Home » Matte maduve: ‘ಮತ್ತೆ ಮದುವೆ’ಗೆ ಮತ್ತೊಂದು ಸಂಕಷ್ಟ ; ಅಮೆಜಾನ್ ಪ್ರೈಮ್ ಸ್ಟ್ರೀಮಿಂಗ್ ಸ್ಥಗಿತ ! ಕಾರಣ ಏನು ಗೊತ್ತಾ ?!

Matte maduve: ‘ಮತ್ತೆ ಮದುವೆ’ಗೆ ಮತ್ತೊಂದು ಸಂಕಷ್ಟ ; ಅಮೆಜಾನ್ ಪ್ರೈಮ್ ಸ್ಟ್ರೀಮಿಂಗ್ ಸ್ಥಗಿತ ! ಕಾರಣ ಏನು ಗೊತ್ತಾ ?!

0 comments
Matte maduve

Matte maduve: ತೆಲುಗಿನ ನಟ ನರೇಶ್ ಕೃಷ್ಣ (Actor Naresh) ಹಾಗೂ ಪವಿತ್ರಾ ಲೋಕೇಶ್ (Pavitra Lokesh) ಅಭಿನಯದ ‘ಮತ್ತೆ ಮದುವೆ’ (Matte maduve) ಸಿನಿಮಾ ಮೇ 26ರಂದು ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್ ನಲ್ಲಿ ಅಷ್ಟೊಂದು ಗಳಿಕೆ ಮಾಡಲಿಲ್ಲ. ನಿರೀಕ್ಷಿತ ಗೆಲುವು ಕಾಣದ ಈ ಸಿನಿಮಾ ಒಟಿಟಿ ಎಂಟ್ರಿ ನೀಡಿದೆ. ಆದರೆ, ಇಲ್ಲೂ ಚಿತ್ರತಂಡಕ್ಕೆ ಬಿಗ್ ಶಾಕ್ ತಗುಲಿದೆ. ಹೌದು, ಮತ್ತೆ ಮದುವೆ ಚಿತ್ರಕ್ಕೆ ಬಿಗ್‌ ಶಾಕ್ ಬಂದೊದಗಿದೆ. ಅಮೆಜಾನ್ ಪ್ರೈಮ್ ಸ್ಟ್ರೀಮಿಂಗ್ ಸ್ಥಗಿತಗೊಳಿಸಲಾಗಿದೆ. ಇದಕ್ಕೆ ಒಂದು ಕಾರಣವೂ ಇದೆ!.

ನರೇಶ್ (Naresh) ಮತ್ತು ಪವಿತ್ರಾ ಲೋಕೇಶ್ (Pavitra Lokesh)​ ಕಳೆದ ಒಂದು ವರ್ಷದಿಂದ ಭಾರೀ ಸುದ್ಧಿಯಲ್ಲಿದ್ದರು. ಇವರಿಬ್ಬರ ಲಿವಿಂಗ್ ರಿಲೇಶನ್ ಶಿಪ್ (Living Relationship) ಬಗ್ಗೆ ಮಾಧ್ಯಮಗಳು ನಾನಾ ಸುದ್ದಿಗಳನ್ನು ಬಿತ್ತರಿಸಿದ್ದವು. ಇವೆಲ್ಲದಕ್ಕೂ ಟಾಂಗ್ ಕೊಡುವಂತೆ ನರೇಶ್ ‘ಮತ್ತೆ ಮದುವೆ’ (Matte Maduve) ಸಿನಿಮಾ ಮಾಡಿದ್ದಾರೆ. ಅವರ ಜೀವನದಲ್ಲಿ ನಡೆದ ಕೆಲವು ನೈಜ ಘಟನೆಗಳನ್ನು ತಮ್ಮದೇ ಶೈಲಿಯಲ್ಲಿ ಜನರ ಮುಂದೆ ತಂದಿದ್ದಾರೆ. ತೆಲುಗು ಹಾಗೂ ಕನ್ನಡ ಎರಡು ಭಾಷೆಯಲ್ಲಿ ರಿಲೀಸ್ ಆಗಿದ್ದ ಮತ್ತೆ ಮದುವೆ ಸಿನಿಮಾ ಥಿಯೇಟರ್ ನಲ್ಲಿ ಕೆಲ ಕಡೆ ಉತ್ತಮ ಪ್ರದರ್ಶನ ಕಂಡಿದೆ. ಕೆಲವೆಡೆ ಮಕಾಡೆ ಮಲಗಿದೆ.

ಜೂನ್ 23ರಿಂದ ಅಮೇಜಾನ್ ಪ್ರೈಮ್ ನಲ್ಲಿ ಮತ್ತೆ ಮದುವೆ ಸಿನಿಮಾ ಸ್ಟ್ರೀಮಿಂಗ್ ಆಗಲಿತ್ತು. ಆದರೆ, ಇದಕ್ಕೂ ಬ್ರೆಕ್ ಬಿದ್ದಿದೆ. ಕಾರಣ ನರೇಶ್ ಮೂರನೇ ಪತ್ನಿ ರಮ್ಯಾ. ಹೌದು, ಈ ಚಿತ್ರ ಆಹಾ ಮತ್ತು ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್‌ ಆಗಲಿತ್ತು. ಆದರೆ, ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಒಟಿಟಿ ಸ್ಟ್ರೀಮಿಂಗ್ ಕುರಿತು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಸಿನಿಮಾದಲ್ಲಿ ತನಗೆ ಕೀಳರಿಮೆ ತರುವಂತಹ ದೃಶ್ಯಗಳಿವೆ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ.

ರಮ್ಯಾ (Ramya) ಈ ಸಿನಿಮಾ ಮೂಲಕ ತಮ್ಮ ಪ್ರತಿಷ್ಠೆಗೆ ಧಕ್ಕೆಯಾಗುತ್ತಿದೆ ಎಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಹಾಗಾಗಿ ಈ ಚಿತ್ರದ ಸ್ಟ್ರೀಮಿಂಗ್ ನಿಲ್ಲಿಸುವಂತೆ ಕೋರ್ಟ್‌ ನೋಟಿಸ್ ಕಳುಹಿಸಿದೆ. ನೋಟಿಸ್ ಪಡೆದಿರುವ ಅಮೆಜಾನ್ ಪ್ರೈಮ್ (Amazon prime) ‘ಮತ್ತೆ ಮದುವೆ’ಯ ಸ್ಟ್ರೀಮಿಂಗ್ ನಿಲ್ಲಿಸಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆ ಪ್ರಸ್ತುತ ಈ ಸಿನಿಮಾ ಅಮೆಜಾನ್ ನಲ್ಲಿ ಲಭ್ಯವಿಲ್ಲ ಎಂದು ತಿಳಿದುಬಂದಿದೆ.

ನರೇಶ್ ಅವರ ತಾಯಿ, ಹಿರಿಯ ನಟಿ, ನಿರ್ದೇಶಕಿ ವಿಜಯಾ ನಿರ್ಮಲಾ ಅವರು 1973ರಲ್ಲಿ ‘ಸೂಪರ್ ಸ್ಟಾರ್‌’ ಕೃಷ್ಣ ಅವರ ಜತೆಗೂಡಿ ವಿಜಯ ಕೃಷ್ಣ ಮೂವೀಸ್ ಆರಂಭಿಸಿದ್ದರು. ಆ ಬ್ಯಾನರ್‌ಗೆ ಭರ್ತಿ 50 ವರ್ಷ ತುಂಬಿದೆ. ಆ ಹಿನ್ನೆಲೆಯಲ್ಲಿ ಆ ಬ್ಯಾನರ್‌ ಮೂಲಕ ಮತ್ತೆ ಮದುವೆ ಸಿನಿಮಾವನ್ನು ನರೇಶ್ ನಿರ್ಮಾಣ ಮಾಡಿದ್ದರು. ಎಂಎಂಎಸ್ ರಾಜು ನಿರ್ದೇಶಿಸಿದ್ದಾರೆ. ಶರತ್ ಬಾಬು, ಜಯಸುಧಾ, ಅನನ್ಯ ನಾಗೆಲ್ಲ, ವನಿತಾ ವಿಜಯ್ ಕುಮಾರ್ ಮತ್ತು ಮಧು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರ

 

ಇದನ್ನು ಓದಿ: Attempted rape: 11 ತಿಂಗಳ ಪುಟ್ಟ ಕಂದನನ್ನು ರೇಪ್‌ ಮಾಡಿ ಪರಾರಿಯಾದ ಪಕ್ಕದ್ಮನೆಯ 12 ವರ್ಷದ ಅಪ್ರಾಪ್ತ ಬಾಲಕ!

You may also like

Leave a Comment