Home » Narendra Modi: ಮೋದಿ ಹೆಸರಿಗೆ ತನ್ನ 25 ಎಕ್ರೆ ಜಮೀನು ಬರೆಯಲು ಸಿದ್ಧವಾದ 100 ವರ್ಷದ ಅಜ್ಜಜ್ಜಿ

Narendra Modi: ಮೋದಿ ಹೆಸರಿಗೆ ತನ್ನ 25 ಎಕ್ರೆ ಜಮೀನು ಬರೆಯಲು ಸಿದ್ಧವಾದ 100 ವರ್ಷದ ಅಜ್ಜಜ್ಜಿ

0 comments
Narendra Modi

Narendra Modi: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಇಡೀ ವಿಶ್ವದ ಮನ್ನಣೆ ಪಡೆದ ಮಹಾನಾಯಕ ಆಗಿದ್ದಾರೆ. ಈ ನಾಯಕನಿಗೆ ದೇಶ ವಿದೇಶಗಳಲ್ಲಿ ಅಭಿಮಾನಿಗಳಿದ್ದಾರೆ. ಇದೀಗ ಇಲ್ಲೊಬ್ಬಳು ವೃದ್ಧೆ ಮಾತ್ರ ಮೋದಿ ಕುರಿತಾಗಿ ಅಪಾರ ಪ್ರಮಾಣದ ಅಭಿಮಾನ ಮತ್ತು ಗೌರವ ಇಟ್ಟುಕೊಂಡಿದ್ದಾರೆ.

ಹೌದು, ಮಧ್ಯಪ್ರದೇಶದ ರಾಜ್‌ಗಢ್ ಜಿಲ್ಲೆಯ ಹರಿಪುರ ಗ್ರಾಮದಲ್ಲಿ ವಾಸವಾಗಿರುವ 100 ವರ್ಷದ ಮಂಗಿಬಾಯಿ ತನ್ವಾರ್​ ಮೋದಿಗಾಗಿ ತನ್ನೆಲ್ಲ ಜಮೀನ್ನು ನೀಡಲು ಮುಂದಾಗಿದ್ದಾರೆ.

ಹಾಗಂತ ಆಕೆಗೆ ಮಕ್ಕಳಿಲ್ಲ ಎಂದು ಭಾವಿಸಬೇಡಿ. ಆಕೆಗೆ ಒಂದಲ್ಲ ಎರಡಲ್ಲ 14 ಮಕ್ಕಳಿದ್ದಾರೆ. ಆದರೆ ಆಕೆಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿಯವರನ್ನು ನನ್ನ 15ನೇ ಮಗ ಎಂದು ಪರಿಗಣಿಸುತ್ತೇನೆ. ಅವರು ದೇಶಕ್ಕಾಗಿ ಸಾಕಷ್ಟು ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿನ್ನೆಲೆ ತಮ್ಮ 25 ಎಕರೆ ಜಮೀನನ್ನು ಮೋದಿಗೆ ನೀಡುತ್ತೇನೆಂದು 100 ವರ್ಷದ ಮಂಗಿಬಾಯಿ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಕುರಿತಾಗಿ ಮಾತನಾಡಿದ ವೃದ್ಧೆ, ಮೋದಿಯನ್ನು ಟಿವಿಯಲ್ಲಿ ಹಲವು ಬಾರಿ ನೋಡಿದ್ದೇನೆ. ಮೋದಿ ನನಗೆ ಮನೆ ಕೊಟ್ಟರು. ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ಮೋದಿ ಅಷ್ಟೊಂದು ಸೌಲಭ್ಯ ಕೊಟ್ಟಿದ್ದರಿಂದ ಹಣ ಉಳಿಸಿ ತೀರ್ಥಯಾತ್ರೆಗೆ ತೆರಳಲು ಸಾಧ್ಯವಾಯಿತು. ಅವಕಾಶ ಸಿಕ್ಕರೆ ಸ್ವತಃ ಮೋದಿಯವರನ್ನು ಭೇಟಿ ಮಾಡುತ್ತೇನೆ, ಇದು ನನ್ನ ಕೊನೆಯ ಆಸೆ ಎಂದು ಅಜ್ಜಿ ಹೇಳಿದ್ದಾರೆ.

You may also like

Leave a Comment