6
Uttara Kannada : ವಿವಾಹವಾಗಲು ವಧು ಸಿಗಲಿಲ್ಲ ಎಂದು ಯುವಕನೋರ್ವ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡದಲ್ಲಿ (Uttara Kannada) ನಡೆದಿದೆ. ಮೃತ ಯುವಕನನ್ನು ನಾಗರಾಜ ಗಣಪತಿ ಗಾಂಸ್ಕರ (35) ಎಂದು ಗುರುತಿಸಲಾಗಿದೆ.
ಇಲ್ಲಿನ ಯಲ್ಲಾಪುರ ತಾಲೂಕಿನ ತೇಲಂಗಾರ ಗ್ರಾಮದಲ್ಲಿ ಘಟನೆ ನಡೆದಿದ್ದು, ನಾಗರಾಜ ತೇಲಂಗಾರದ ಕಿರಗಾರಿ ಮನೆಯ ನಿವಾಸಿ ಎನ್ನಲಾಗಿದೆ. ಈತ ಜೀವನೋಪಾಯಕ್ಕಾಗಿ ಕೃಷಿ ಕೆಲಸ ಮಾಡಿಕೊಂಡಿದ್ದ.
ಇತ್ತ ಮದುವೆಯಾಗುವ (marriage) ವಯಸ್ಸು ಕೂಡ ಆಗಿತ್ತು. ಹಾಗಾಗಿ ಕನ್ಯೆ ಹುಡುಕಲು ಹೊರಟವನಿಗೆ ಎಷ್ಟೇ ಅಲೆದರೂ ಹುಡುಗಿ ಸಿಗದೇ ಇಲ್ಲ. ಇದರಿಂದ ಮನನೊಂದ ನಾಗರಾಜ ಮನೆಯ ಸಮೀಪದ ಗುಡ್ಡದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ (sucide) ಮಾಡಿಕೊಂಡಿದ್ದಾನೆ.
ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ನಿಡಿದ್ದಾರೆ. ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಯುವಕನ ಕಳೆದುಕೊಂಡ ಕುಟುಂಬ ಕಂಬನಿ ಮಿಡಿದಿದೆ.
