Bigg Boss: ‘ಬಿಗ್ ಬಾಸ್’ ಎಲ್ಲಾ ಭಾಷೆಗಳಲ್ಲೂ ಜನಪ್ರಿಯತೆ ಪಡೆದುಕೊಂಡಿರೋ ರಿಯಾಲಿಟಿ ಶೋ. ಮಲಯಾಳಂ, ಕನ್ನಡ, ತೆಲುಗು, ತೆಲುಗು ಸೇರಿ ಅನೇಕ ಭಾಷೆಗಳಲ್ಲಿ ಈ ಶೋ ನಡೆಸಲಾಗುತ್ತಿದೆ. ಇದೀಗ ಹಿಂದಿ ಬಿಗ್ ಬಾಸ್ (Bigg Boss) ಹೊಸ ತಿರುವು ಪಡೆದುಕೊಂಡಿದೆ.
ಈಗಾಗಲೇ ‘ಹಿಂದಿ ಬಿಗ್ ಬಾಸ್ ಒಟಿಟಿ 2’ (Bigg Boss OTT 2) ಆರಂಭ ಆಗಿದೆ. ಎರಡನೇ ವಾರಕ್ಕೆ ಕಾಲಿಟ್ಟಿರುವ ಈ ಶೋ ಸಾಕಷ್ಟು ಸುದ್ದಿ ಆಗುತ್ತಿದೆ. ಸದ್ಯ ಮನೆಯಲ್ಲಿ ಹೈಡ್ರಾಮಾ ಮಧ್ಯೆ, ಮಹಿಳಾ ಸ್ಪರ್ಧಿಯ ಖಾಸಗಿ ಭಾಗವನ್ನು ಮುಟ್ಟಿದ ಆರೋಪ ಪುರುಷ ಸ್ಪರ್ಧಿಯ ಮೇಲೆ ಬಂದಿದ್ದು, ಈ ವಿಡಿಯೋ ವೈರಲ್ ಆಗುತ್ತಿದೆ.
ಈ ಬಾರಿ ಹಲವು ಸೆಲೆಬ್ರಿಟಿಗಳು ಬಿಗ್ ಬಾಸ್ ಮನೆ ಒಳಗೆ ತೆರಳಿದ್ದಾರೆ. ಮಾಡೆಲ್ಗಳು, ನಟರು, ಕಲಾವಿದರು ಕೂಡ ಇದ್ದಾರೆ. ಈ ಪೈಕಿ ಮಾಡೆಲ್ ಜದ್ ಹದೀದ್ ಅವರ ವರ್ತನೆ ಬಗ್ಗೆ ಅನೇಕರಿಂದ ಟೀಕೆ ವ್ಯಕ್ತವಾಗಿದೆ. ಜದ್ ಹಾಗೂ ಆಕಾಂಕ್ಷಾ ಮಧ್ಯೆ ಯಾವುದೋ ವಿಚಾರಕ್ಕೆ ಮಾತುಕತೆ ನಡೆಯುತ್ತಾ ಇತ್ತು. ಈ ವೇಳೆ ಆಕಾಂಕ್ಷಾ ಅವರನ್ನು ಜದ್ ಎಳೆದುಕೊಂಡಿದ್ದಾರೆ. ಜದ್ ಅವರ ಕೈ ಎಲ್ಲೆ ಮೀರಿದ್ದು ಆಕಾಂಕ್ಷಾಗೆ ಅರ್ಥವಾಗಿದೆ. ‘ಆ ರೀತಿ ಮಾಡಬೇಡಿ. ನನಗೆ ಯಾರಾದರೂ ಮುಟ್ಟಿದರೆ ಆಗುವುದಿಲ್ಲ’ ಎಂದು ಹೇಳಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಇದನ್ನು ನೋಡಿ ಹಲವರು ಜದ್ ವಿರುದ್ಧ ಕಿಡಿಕಾರಿದ್ದಾರೆ. ಅನೇಕರು ಬಿಗ್ ಬಾಸ್ ಶೋ ವಿರುದ್ಧ ಕೋಪಗೊಂಡಿದ್ದಾರೆ. ಶೋ ಆರಂಭಕ್ಕೂ ಮೊದಲು ಮಾತನಾಡಿದ್ದ ಸಲ್ಮಾನ್ ಖಾನ್ ಯಾವುದೂ ಮಿತಿ ಮೀರದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದರು. ಅನೇಕರು ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಒಟ್ಟಿನಲ್ಲಿ ಬಿಗ್ ಬಾಸ್ ವಿವಾದ ಒಂದಲ್ಲಾ ಒಂದು ರೀತಿಯಲ್ಲಿ ಹುಟ್ಟಿಕೊಳ್ಳುತ್ತಲೇ ಇರುತ್ತದೆ. ನಾನಾ ರೀತಿಯ ವ್ಯಕ್ತಿತ್ವ ಹೊಂದಿರುವ ನಾನಾ ಜನಗಳು ಒಂದೇ ಮನೆಯಲ್ಲಿ ಅಡ್ಜೆಸ್ಟ್ ಆಗಲು ಶತ ಪ್ರಯತ್ನ ಮಾಡಿದರೂ ತಾಳ್ಮೆ ಕೆಡದೆ ಇರಲು ಸಾಧ್ಯವೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಇದೆ. ಸದ್ಯ ಒಂದು ಸಣ್ಣ ವಿಚಾರ, ನೋಡುವ ಅಭಿಮಾನಿ ಕಣ್ಣಿಗೆ ಹೇಗೆ ಕಾಣಬಹುದು ಎಂಬುದು ಒಂದು ದೊಡ್ಡ ಪ್ರಶ್ನೆ ಬಿಗ್ ಬಾಸ್ ಸ್ಪರ್ಧಿಗಳಲ್ಲಿ ಇದ್ದೇ ಇದೆ.
https://www.instagram.com/reel/Ct134wTgaB0/?utm_source=ig_web_copy_link&igshid=MjAxZDBhZDhlNA==
