Home » Earthquake: ಕರ್ನಾಟಕದಲ್ಲಿ ಭೂಕಂಪ: ಭಯದಿಂದ ಹೊರಕ್ಕೆ ಓಡಿ ಬಂದ ಜನ

Earthquake: ಕರ್ನಾಟಕದಲ್ಲಿ ಭೂಕಂಪ: ಭಯದಿಂದ ಹೊರಕ್ಕೆ ಓಡಿ ಬಂದ ಜನ

0 comments
Earthquake

Earthquake: ಈಗಾಗಲೇ ಭೂಮಿ ಕಂಪನ ಹಲವಾರು ಕಡೆ ಅನುಭವ ಆಗಿದ್ದು ಕೇಳಿರಬಹುದು. ಇದೀಗ ಕರ್ನಾಟಕ ಹಾಸನದ (Hassan) ಜನರಿಗೆ ಭಯದ ವಾತಾವರಣ ಕಾಡಿದೆ. ಹೌದು, ಹಾಸನದ ವಿವಿಧೆಡೆ ಮಂಗಳವಾರ ಬೆಳಗ್ಗೆ ಭೂಮಿ ಕಂಪಿಸಿದ (Earthquake) ಅನುಭವ ಆಗಿದ್ದು, ಘಟನೆಯಿಂದ ಜಿಲ್ಲೆಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

ಹಾಸನ ಜಿಲ್ಲೆಯ ಅರಕಲಗೂಡು (Arkalgud) ಪಟ್ಟಣದ ಅಲ್ಲಲ್ಲಿ ಬೆಳಿಗ್ಗೆ 10:25ರ ವೇಳೆಗೆ ಕಂಪನದ ಅನುಭವವಾಗಿದೆ. ಇನ್ನೂ ಕೆಲವು ಕಡೆ 10:34ರ ಸಮಯದಲ್ಲಿ ಭೂಮಿ ಕಂಪಿಸಿದೆ. ಭೂಕಂಪದ ಭಯದಿಂದ ಜನರು ಮನೆಯ ಒಳಗೆ ಹೋಗದೆ ಬಹಳಷ್ಟು ಸಮಯ ಹೊರಗಡೆ ಕಾದು ಕುಳಿತಿದ್ದರು.

ಸದ್ಯ ಭೂ ವಿಜ್ಞಾನಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಕಂಪನಕ್ಕೆ ಕಾರಣ ಏನು? ಕಂಪನದ ತೀವ್ರತೆ ಹಾಗೂ ಬೇರೆ ಏನಾದರೂ ಕಾರಣ ಇದೆಯೇ ಎಂದು ಪರಿಶೀಲನೆ ನಡೆಸುತ್ತಿದ್ದು, ಅಧ್ಯಯನ ನಂತರ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ. ಸದ್ಯ ಭೂಕಂಪನದ ತೀವ್ರತೆ ರಿಕ್ಟರ್‌ ಮಾಪಕದಲ್ಲಿ ಕಂಡುಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

You may also like

Leave a Comment