Home » CM Siddaramaiah: ‘ಆ ಒಂದು ಕಾರಣಕ್ಕೆ ನಾನು ಮೊಬೈಲ್ ಯೂಸ್ ಮಾಡಲ್ಲ’ !! ಕೊನೆಗೂ ಫೋನ್ ಬಳಸದಿರೋ ಕಾರಣ ಬಿಚ್ಚಿಟ್ಟ ಸಿಎಂ ಸಿದ್ದು!!

CM Siddaramaiah: ‘ಆ ಒಂದು ಕಾರಣಕ್ಕೆ ನಾನು ಮೊಬೈಲ್ ಯೂಸ್ ಮಾಡಲ್ಲ’ !! ಕೊನೆಗೂ ಫೋನ್ ಬಳಸದಿರೋ ಕಾರಣ ಬಿಚ್ಚಿಟ್ಟ ಸಿಎಂ ಸಿದ್ದು!!

by ಹೊಸಕನ್ನಡ
0 comments
CM Siddaramaiah

CM siddaramaiah: ಸಿಎಂ ಸಿದ್ದರಾಮಯ್ಯನವರು(CM siddaramaiah) ಇಂದಿಗೂ ತಾನು ಮೊಬೈಲ್ ಬಳಸೋದಿಲ್ಲ, ನನ್ನ ಬಳಿ ಆಧಾರ್ ಕಾರ್ಡ್(Adhar card), ಪಾನ್ ಕಾರ್ಡ್(Pan card) ಏನೂ ಇಲ್ಲ ಎಂದು ಹೇಳಿದ್ದ ವಿಡಿಯೋ ಒಂದು ಕಳೆದ ವರ್ಷ ಸಾಕಷ್ಟು ವೈರಲ್ ಆಗಿತ್ತು. ಜೊತೆಗೆ ಸಾಕಷ್ಟು ಟ್ರೋಲ್ ಕೂಡ ಆಗಿತ್ತು. ಆದರೀಗ ಸಿದ್ದರಾಮಯ್ಯ ಅವರು ತಾನೇಕೆ ಮೊಬೈಲ್ ಬಳಸೋದಿಲ್ಲ ಅನ್ನೋದ್ರು ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ.

ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ ತಾನು ಮೊಬೈಲ್(Mobile phone)ಬಳಕೆ ಮಾಡುವುದಿಲ್ಲ ಎಂದು ಆಗಾಗ ಹೇಳುತ್ತಿರುತ್ತಾರೆ. ಹೀಗಾಗಿ ಪ್ರತಿಯೊಂದರಲ್ಲೂ ತುಂಬಾನೇ ಅಪ್ಡೇಟ್ ಇರೋ ಸಿದ್ದು, ಮೊಬೈಲ್ ಯಾಕೆ ಬಳಸುತ್ತಿಲ್ಲ ಎಂಬ ಬಗ್ಗೆ ಸಾಕಷ್ಟು ಜನರಿಗೆ ಕುತೂಹಲ ಇದ್ದೇ ಇದೆ! ಈ ಬಗ್ಗೆ ಸಿಎಂ ಸ್ಪಷ್ಟನೆ ಕೊಟ್ಟಿದ್ದು, ಯಾಕೆ ಫೋನ್ ಉಪಯೋಗಿಸುತ್ತಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಅಂದಹಾಗೆ ಬೆಂಗಳೂರಿನಲ್ಲಿ(Benglore) ನೂತನ ಶಾಸಕರಿಗೆ(New MLA) ತರಭೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ತರಬೇತಿ ಶಿಬಿರದಲ್ಲಿ ಸಿಎಂ ಸಿದ್ದರಾಮಯ್ಯನವರಿಗೆ ‘ ನೀವು 40 ವರ್ಷದಿಂದ ರಾಜಕೀಯ ಜೀವನದಲ್ಲಿದ್ದೀರಾ. ಆದ್ರೂ ಮೊಬೈಲ್ ಬಳಕೆ ಯಾಕೆ ಮಾಡುತ್ತಿಲ್ಲ’ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ಸಿದ್ದು ‘ಮೊಬೈಲ್ ಬಳಸೇ ಇಲ್ಲ ಅಂತ ಇಲ್ಲ. ಮೊಬೈಲ್ ಸಾಕಷ್ಟು ಫೇಮಸ್ ಆದಾಗ 7-8 ತಿಂಗಳು ಬಳಸಿದ್ದೆ. ಈ ವೇಳೆ ಕೆಲವರು ರಾತ್ರಿಯೆಲ್ಲ ಫೋನ್(Phone) ಮಾಡುತ್ತಿದ್ದರು. ಕೆಲವರು ಕುಡಿದ ಮತ್ತಿನಲ್ಲಿ ಕರೆ ಮಾಡಿ ತೊಂದರೆ ಕೊಡುತ್ತಿದ್ದರು. ಇದರಿಂದ ಕಿರಿಕಿರಿ ಅನುಭವಿಸಬೇಕಾಗಿ ಬಂತು. ಹೀಗಾಗಿ ಮೊಬೈಲ್ ಬಳಕೆ ಮಾಡುವುದನ್ನೇ ನಿಲ್ಲಿಸಿಬಿಟ್ಟೆ’ ಎಂದು ಹೇಳಿದ್ದಾರೆ.

ಹಾಗಾದರೆ ಯಾರಿಗಾದರು ಕಾಲ್ ಮಾಡುವುದಾದರೆ ಏನು ಮಾಡುತ್ತೀರಾ? ಎಂದು ಪ್ರಶ್ನೆ ಕೇಳಲಾಗಿದೆ. ಒಂದು ರಾಜ್ಯದ ಮುಖ್ಯಮಂತ್ರಿ ಮೊಬೈಲ್ ಬಳಸೋಲ್ಲ, ಹಾಗಿದ್ರೆ ಫೋನ್ ಮಾಡಲು ಏನು ಮಾಡುತ್ತಾರೆ ಎಂಬ ಪ್ರಶ್ನೆ ಸಹಜ. ಇದಕ್ಕೆ ಉತ್ತರಿಸಿದ ಅವರು ‘ನನ್ನ ಬಳಿ ವೈಯಕ್ತಿಕವಾಗಿ ಫೋನ್ ಇಲ್ಲ. ನಮ್ಮ ಅಧಿಕಾರಿಗಳು, ಆಪ್ತಸಹಾಯಕರ ಫೋನ್ ಬಳಕೆ ಮಾಡುತ್ತೇನೆ’ ಎಂದು ತಿಳಿಸಿದರು.

You may also like

Leave a Comment