸಿದ್ದರಾಮಯ್ಯನವರು ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಹಾಕಿದ್ದಂತಹ ದೊಡ್ಡ ಕ್ರಿಮಿನಲ್ ಆರೋಪವನ್ನು ಹೊರಿಸುತ್ತಿದೆ. ಇದು ಕೂಡ ಸುಳ್ಳು ಸುದ್ದಿಯ ವಿಭಾಗದಲ್ಲಿ ಬರುತ್ತದೆಯಾ ಇಲ್ಲವಾ ಎಂದು ಸಿದ್ದರಾಮಯ್ಯನವರು ಸ್ಪಷ್ಟಪಡಿಸಬೇಕು.
