Accident: ಎರಡು ಲಾರಿಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ, ಒಂದು ಲಾರಿಯ ಚಾಲಕನು(Accident) ಸುಮಾರು 2 ಗಂಟೆಗೂ ಹೆಚ್ಚುಕಾಲ ಹೊರಬರಲಾರದೆ ಒಳಗೆ ಸಿಲುಕಿಕೊಂಡ ಘಟನೆ ಫತೇಪುರ್ ನಲ್ಲಿ ನಡೆದಿದೆ.
ರಾಜಸ್ಥಾನದ ಜೋಧ್‌ಪುರದ ಅಂಬಾಲಾ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಚಾಲಕನನ್ನು ಪಂಜಾಬ್ ನಿವಾಸಿ ಬಲರಾಜ್ ಸಿಂಗ್ ಎಂದು ಗುರುತಿಸಲಾಗಿದೆ. ಅಪಘಾತ ನಡೆದ ಎರಡು ಗಂಟೆಗಳ ನಿರಂತರ ಪ್ರಯತ್ನಗಳ ನಂತರ ಆತನನ್ನು ರಕ್ಷಿಸಲಾಗಿದೆ. ಅದೃಷ್ಟವಶಾತ್ ಆತ ಬದುಕಿ ಉಳಿದರೂ ಈ ಭೀಕರ ಘಟನೆಯಲ್ಲಿ ಆತನ ಎರಡೂ ಕಾಲುಗಳು ಮುರಿದಿವೆ.
ಜೋಧ್‌ಪುರ-ಅಂಬಾಲಾ ಹೆದ್ದಾರಿಯ ಫತೇಪುರ್-ಸಲಾಸರ್ ರಸ್ತೆಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಬಲರಾಜ್ ಸಿಂಗ್ ಅಪಘಾತದ ನಂತರ ಬಾನೆಟ್‌ನಲ್ಲಿ ಸಿಲುಕಿಕೊಂಡಿದ್ದರು.
ಈ ರಸ್ತೆ ಅಪಘಾತದಲ್ಲಿ ಎರಡೂ ಟ್ರಕ್‌ಗಳ ಚಾಲಕ ಮತ್ತು ಕ್ಲೀನರ್ ಸೇರಿದಂತೆ ಇತರ ಮೂವರಿಗೆ ತೀವ್ರ ಗಾಯಗಳಾಗಿವೆ. ಉಳಿದ ಗಾಯಾಳುಗಳನ್ನು ಜೋಧಪುರದ ಕೈಲಾಶ್ (18), ಮಂಕಚಂದ್ (40) ಮತ್ತು ಬಲರಾಜ್ ಸಿಂಗ್ (25) ಎಂದು ಗುರುತಿಸಲಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ನಂತರ ಸಂಪೂರ್ಣ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು. ನಂತರ ಪೊಲೀಸರು ಮಧ್ಯಪ್ರವೇಶಿಸಿ ವಾಹನ ಸಂಚಾರವನ್ನು ಸುಗಮಗೊಳಿಸಿದರು.
