Home » Railway Recruitment: ನೀವು ಎಸ್ ಎಸ್ಎಲ್ ಸಿ ಪಾಸಾಗಿದ್ದೀರಾ? ಇದೋ ರೈಲ್ವೇ ಇಲಾಖೆಯಲ್ಲಿದೆ ಭರ್ಜರಿ 3624 ಹುದ್ದೆ!

Railway Recruitment: ನೀವು ಎಸ್ ಎಸ್ಎಲ್ ಸಿ ಪಾಸಾಗಿದ್ದೀರಾ? ಇದೋ ರೈಲ್ವೇ ಇಲಾಖೆಯಲ್ಲಿದೆ ಭರ್ಜರಿ 3624 ಹುದ್ದೆ!

0 comments
Railway Recruitment

Railway Recruitment: ನಿರುದ್ಯೋಗಿಗಳಿಗೆ ಭಾರತೀಯ ರೈಲ್ವೆ ಇಲಾಖೆಯು ಸಿಹಿ ಸುದ್ದಿ ಒಂದನ್ನು ನೀಡಿದೆ. ಹೌದು, ರೈಲ್ವೆ ನೇಮಕಾತಿ ಸೆಲ್ (RRC) ಪಶ್ಚಿಮ ರೈಲ್ವೆ ಅಪ್ರೆಂಟಿಸ್ ನಲ್ಲಿ , 3624 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ RRC WR-rrc-wr.com ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಈ ಹುದ್ದೆಗೆ (Railway Recruitment) ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಶೇ.50ರಷ್ಟು ಅಂಕಗಳೊಂದಿಗೆ 10ನೇ ತರಗತಿ ಉತ್ತೀರ್ಣರಾಗಿರಬೇಕು. ಇನ್ನು ಸಂಬಂಧಿತ ಟ್ರೇಡ್‌ನಿಂದ ITI ಪ್ರಮಾಣಪತ್ರವನ್ನು ಪಡೆದಿರಬೇಕು. ಇದಲ್ಲದೆ ಜುಲೈ 26ಕ್ಕೆ ಅಭ್ಯರ್ಥಿಗಳ ವಯಸ್ಸು 18-24 ವರ್ಷಗಳಾಗಿರಬೇಕು.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು100 ರೂ. ಅರ್ಜಿ ಶುಲ್ಕ ಪಾವತಿಸಬೇಕು.
SC/ST/PWD ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದೆ. ಅಭ್ಯರ್ಥಿಗಳು ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್/ಇಂಟರ್ನೆಟ್ ಬ್ಯಾಂಕ್ ಮೂಲಕ ಶುಲ್ಕವನ್ನ ಪಾವತಿಸಬೇಕು.

ಅಭ್ಯರ್ಥಿಗಳ ಆಯ್ಕೆಯು ಅರ್ಹತೆಯ ಆಧಾರದ ಮೇಲೆ ನಡೆಯಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಮತ್ತು ಷರತ್ತುಗಳು ಅನ್ವಯ.

ಮುಖ್ಯವಾಗಿ ರೈಲ್ವೆ ನೇಮಕಾತಿ ಸೆಲ್ (RRC) ಪಶ್ಚಿಮ ರೈಲ್ವೆ ಅಪ್ರೆಂಟಿಸ್ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಇದೇ ತಿಂಗಳ 27ರಿಂದ ಪ್ರಾರಂಭವಾಗಲಿದ್ದು, ಅರ್ಜಿ ಸಲ್ಲಿಸಲು ಜುಲೈ 26 ಕೊನೆಯ ದಿನವಾಗಿದೆ. ಆಸಕ್ತ ಅಭ್ಯರ್ಥಿಗಳು ಆ ದಿನಾಂಕದೊಳಗೆ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು.

ಇತರೆ ಸಂಪೂರ್ಣ ವಿವರಗಳನ್ನು ನೀವು ಅಧಿಸೂಚನೆಯಲ್ಲಿ ನೋಡಬಹುದಾಗಿದೆ.

 

ಇದನ್ನು ಓದಿ: WHO: ಜಗತ್ತಿಗೆ ಹೊಸ ಕಂಟಕ , ನಾಲ್ಕು ವರ್ಷಗಳ ನಂತರ ಮತ್ತೆ ಮರಳುತ್ತಿದೆ ಮಾರಣಾಂತಿಕ ವೈರಸ್ ; WHOನಿಂದ ಎಚ್ಚರಿಕೆಯ ಕರೆ!

You may also like

Leave a Comment