Google Account: ಸಾಮಾನ್ಯವಾಗಿ gmail ಅಕೌಂಟ್ ಎಲ್ಲರ ಬಳಿ ಇದ್ದೇ ಇರುತ್ತದೆ. ನಿಮ್ಮ ಬಳಿಯೂ ಇದೆ ಎಂದಾದರೆ ನಿಮಗಾಗಿ ಇಲ್ಲಿದೆ ಮುಖ್ಯ ಮಾಹಿತಿ. ಹೌದು, ನಿಮ್ಮ gmail ಅಕೌಂಟ್ ಕೆಲವೇ ದಿನಗಳಲ್ಲಿ ಡಿಲೀಟ್ ಆಗಲಿದೆ. ಯಾಕಾಗಿ? ಅಷ್ಟಕ್ಕೂ ಅಕೌಂಟ್ ಉಳಿಸಿಕೊಳ್ಳಲು ಏನು ಮಾಡಬೇಕು. ಇಲ್ಲಿದೆ ನೋಡಿ ಮಾಹಿತಿ. ತಕ್ಷಣ ಹೀಗೆ ಮಾಡಿ ಅಕೌಂಟ್ (Google Account) ಉಳಿಸಿಕೊಳ್ಳಿ !
ನೀವು ಜಿಮೇಲ್ (Gmail) ಖಾತೆಯನ್ನು 2 ವರ್ಷಗಳಿಂದ ಬಳಸಿಲ್ಲ ಎಂದಾದರೆ ನಿಮ್ಮ ಖಾತೆಗೆ ಕಂಟಕವಿದೆ. ಹೌದು, ಗೂಗಲ್ (Google) ತನ್ನ ಬಳಕೆದಾರರ ನಿಷ್ಕ್ರಿಯ ಖಾತೆಗಳ ನೀತಿಯಲ್ಲಿ ಹೊಸ ಬದಲಾವಣೆ ಮಾಡಿದೆ. 2 ವರ್ಷಗಳಿಂದ ಕಾರ್ಯನಿರ್ವಹಿಸದ ಖಾತೆಗಳನ್ನು ಅಳಿಸಿ ಹಾಕುವುದಾಗಿ ಗೂಗಲ್ ಎಚ್ಚರಿಸಿದೆ.
ಗೂಗಲ್ ತನ್ನ ಬ್ಲಾಗ್ ಪೋಸ್ಟ್ನಲ್ಲಿ, ಈ ವರ್ಷದ ನಂತರ ಗೂಗಲ್ ಖಾತೆಯನ್ನು 2 ವರ್ಷಗಳವರೆಗೆ ಬಳಸದಿದ್ದರೆ ಅಥವಾ ಸೈನ್ ಇನ್ ಮಾಡದಿದ್ದರೆ ಆ ಖಾತೆಯನ್ನು ಹಾಗೂ ಅದರಲ್ಲಿರುವ ಡೇಟಾಗಳನ್ನು ಅಳಿಸಲಾಗುವುದು. ಅವುಗಳಲ್ಲಿ ಗೂಗಲ್ ವರ್ಕ್ಸ್ಟೇಸ್ (ಜಿಮೇಲ್, ಡಾಕ್ಸ್, ಡ್ರೈವ್, ಕ್ಯಾಲೆಂಡರ್), ಯೂಟ್ಯೂಬ್, ಹಾಗೂ ಗೂಗಲ್ ಫೋಟೋಸ್ ಸೇರಿರುತ್ತವೆ ಎಂದು ತಿಳಿಸಿದೆ.
ಅಲ್ಲದೆ, ಒಂದು ಬಾರಿ ಡಿಲೀಟ್ ಆದ ಖಾತೆಯನ್ನು ಮರುಬಳಕೆ ಮಾಡಲು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ. ಹಾಗಾಗಿ ಬಳಕೆದಾರರು ತಮ್ಮ ಹಳೆಯ ಖಾತೆಗಳನ್ನು ಪರಿಶೀಲಿಸುವುದು ಹಾಗೂ ವಿವಿಧ ಚಟುವಟಿಕೆಯನ್ನು ನಿರ್ವಹಿಸಿ. ಜಿಮೇಲ್ ಖಾತೆಗೆ ಭೇಟಿ ನೀಡುತ್ತಿರಿ. ಆಗ ಖಾತೆ ಡಿಲೀಟ್ ಆಗುವುದಿಲ್ಲ.
ಇದನ್ನೂ ಓದಿ: Rain Alert: ಮುಂದಿನ 48 ಗಂಟೆಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಭಾರಿ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ !
