Rashmika Mandanna: ಕಿರಿಕ್ ಪಾರ್ಟಿ (Kirik Party) ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ (Rashmika-Mandanna) ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರೋದು ಕಾಮನ್ ಆಗಿಬಿಟ್ಟಿದೆ. ತನ್ನ ಸಿನೆಮಾದ ವಿಚಾರಕ್ಕಿಂತಲೂ ಹೆಚ್ಚಾಗಿ ವಿವಾದಗಳ ಮೂಲಕವೇ ಹೆಚ್ಚು ಗಮನ ಸೆಳೆದಿರುವ ನಟಿ ಕಾಂಟ್ರವರ್ಸಿ ಲೇಡಿ (Controversy Lady) ಆಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಹೆಚ್ಚು ಟ್ರೊಲಿಂಗ್ ಆಗುವ ವಿಚಾರದಲ್ಲಿಯೂ ಟಾಪ್ ಲಿಸ್ಟ್ ನಲ್ಲಿದ್ದಾರೆ. ಆದರೆ, ಇದೀಗ ನಟಿ ಬೇರೆ ವಿಚಾರಕ್ಕೆ ವೈರಲ್ ಆಗಿದ್ದಾರೆ. ಹೌದು, ರಶ್ಮಿಕಾ ಮಂದಣ್ಣಗೆ ಒಂದು ವಿಲಕ್ಷಣ ಅಭ್ಯಾಸ ಇದೆಯಂತೆ. ಸದ್ಯ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ನಟಿ ರಶ್ಮಿಕಾ ಸದಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಸಾಕಷ್ಟು ಫ್ಯಾನ್ಸ್ ಪಾಲೋವರ್ ಗಳನ್ನು ಹೊಂದಿದ್ದಾರೆ. ಸದ್ಯ ನಟಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಶೇರ್ ಮಾಡಿದ್ದು, ಸಖತ್ ವೈರಲ್ ಆಗಿದೆ. ರಶ್ಮಿಕಾ ಮಂದಣ್ಣ ಅವರು ಫಿಟ್ನೆಸ್ಗೆ ಹೆಚ್ಚು ಫೋಕಸ್ ಮಾಡುತ್ತಾರೆ. ತಮ್ಮ ದೈನಂದಿನ ಯೋಗ, ವರ್ಕೌಟ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇದರ ಜೊತೆಗೆ ನಟಿ ಚೀಟ್ ಡೇ ಕೂಡ ಮಾಡುತ್ತಾರೆ. ಅಂದರೆ, ಡಯಟ್ಗೆ ಬ್ರೇಕ್ ಕೊಟ್ಟು ತಮ್ಮಿಷ್ಟದ ಆಹಾರ ತಿನ್ನುವುದು. ಚೀಟ್ ಡೇ ದಿನ ರಶ್ಮಿಕಾ ಒಂದು ವಿಲಕ್ಷಣ ಕೆಲಸ ಮಾಡುತ್ತಾರಂತೆ. ಏನಪ್ಪಾ ಅದು ?! ಇಲ್ಲಿದೆ ನೋಡಿ ರಶ್ಮಿಕಾ ಮಂದಣ್ಣಾಳ ವಿಲಕ್ಷಣ ಅಭ್ಯಾಸ!.
ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣಗೆ ಊಟಕ್ಕೂ ಮೊದಲು ಸ್ವೀಟ್ ತಿನ್ನುವ ಅಭ್ಯಾಸ ಇದೆಯಂತೆ. ಹೀಗಂತ ನಟಿಯೇ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ‘ಚೀಟ್ ಡೇ ದಿನ ನಾನು ಊಟಕ್ಕೂ ಮೊದಲು ಸಿಹಿ ತಿಂಡಿಯನ್ನು ಆರ್ಡರ್ ಮಾಡುತ್ತೇನೆ. ನನ್ನ ಗೆಳೆಯರು ಇದನ್ನು ವಿಲಕ್ಷಣ ಎಂದು ಭಾವಿಸಿದ್ದಾರೆ’ ಎಂದು ಬರೆದಿದ್ದಾರೆ. ರಶ್ಮಿಕಾಳ ಈ ಹವ್ಯಾಸ ವೈರಲ್ ಆಗಿದೆ.
ಸದ್ಯ ನಟಿ ರಶ್ಮಿಕಾ ಮಂದಣ್ಣ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ರಶ್ಮಿಕಾ ರಣಬೀರ್ ಕಪೂರ್ ಗೆ (ranbir kapoor) ನಾಯಕಿಯಾಗಿ ‘ಅನಿಮಲ್’ (animal) ಚಿತ್ರದಲ್ಲಿ ನಟಿಸಿದ್ದಾರೆ. ಅನಿಮಲ್ (Animal) ಸಿನಿಮಾ ಆಗಸ್ಟ್ 11 ರಂದು ಬಿಡುಗಡೆಯಾಗಲಿದೆ. ಅಲ್ಲದೆ, ಅಲ್ಲು ಅರ್ಜುನ್ (allu arjun) ‘ಪುಷ್ಪ 2’ (pushpa-2) ಚಿತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ನಿತಿನ್ (Nithin) -ರಶ್ಮಿಕಾ ಕಾಂಬಿನೇಷನ್ನ ಹೊಸ ಸಿನಿಮಾ ಕೂಡ ಮೂಡಿಬರುತ್ತಿದೆ. ‘ರೇನ್‌ಬೋ ಸಿನಿಮಾ ಕೆಲಸಗಳಲ್ಲಿ ರಶ್ಮಿಕಾ ಬ್ಯುಸಿ ಇದ್ದಾರೆ.
