Home » Tripura: ರಥಯಾತ್ರೆ ವೇಳೆ ಹೈವೋಲ್ಟೇಜ್ ತಂತಿ ಸ್ಪರ್ಶಿಸಿ ದುರ್ಘಟನೆ, 2 ಮಕ್ಕಳ ಸಹಿತ 7 ಮಂದಿ ಸುಟ್ಟು ಕರಕಲು

Tripura: ರಥಯಾತ್ರೆ ವೇಳೆ ಹೈವೋಲ್ಟೇಜ್ ತಂತಿ ಸ್ಪರ್ಶಿಸಿ ದುರ್ಘಟನೆ, 2 ಮಕ್ಕಳ ಸಹಿತ 7 ಮಂದಿ ಸುಟ್ಟು ಕರಕಲು

0 comments
Tripura

Tripura: ರಥಯಾತ್ರೆಯ ವೇಳೆತ ರಥದ ಮೇಲಿನ ಕಲಶದ ಭಾಗಕ್ಕೆ ಹೈ ವೋಲ್ಟೇಜ್ ತಂತಿ ತಗುಲಿ, ಏಳು ಮಂದಿ ಸತ್ತ ಧಾರುಣ ಘಟನೆ ವರದಿಯಾಗಿದೆ.

ತ್ರಿಪುರಾದ(Tripura) ಉನಕೋಟಿ ಜಿಲ್ಲೆಯ ಕುಮಾರ್‌ಘಾಟ್‌ನಲ್ಲಿ ಉಲ್ಟೋ ರಥ ಯಾತ್ರೆಯ ಸಂದರ್ಭದಲ್ಲಿ ಭಕ್ತರು ರಥವನ್ನು ಎಳೆಯುತ್ತಿದ್ದರು. ಆಗ ರಥದ ಮೇಲೆ ಹಾದು ಹೋಗುತ್ತಿದ್ದ ಹೈವೋಲ್ಟೇಜ್ ತಂತಿ ಸ್ಪರ್ಶಿಸಿ ಭಾರೀ ಅನಾಹುತ ಸಂಭವಿಸಿದೆ.

ಹೈಟೆನ್ಷನ್ ತಂತಿ ಸ್ಪರ್ಶಿಸಿದ ಕಾರಣ ಇಬ್ಬರು ಮಕ್ಕಳ ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್‌ಡಿಪಿಒ ಕುಮಾರಘಾಟ್ ಕಮಲ್ ದೆಬ್ಬರ್ಮರವರು, ಬೆಳಗ್ಗೆಯಿಂದಲೇ ಅಲ್ಲಿ ಮಳೆಯಾಗುತ್ತಿದ್ದು ರಥ ಯಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಜನ ನೆರೆದಿದ್ದರು. ಹೈ ವೋಲ್ಟೇಜ್ ಶಾಕ್ ತಗುಲಿದ ಕಾರಣದಿಂದ ದೇಹಗಳು ಸುಟ್ಟು ಕರಕಲಾಗಿದೆ.

ಘಟನೆಯ ತಕ್ಷಣ ಅಗ್ನಿಶಾಮಕ ಹಾಗೂ ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಹಲವರಿಗೆ ಗಂಭೀರ ಸುಟ್ಟ ಗಾಯಗಳಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸ್ಥಳದ ಮೂಲಗಳು ತಿಳಿಸಿವೆ. ಘಟನೆ ನಡೆದ ತಕ್ಷಣ ಆಸ್ಪತ್ರೆಯಲ್ಲಿ ದೊಡ್ಡ ಜನಜಂಗುಳಿ ಜಮಾಯಿಸಿತ್ತು. ಕಾನೂನು ಸುವ್ಯವಸ್ಥೆ ಕಾಪಾಡಲು ಘಟನಾ ಸ್ಥಳದಲ್ಲಿ ಪೊಲೀಸ್ ಜತೆಗೆ ಅರೆಸೇನಾ ಪಡೆಗಳ ದೊಡ್ಡ ತುಕಡಿಯನ್ನು ನಿಯೋಜಿಸಲಾಗಿತ್ತು ಎನ್ನುವ ಮಾಹಿತಿ ಲಭ್ಯ ಆಗಿದೆ.

ಇದನ್ನೂ ಓದಿ:  ಕಾಂಗ್ರೆಸ್‌ ಕೊಡುವ ಹಣಕ್ಕೆ 2ವರೆ ಕೆಜಿ ಅಕ್ಕಿ ಬರಲ್ಲ: ಬೊಮ್ಮಾಯಿ ಟೀಕೆ

You may also like

Leave a Comment