Home » Ram Charan’s Wife Net Income: ರಾಮ್​ಚರಣ್​ ಪತ್ನಿ ಉಪಾಸನಾ ಅವರ ನಿವ್ವಳ ಆದಾಯ ಎಷ್ಟು ? ಶಾಕಿಂಗ್ ಮಾಹಿತಿ ಇಲ್ಲಿದೆ

Ram Charan’s Wife Net Income: ರಾಮ್​ಚರಣ್​ ಪತ್ನಿ ಉಪಾಸನಾ ಅವರ ನಿವ್ವಳ ಆದಾಯ ಎಷ್ಟು ? ಶಾಕಿಂಗ್ ಮಾಹಿತಿ ಇಲ್ಲಿದೆ

0 comments
Ram Charan's Wife Net Income

Ram Charan’s Wife Net-Income: RRR ಚಿತ್ರದ ಮೂಲಕ ಹೆಚ್ಚಿನ ಜನಪ್ರಿಯತೆ ಗಳಿಸಿದ ಸ್ಟಾರ್ ನಟ ರಾಮ್ ಚರಣ್‌ ದಕ್ಷಿಣ ಭಾರತದಲ್ಲಿ ಅತೀ ಅಧಿಕ ಸಂಭಾವನೆಯನ್ನು ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ. ಸದ್ಯ ಟಾಲಿವುಡ್​ನ (Tollywood) ಮೆಗಾ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಸೂಪರ್​ಸ್ಟಾರ್​ ರಾಮ್​ಚರಣ್​ (Super star ramcharan) ಅವರ ಪತ್ನಿ ಉಪಾಸನಾ ಅವರು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮೆಗಾ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಈ ಮಧ್ಯೆ ರಾಮ್ ಚರಣ್ ಪತ್ನಿಯ ನಿವ್ವಳ ಆದಾಯ (Ram Charan’s Wife Net-Income) ಎಷ್ಟಿರಬಹುದು? ಎಂಬ ವಿಚಾರ ಹರಿದಾಡುತ್ತಿದೆ. ಹಾಗಾದ್ರೆ ಉಪಾಸನಾ ನಿವ್ವಳ ಆದಾಯವೆಷ್ಟಿದೆ? ತಿಳಿಯೋಣ.

ನಟ ರಾಮ್ ಚರಣ್‌ ನಿವ್ವಳ ಆದಾಯವು ಪ್ರಸ್ತುತ 1,370 ಕೋಟಿ ರೂಪಾಯಿ ಆಗಿದೆ. ರಾಮ್ ಪತ್ನಿ ಉಪಾಸನಾ ಕಾಮಿನೇನಿ ಕೊನಿಡೇಲಾ ಆದಾಯ ಎಷ್ಟಿದೆ ಗೊತ್ತಾ? ಉಪಾಸನಾ ಕಾಮಿನೇನಿ
ನಿವ್ವಳ ಆದಾಯವು 1130 ಕೋಟಿ ರೂಪಾಯಿ ಆಗಿದೆ. ಇನ್ನು ಉಪಾಸನಾ ಕಾಮಿನೇನಿ ಕೊನಿಡೇಲಾ ಹಾಗೂ ರಾಮ್ ಚರಣ್‌ ನಿವ್ವಳ ಆದಾಯವು 2500 ಕೋಟಿ ರೂಪಾಯಿ ಆಗಿದೆ.

ಉಪಾಸನಾ (upasana) ಡಾಮಿನೇಸಿ ಕೊಂಡೇಲಾ ಅಪೋಲೋ ಆಸ್ಪತ್ರೆಯ ಉಪಾಧ್ಯಕ್ಷರು ಹಾಗೂ ಕುಟುಂಬ ಆರೋಗ್ಯ ವಿಮಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿಯೂ ಆಗಿದ್ದಾರೆ. ಅವರ ತಾಯಿ ಶೋಭನಾ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿದ್ದಾರೆ. ತಂದೆ ಅನಿಲ್ ಕಾಮಿನೇನಿ ಕೂಡಾ ಉದ್ಯಮಿಯಾಗಿದ್ದು, ಅವರು ಕೆಇಐ ಗ್ರೂಪ್ ಸಂಸ್ಥಾಪಕರಾಗಿದ್ದಾರೆ.

ಉಪಾಸನಾ ಕಾಮಿನೇನಿಯ ಅಜ್ಜನ ಹೆಸರು ಪ್ರತಾಪ್ ಸಿ ರೆಡ್ಡಿ ಎಂದಾಗಿದ್ದು, ಇವರು ಅಪೋಲೋ ಆಸ್ಪತ್ರೆಗಳ ಅಧ್ಯಕ್ಷರಾಗಿದ್ದಾರೆ.
ಪ್ರತಾಪ್ ಸಿ. ರೆಡ್ಡಿಯು 21,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ. ಅಷ್ಟೇ ಅಲ್ಲ, ಪ್ರತಾಪ್ ದೇಶದ 100 ಬಿಲಿಯನೇ‌ಗಳಲ್ಲಿ ಒಬ್ಬರಾಗಿದ್ದಾರೆ.

ಉಪಾಸನಾ ಕಾಮಿನೇನಿ ಇಂಟರ್‌ನ್ಯಾಶನಲ್ ಬಿಸಿನೆಸ್ ಮಾರ್ಕೆಟಿಂಗ್ ಮತ್ತು ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆದಿದ್ದಾರೆ.
ಆರಂಭದಲ್ಲಿ ಉಪಾಸನಾ ಕುಟುಂಬ ವ್ಯವಹಾರಕ್ಕೆ ಸೇರುವ ಮೊದಲು ಫ್ಯಾಷನ್ ಡಿಸೈನರ್ ಆಗಲು ಬಯಸಿದ್ದರು. ಆದರೆ ಆತಿಥ್ಯ ಕ್ಷೇತ್ರಕ್ಕೆ ಪ್ರವೇಶಿಸಿದ ನಂತರ ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯಲ್ಲಿ ಜನರಲ್ ಮ್ಯಾನೇಜರ್ ಆಗಿ ಸೇರಿಕೊಂಡರು. ಜೊತೆಗೆ ಉಪಾಸನಾ ಬಿ ಪಾಸಿಟಿವ್ ಎಂಬ ಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದಾರೆ.

ಅಂದಹಾಗೆ ರಾಮ್‌ ಚರಣ್‌ ಹಾಗೂ ಉಪಾಸನಾ ಇಬ್ಬರದ್ದೂ ಪ್ರೇಮ ವಿವಾಹ. ಜೂನ್‌ 2012 ರಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಕೆಲವು ದಿನಗಳ ಹಿಂದಷ್ಟೇ ಮೆಗಾ ಕುಟುಂಬಕ್ಕೆ ರಾಜಕುಮಾರಿಯ ಆಗಮನವಾಗಿದೆ. ಮದುವೆ ಆಗಿ 11 ವರ್ಷಗಳ ಬಳಿಕ ರಾಮ್ ಚರಣ್ ದಂಪತಿಗೆ ಹೆಣ್ಣು ಮಗುವಿನ ಜನಿಸಿದ್ದಾಳೆ.

ರಾಮ್‌ಚರಣ್‌ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ, ಇನ್ನೂ ಹೆಸರಿಡದ ತೆಲುಗು ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಇದು ರಾಮ್‌ ಚರಣ್‌ ಅಭಿನಯದ 15ನೇ ಸಿನಿಮಾ. ಜೊತೆಗೆ ಹಿಂದಿ (Hindi) ಚಿತ್ರವೊಂದರಲ್ಲಿ ಅತಿಥಿ ಪಾತ್ರದಲ್ಲಿ ರಾಮ್‌ಚರಣ್‌ ನಟಿಸುತ್ತಿದ್ದಾರೆ.

 

ಇದನ್ನು ಓದಿ: Astrologer Venuswamy: ಸದ್ಯದಲ್ಲೇ ತೆಲುಗಿನ ಈ ಇಬ್ಬರು ಖ್ಯಾತ ಹೀರೋಗಳು ಸಾಯುತ್ತಾರೆ..!! ಟಾಲಿವುಡ್ ಬಗ್ಗೆ ಶಾಕಿಂಗ್ ಭವಿಷ್ಯ ನುಡಿದ ವೇಣು ಸ್ವಾಮಿ!!

You may also like

Leave a Comment