PM Modi-John Cena: ಅಮೆರಿಕಾದ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿಯವರು 16 ಬಾರಿ WWE ವಿಶ್ವ ಚಾಂಪಿಯನ್ ಆಗಿ ವಿಶ್ವದೆಲ್ಲೆಡೆ ಜನಪ್ರಿಯತೆ ಗಳಿಸಿರುವ ಜಾನ್ ಸೀನಾ (John Cena) ರೀತಿ ಫೋಟೋ ಪೋಸ್ ಕೊಟ್ಟಿದ್ದಾರೆನ್ನಲಾದ ಫೋಟೋ ಒಂದು ವೈರಲ್ ಆಗಿದ್ದು, ಸ್ವತಃ ಜಾನ್ ಸೀನಾ ಅವರೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಫೋಟೋವನ್ನ ಹಂಚಿಕೊಂಡಿದ್ದಾರೆ.
ಹೌದು, ಅಮೆರಿಕ ಪ್ರವಾಸ ಕೈಗೊಂಡಿದ್ದ ಮೋದಿ ಅಧ್ಯಕ್ಷ ಜೋ ಬೈಡೆನ್(joe Biden) ಮತ್ತು ಪ್ರಥಮ ಮಹಿಳೆ ಜಿಲ್(Jil Biden) ಬೈಡೆನ್ ಅವರೊಂದಿಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ಸೆರೆಹಿಡಿದಂತಹ ಫೋಟೋ ಒಂದನ್ನು ವೃತ್ತಿಪರ ಕುಸ್ತಿಪಟು ಮತ್ತು ಡಬ್ಲ್ಯುಡಬ್ಲ್ಯುಇ ಸ್ಟಾರ್ ಜಾನ್ ಸೇನಾ(PM Modi-John Cena) ಅವರು ಇನ್ಸ್ಟಾಗ್ರಾಂನಲ್ಲಿ(Instagram) ಶೇರ್ ಮಾಡಿಕೊಂಡಿದ್ದು, ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಪ್ರಧಾನಿ ಮೋದಿ, ಜೋ ಬೈಡನ್ ಹಾಗೂ ಜಿಲ್ ಬೈಡನ್ ಅವರೊಂದಿಗೆ ಮಾತನಾಡುತ್ತಿದ್ದ ವೇಳೆ ಜಾನ್ ಸೀನಾ(Jhon Cena) ಸ್ಟೈಲ್‌ನಲ್ಲಿ ಆಕ್ಷನ್ ಮಾಡಿರುವುದು ಕಂಡುಬಂದಿದೆ. ಜಾನ್ ಸೇನಾ ಶೇರ್ ಮಾಡಿಕೊಂಡಿರುವ ಫೋಟೋದಲ್ಲಿ ಪ್ರಧಾನಿ ಮೋದಿ ತಮ್ಮ ಅಂಗೈ ಅನ್ನು ತೋರಿಸುತ್ತಿದ್ದಾರೆ. ಈ ಫೋಟೋವನ್ನ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಸೀನಾ `ನೀವು ನನ್ನನ್ನ ನೋಡಲು ಸಾಧ್ಯವಿಲ್ಲ’ ಎಂದು ಬರೆದುಕೊಂಡಿದ್ದಾರೆ.
ಸದ್ಯ ಜಾಲತಾಣದಲ್ಲಿ ಈ ಫೋಟೋ ಭಾರೀ ಸದ್ದು ಮಾಡುತ್ತಿದ್ದು, 4 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಈ ಫೋಟೋಗೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು `ಮೋದಿ ರಿಯಲ್ ಚಾಂಪಿಯನ್’(Modi real champion) ಎಂದು ಹೊಗಳಿದ್ದಾರೆ. ಡಬ್ಲ್ಯುಡಬ್ಲ್ಯುಇ ಇಂಡಿಯಾ ಕೂಡ ಜಾನ್ ಸೇನಾ ಶೇರ್ ಮಾಡಿಕೊಂಡಿರುವ ಫೋಟೋಗೆ ಬಾವುಟಗಳು ಮತ್ತು ಹ್ಯಾಂಡ್ಶೇಕ್ ಎಮೋಜಿಯೊಂದಿಗೆ ಪ್ರತಿಕ್ರಿಯೆ ನೀಡಿದೆ. ಇಬ್ಬರ ಫೋಟೋವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗುತ್ತಿದೆ.
ಅಂದಹಾಗೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ್ದರು. ಅದಕ್ಕೂ ಮುನ್ನಾ ದಿನ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದರ ಗೌರವಾರ್ಥವಾಗಿ ಅಧ್ಯಕ್ಷ ಜೋ ಬೈಡನ್ ಆಯೋಜಿಸಿದ್ದ ಬೃಹತ್ ಔತಣ ಕೂಟದಲ್ಲಿ ಭಾಗಿಯಾಗಿದ್ದರು. ಅಲ್ಲದೆ, ವಿಶ್ವದ ನಂಬರ್ 1 ಶ್ರೀಮಂತ ಉದ್ಯಮಿ ಹಾಗೂ ಟೆಸ್ಲಾ ಸಿಇಒ ಮತ್ತು ಟ್ವಿಟರ್ ಮಾಲೀಕ ಎಲನ್ ಮಸ್ಕ್ ಸೇರಿದಂತೆ ಉದ್ಯಮಿಗಳು ಹಾಗೂ ವಿವಿಧ ಕ್ಷೇತ್ರದ ಗಣ್ಯರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಯುಎಸ್ ಸರ್ಕಾರದ ಜತೆ ಅನೇಕ ಒಪ್ಪಂದಗಳಿಗೂ ಸಹಿ ಹಾಕಿದ್ದಾರೆ.
