Congress vs BJP: ಕರ್ನಾಟಕದಲ್ಲಿ ಕಾಂಗ್ರೆಸ್ ಐದು ಘೋಷಣೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿ ಪ್ರತಿಯೊಬ್ಬರಿಗೂ 10 ಅಕ್ಕಿ ನೀಡುವ ಭರವಸೆ ನೀಡಿದೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಅಕ್ಕಿ ಕೊಡಿ ಎಂದು ಕೇಳಿತ್ತು. ಆದರೆ ಕೇಂದ್ರ ಅಕ್ಕಿ ನೀಡುವುದಾಗಿ ಈ ಹಿಂದೆ ಹೇಳಿತ್ತು ಆದ್ರೆ ಕಾಂಗ್ರೆಸ್ ಘೋಷಣೆ ಬಳಿಕ ನಿರಾಕರಿಸಿದೆ. ವಿಚಾರವಾಗಿ ರಾಜ್ಯ ರಾಜಕೀಯಲ್ಲಿ ಭಾರೀ ಚರ್ಚೆಯಾಗುತ್ತಿದ್ದ ಬೆನ್ನಲ್ಲೆ ಕಾಂಗ್ರೆಸ್ ತಮ್ಮ ಅಧಿಕೃತ ಟ್ಟಿಟ್ಟರ್‌ನಲ್ಲಿ (Congress vs BJP) ಟ್ವೀಟ್ ಮಾಡಿದ್ದು, ಕೇಂದ್ರ ಆಹಾರ ನಿಗಮದ ಕರ್ನಾಟಕದ ಗೋದಾಮುಗಳಲ್ಲಿರುವ ಅಕ್ಕಿ ಕರ್ನಾಟಕದ್ದೇ,
ಕರ್ನಾಟಕದಲ್ಲೇ ಬೆಳೆದ ಅಕ್ಕಿಯನ್ನು ಕನ್ನಡಿಗರಿಗೆ ನೀಡಲು ನಿರಾಕರಿಸುತ್ತಿರುವುದೇಕೆ? ಕರ್ನಾಟಕದ ಗೋದಾಮುಗಳಲ್ಲಿ ಸುಮಾರು 6.5 ಲಕ್ಷ ಟನ್ ಅಕ್ಕಿ ಇದೆ, ನಾವು ಕೇಳುತ್ತಿರುವುದು 1.66 ಲಕ್ಷ ಟನ್. ಕನ್ನಡಿಗರೇ ಬೆಳೆದ, ಕರ್ನಾಟಕದಲ್ಲೇ ಇರುವ ಅಕ್ಕಿಯನ್ನು ಕರ್ನಾಟಕದವರಿಗೆ ಕೊಡುವುದಿಲ್ಲ ಎಂದರೆ ಇದು ಸರ್ವಾಧಿಕಾರದ ಪರಮಾವಧಿಯಲ್ಲವೇ? ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
https://twitter.com/INCKarnataka/status/1673329819386257409?s=20
ಈ ಕುರಿತು ಕಾಂಗ್ರೆಸ್ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿದ್ದು, ಬಾಂಬೆ ಟೀಮ್ ಈಗ ಬಿಜೆಪಿಯಲ್ಲಿ ಅನಾಥರ ಟೀಮ್ ಆಗಿದೆ. “ವಲಸಿಗ vs ಮೂಲ” ಎಂಬ ಒಳಬೇಗುದಿಗೆ ಈಶ್ವರಪ್ಪ ತುಪ್ಪ ಸುರಿದಿದ್ದಾರೆ, ವಲಸೆ ಬಂದವರಿಂದಲೇ ಶಿಸ್ತು ಮಾಯವಾಗಿದೆ ಎಂಬ ಹೇಳಿಕೆಯನ್ನು ಒಪ್ಪಿಕೊಳ್ಳುತ್ತೀರಾ ಅಥವಾ ಈಶ್ವರಪ್ಪರನ್ನೇ ಬಾಯಿ ಮುಚ್ಚಿಸುತ್ತೀರಾ ಬಿಜೆಪಿ ? ನಾಯಕನಿಲ್ಲದ ಬಿಜೆಪಿ, ನಾವಿಕನಿಲ್ಲದ ಹಡಗಿನಂತಾಗಿ ಮುಳುಗಿದೆ, ನೆಲ ಕಚ್ಚುವುದೊಂದೇ ಬಾಕಿ ಎಂದು ಹೇಳಲಾಗಿದೆ.
https://twitter.com/INCKarnataka/status/1673280554635235328?s=20
ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ಕುರ್ಚಿಯ ಮೇಲೆ ಹತ್ತಾರು ಟವೆಲ್ ಗಳು ಬಿದ್ದಿವೆ. ಹುದ್ದೆಯ ಆಸೆಗಾಗಿಯೇ ಪರಸ್ಪರ ಹೊಂದಾಣಿಕೆ ರಾಜಕೀಯದ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ದಲಿತರನ್ನು ಅಧ್ಯಕ್ಷರನ್ನಾಗಿ ಮಾಡುವಂತೆ ಕೂಗೆದ್ದಿದೆ, ಆದರೆ ಇದು ವಿಫಲ ಕೂಗು, ಬಿಜೆಪಿಯ ಗರ್ಭಗುಡಿಗೆ ದಲಿತರಿಗೆ ಪ್ರವೇಶವಿಲ್ಲ. ದಲಿತರಿಗೆ ಉನ್ನತ ಸ್ಥಾನ ನೀಡಿ ಬಿಜೆಪಿ ತನ್ನ ದಲಿತವಿರೋಧಿ ಕೃತ್ಯಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ ಎಂದಿದ್ದಾರೆ.
https://twitter.com/INCKarnataka/status/1673266845993021440?s=20
