Home » Gender transition: ಲಿಂಗ ಪರಿವರ್ತನೆಗೆ ಮುಂದಾಗಿದ್ದಾರೆ ಮಾಜಿ ಸಿಎಂ ಮಗಳು !! ‘ಸುಚೇತನಾ’ ಇನ್ನು ಮುಂದೆ ‘ಸುಚೇತನ್’!!

Gender transition: ಲಿಂಗ ಪರಿವರ್ತನೆಗೆ ಮುಂದಾಗಿದ್ದಾರೆ ಮಾಜಿ ಸಿಎಂ ಮಗಳು !! ‘ಸುಚೇತನಾ’ ಇನ್ನು ಮುಂದೆ ‘ಸುಚೇತನ್’!!

by ಹೊಸಕನ್ನಡ
0 comments

Gender transition: ಮಾಜಿ ಮುಖ್ಯಮಂತ್ರಿ(EX CM)ಯೊಬ್ಬರ ಪುತ್ರಿ, ಪುರುಷನಾಗಿ ರೂಪಾಂತರಗೊಳ್ಳಲು ತಮ್ಮ ಲಿಂಗ (Gender transition) ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಉದ್ದೇಶಿಸಿರುವುದಾಗಿ ವರದಿಯಾಗಿದೆ.

ಹೌದು, ಪಶ್ಚಿಮ ಬಂಗಾಳದ(West Bengal) ಮಾಜಿ ಮುಖ್ಯಮಂತ್ರಿ ಬುದ್ಧದೇವ್‌ ಭಟ್ಟಾಚಾರ್ಯ (Buddhadev Bhattacharya) ಅವರ ಪುತ್ರಿ ಸುಚೇತನಾ ಭಟ್ಟಾಚಾರ್ಯ (Suchetana Bhattacharya) ಪುರುಷನಾಗಿ ರೂಪಾಂತರಗೊಳ್ಳಲು ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಉದ್ದೇಶಿಸಿದ್ದಾರೆ. ಅಲ್ಲದೇ ತಮ್ಮ ಹೆಸರನ್ನ ʻಸುಚೇತನ್‌ʼ (Suchetan)ಎಂದೂ ಬಸಲಿಸಿಕೊಳ್ಳಲು ನಿರ್ಧರಿಸಿದ್ದಾರೆ.

ಕೆಲವು ಮಾಧ್ಯಮಗಳ ವರದಿಯಲ್ಲಿ ಉಲ್ಲೇಖಿಸಿರುವಂತೆ, ಈಗಾಗಲೇ ಸುಚೇತನಾ(Suchetana) ಅವರು ಕಾನೂನು ಸಲಹೆಗಳನ್ನು ಪಡೆಯಲು ಪ್ರಾರಂಭಿಸಿದ್ದಾರೆ. ಅವರು ಶಾಲಾ ದಿನಗಳಿಂದಲೂ, ತನ್ನನ್ನು ತಾನು ಒಬ್ಬ ಮನುಷ್ಯ ಎಂದು ಗುರುತಿಸಿಕೊಂಡಿದ್ದಾರಂತೆ. ಕಾಲಕ್ರಮೇಣ ಈ ಅರಿವು ಬಲವಾಗುತ್ತಾ ಸಾಗಿತು ಎಂದು ಹೇಳುತ್ತಾರೆ. ಅಲ್ಲದೆ ಲಿಂಗಪರಿವರ್ತನೆಗೆ ಒಳಗಾಗಲು ಸಕಲ ಸಿದ್ಧತೆ ನಡೆಸಿದ್ದು, ಅಗತ್ಯ ಪ್ರಮಾಣ ಪತ್ರಗಳನ್ನ ಪಡೆದುಕೊಳ್ಳಲು ಮನೋವೈದ್ಯರನ್ನ (Psychiatrists) ಸಂಪರ್ಕಿಸುತ್ತಿದ್ದಾರೆ.

ಇನ್ನು ಈ ಕುರಿತು ಖಾಸಗಿ ವಾಹಿನಿಯೊಂದಿಗಿನ ಸಂದರ್ಶನದಲ್ಲಿ ಮಾತನಾಡಿರುವ ಅವರು, ನನ್ನ ಪೋಷಕರು ಯಾರು ಎನ್ನುವುದು ದೊಡ್ಡ ವಿಷಯವಲ್ಲ” ಎಂದು ಹೇಳುವ ಅವರು, ತಮಗೆ 41 ವರ್ಷ ವಯಸ್ಸಾಗಿರುವುದರಿಂದ, ಜೀವನದಲ್ಲಿ ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ. ಅಲ್ಲದೆ ನಾನು ನನ್ನ ಎಲ್‌ಜಿಬಿಟಿಕ್ಯೂ (LGBTQ) ಚಳವಳಿಯ ಭಾಗವಾಗಿ ಇದನ್ನು ಮಾಡ್ತಿದ್ದೇನೆ. ನನ್ನ ಪೋಷಕರು ಗುರುತಾಗಲಿ, ಕುಟುಂಬದ ಐಡೆಂಟಿಟಿಯಾಗಲಿ ಇಲ್ಲಿ ದೊಡ್ಡ ವಿಷಯವಲ್ಲ. ಲಿಂಗ ಪರಿವರ್ತನೆ ಆಗುವ ಮೂಲಕ ಪ್ರತಿದಿನ ಎದುರಿಸುವ ಸಾಮಾಜಿಕ ಕಿರುಕುಳ ತಡೆಯಲು ನಾನು ಬಯಸಿದ್ದೇನೆ ಎಂದೂ ಹೇಳಿಕೊಂಡಿದ್ದಾರೆ.

You may also like

Leave a Comment