Rusk making video: ದಿನಂಪ್ರತಿ ಕಾಫಿ(Coffe), ಟೀ(T) ಜೊತೆ ಎದ್ದಿ ಎದ್ದಿ ಚಪ್ಪರಿಸಿ ತಿನ್ನುತ್ತಿದ್ದೀರಾ? ಹಾಗಿದ್ರೆ ಈ ರಸ್ಕ್(Rusk) ಮಾಡುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ಜೀವಮಾನದಲ್ಲಿ ರಸ್ಕ್ ತಿನ್ನೋ ರಿಸ್ಕ್ ಬೇಡ (Rusk making vedio) ಎನ್ನುವಂತೆ ಮಾಡುತ್ತದೆ.
ಹೌದು, ಇತ್ತೀಚೆಗೆ ಪಾನಿಪುರಿಯ ಪೂರಿ(Panipuri), ಮಂಡಕ್ಕಿ, ಬಟಾಣಿ ಹಾಗೂ ಚಾಕೊಲೇಟ್(Chocolate) ಗಳನ್ನು ಅತ್ಯಂತ ಕೆಟ್ಟದಾಗಿ ತಯಾರಿಸುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಜನರಿಗೆ ವಾಕರಿಕೆ ಬರಿಸಿತ್ತು. ಇದನ್ನು ಕಂಡ ನೆಟ್ಟಿಗರು ಛೀ, ಥೂ ಎಂದು ಕ್ಯಾಕರಿಸಿ ಉಗಿದಿದ್ದರುಆದರೀಗ ಈ ಬೆನ್ನಲ್ಲೇ ನೀವು, ಅಂದರೆ ಹೆಚ್ಚಿನವರು ದಿನಂಪ್ರತಿ ಕಾಫಿ, ಟೀ ಜೊತೆ ಎದ್ದಿ ಎದ್ದಿ ಚಪ್ಪರಿಸಿ ತಿನ್ನುವ ರಸ್ಕ್ ಮಾಡುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್(Viral) ಆಗಿದ್ದು, ಜೀವಮಾನದಲ್ಲಿ ರಸ್ಕ್ ತಿನ್ನೋ ರಿಸ್ಕ್(Risk) ಬೇಡ ಎನ್ನುವಂತೆ ಮಾಡುತ್ತದೆ.
ಅಂದಹಾಗೆ ವೈರಲ್ ಆಗಿರುವ ವಿಡಿಯೋದಲ್ಲಿ ರಸ್ಕ್ ಮೇಕಿಂಗ್ ಕಾರ್ಮಿಕರು ಯಾವುದೇ ಗ್ಲೌಸ್(Gloss) ಧರಿಸದೆ ಬರಿಗೈಯಲ್ಲೇ ರಸ್ಕ್ ಮಾಡುವುದನ್ನು ನೋಡಬಹುದು. ಮೊದಲಿಗೆ ಕಾರ್ಮಿಕರು ಹಿಟ್ಟಿನ ಹುಡಿಯನ್ನು ತಂದು ಸುರಿಯುತ್ತಾರೆ. ನಂತರ ಒಂದು ಮೆಶಿನ್‌ಗೆ ಬಕೆಟ್‌ನಿಂದ ನೀರು ಸೇರಿಸುತ್ತಾರೆ. ಇದಕ್ಕೆ ಹಿಟ್ಟನ್ನು (Flour) ತಂದು ಹಾಕುತ್ತಾರೆ. ಇದು ಮಿಕ್ಸ್ ಆದ ಕೂಡಲೇ ಎಣ್ಣೆ ತಂದು ಸುರಿಯುತ್ತಾರೆ. ನಂತರ ಈ ಹಿಟ್ಟನ್ನು ತಂದು ಒಂದೆಡೆ ರಾಶಿ ರಾಶಿಯಾಗಿ ಸುರಿದು ಬರಿ ಕೈಯಿಂದಲೇ (Bare hand) ಹೊಡೆದು ಹೊಡೆದು ಈ ಹಿಟ್ಟನ್ನು ನಾದಿಕೊಳ್ಳುತ್ತಾರೆ. ಬಳಿಕ ಆಯತಾಕಾರಕ್ಕೆ ತಂದು ಬೇಯಿಸುವ ಮೆಷಿನ್‌ನೊಳಗೆ ಹಿಟ್ಟನ್ನು ಹಾಕುತ್ತಾರೆ. ಇದನ್ನು ಬೇಯಿಸುವ ಮೆಷಿನ್‌ನೊಳಗೆ ತಳ್ಳುತ್ತಾರೆ. ಅದರೊಳಗೆ ಬೆಂದಾದ ಬಳಿಕ ಹೊರಕ್ಕೆ ತೆಗೆದು ಕಟ್ ಮಾಡುತ್ತಾರೆ.
ಇದಿಷ್ಟು ಪ್ರಕ್ರಿಯೆ ನಡೆದರೂ ಕೂಡ, ಮಾಡಿದರೂ ಕೂಡ ಒಂಚೂರೂ ಸ್ವಚ್ಛತೆಯನ್ನು ಕಾಪಾಡದಿರುವುದನ್ನು ವಿಡಿಯೋದಲ್ಲಿ ನಾವು ನೋಡಬಹುದು. ಇದನ್ನು ಕಂಡ ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಕೆಲವರು ‘ಥೂ, ಹೀಗೆಲ್ಲಾ ಮಾಡಿದ್ರೆ ನಮ್ಮಿಷ್ಟದ ಸ್ನ್ಯಾಕ್ಸ್‌ನ್ನು ತಿನ್ನೋದು ಹೇಗಪ್ಪಾ’ ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬ ಬಳಕೆದಾರರು (User) ‘ಇದನ್ನು ಮೊದಲು ಮನೆ ಮಂದಿಗೆ ತೋರಿಸಬೇಕು, ನಮ್ಮ ಮನೆಯಲ್ಲಿ ಯಾವಾಗಲೂ ರಸ್ಕ್ ಮಾತ್ರ ಇರುತ್ತದೆ’ ಎಂದಿದ್ದಾರೆ. ಮತ್ತೊಬ್ಬರು, ‘ಇವರು ರಸ್ಕ್ ತಯಾರಿಯ (Preparation) ಸಂದರ್ಭ ಕೈಗೆ ಗ್ಲೌಸ್‌ನ್ನಾದರೂ ಧರಿಸಬಹುದಿತ್ತು’ ಎಂದಿದ್ದಾರೆ.
