Home » Rain: ರಾಜ್ಯದ ಜನತೆಗೆ ಸೇರಿ ರೈತರಿಗಿದೆ ಮಳೆಯ ಕುರಿತಾದ ಶಾಕಿಂಗ್‌ ಮಾಹಿತಿ!!!

Rain: ರಾಜ್ಯದ ಜನತೆಗೆ ಸೇರಿ ರೈತರಿಗಿದೆ ಮಳೆಯ ಕುರಿತಾದ ಶಾಕಿಂಗ್‌ ಮಾಹಿತಿ!!!

0 comments
Rain

Rain: ಪ್ರಮುಖ ಕೃಷಿ ವಿವಿಗಳು ರೈತರಿಗೆ ದೀರ್ಘಾವಧಿ ಬೆಳೆಗಳ ಬದಲಿಗೆ ಅಲ್ಪಾವಧಿ ಬೆಳೆಗಳಿಗೆ ಗಮನಹರಿಸುವಂತೆ ಸಲಹೆ ನೀಡಲಾಗಿದೆ. ಹೌದು, ಪೆಸಿಫಿಕ್ ಮಹಾಸಾಗರದಲ್ಲಿ ಎಲ್ ನೀನೋ ಪರಿಸ್ಥಿತಿಯಿಂದಾಗಿ ರಾಜ್ಯ ಮತ್ತು ದೇಶದಲ್ಲಿ ಮುಂದಿನ ನಾಲ್ಕೈದು ವರ್ಷ ಮಳೆ ಕೊರತೆಯಾಗುವ ಸಂಭವವಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಪೆಸಿಫಿಕ್ ಮಹಾಸಾಗರದಲ್ಲಿನ ಪರಿಸ್ಥಿತಿ ವಿಶ್ವದ ಅನೇಕ ಭಾಗಗಳಲ್ಲಿ ಮಳೆಯ (Rain) ಪ್ರಮಾಣ ನಿರ್ಧರಿಸುತ್ತದೆ. ಅಂತೆಯೇ ಮಹಾಸಾಗರದ ಉಷ್ಣಾಂಶದಲ್ಲಿನ ವ್ಯತ್ಯಾಸದಿಂದ ಉಂಟಾಗುವ ಎಲ್ ನೀನೋ ಮತ್ತು ಲಾ ನೀನೋ ಪರಿಸ್ಥಿತಿಗಳು ಮಳೆ ಕೊರತೆ ತರಲಿವೆ.

ಪೆಸಿಫಿಕ್ ಮಹಾಸಾಗರದಲ್ಲಿ ಉಷ್ಣಾಂಶ ಜಾಸ್ತಿಯಾಗಿ ಮಳೆಯ ಮಾರುತ ದಿಕ್ಕು ಬದಲಿಸುವ ಪರಿಸ್ಥಿತಿಯನ್ನು ಎಲ್ ನೀನೋ ಎಂದು ಕರೆಯಲಾಗುತ್ತದೆ ಈ ಪರಿಸ್ಥಿತಿಯಲ್ಲಿ ಮಾರುತಗಳು ಅಮೆರಿಕಕ್ಕೆ ತೆರಳುತ್ತದೆ. ಏಷ್ಯಾ ಮತ್ತು ಆಸ್ಟ್ರೇಲಿಯಾದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ.

ಮುಂದಿನ ನಾಲೈದು ವರ್ಷ ಲಾ ನೀನೋ ಪರಿಸ್ಥಿತಿ ಸೃಷ್ಟಿಯಾಗಿ ಉಷ್ಣಾಂಶ ಕಡಿಮೆಯಾದಾಗ ಮಳೆ ಮಾರುತಗಳು ಏಷ್ಯಾ ಮತ್ತು ಆಸ್ಟ್ರೇಲಿಯಾ ಭಾಗಕ್ಕೆ ಬರುತ್ತವೆ. ಈ ಹಿನ್ನೆಲೆ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ.

ಎಲ್ ನಿನೊವನ್ನು ಸಾಮಾನ್ಯವಾಗಿ ಬೆಚ್ಚಗಿನ ಹಂತ ಎಂದು ಕರೆಯಲಾಗುತ್ತದೆ ಮತ್ತು ಲಾ ನಿನಾವನ್ನು ENSO ನ ಶೀತ ಹಂತ ಎಂದು ಕರೆಯಲಾಗುತ್ತದೆ. ಸಾಮಾನ್ಯ ಮೇಲ್ಮೈ ತಾಪಮಾನದಿಂದ ಈ ವಿಚಲನಗಳು ಜಾಗತಿಕ ಹವಾಮಾನ ಪರಿಸ್ಥಿತಿಗಳು ಮತ್ತು ಒಟ್ಟಾರೆ ಹವಾಮಾನದ ಮೇಲೆ ದೊಡ್ಡ ಪ್ರಮಾಣದ ಪ್ರಭಾವವನ್ನು ಬೀರಬಹುದು.

ಮಾಹಿತಿ ಪ್ರಕಾರ ಜೂನ್, ಜುಲೈ ಮತ್ತು ಆಗಸ್ಟ್ ನಲ್ಲಿ ಶೇಕಡ 3 -4 ರಷ್ಟು ಕಡಿಮೆ ಮಳೆಯಾಗುತ್ತದೆ, ಸೆಪ್ಟೆಂಬರ್ ನಲ್ಲಿತೀರಾ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

 

ಇದನ್ನು ಓದಿ: YouTuber Nikhil: ಕುಡಿದು ಕಿರಿಕ್ ಮಾಡಿ ಗಲಾಟೆ ಮಾಡಿದ ಯೂಟ್ಯೂಬರ್! ವೀಡಿಯೋ ವೈರಲ್!!! 

You may also like

Leave a Comment