Phone pay: ಮಧ್ಯಪ್ರದೇಶ (madhya pradesh) ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ವಿರುದ್ಧ ಕರ್ನಾಟಕದಲ್ಲಿ ಕಾಂಗ್ರೆಸ್ ಪೇಸಿಎಂ, 40% ಕಮಿಷನ್ ಮಾದರಿ ಟೀಕಾಪ್ರಹಾರ ಮಾಡಲು ಫೋನ್ ಪೇ ಲೋಗೋವನ್ನು ಬಳಸಿಕೊಂಡಿತ್ತು. ಈ ಹಿನ್ನೆಲೆ ಕಾಂಗ್ರೆಸ್ ಗೆ ಫೋನ್ ಪೆ (Phone pay) ಎಚ್ಚರಿಕೆ ನೀಡಿದೆ. ತನ್ನ ಕಂಪೆನಿ ಲೋಗೋ ಬಳಸಿಕೊಂಡರೆ ಪಕ್ಷದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಫೋನ್ ಪೇ ಎಚ್ಚರಿಕೆ ನೀಡಿದೆ.
ಗ್ವಾಲಿಯರ್ ಪಟ್ಟಣದ ವಿವಿಧ ಸ್ಥಳಗಳಲ್ಲಿ, ಚಿಂದ್ವಾರ, ರೇವಾ, ಸತ್ನಾ ಮತ್ತು ರಾಜ್ಯದ ರಾಜಧಾನಿ ಭೋಪಾಲ್ ನಲ್ಲಿ 50 ಪ್ರತಿಶತ (ಕಮಿಷನ್) ಪಾವತಿಸಿ ಮತ್ತು ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳಿ ಎಂದು ಹೇಳುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಒಳಗೊಂಡ ಪೋಸ್ಟರ್‌ಗಳನ್ನು ಹಾಕಲಾಗಿದೆ. ಈ ಪೋಸ್ಟರ್‌ಗಳು ಆನ್‌ಲೈನ್ ಹಣವನ್ನು ಸ್ವೀಕರಿಸಲು ಫಿನ್‌ಟೆಕ್ ಕಂಪನಿಗಳು ಬಳಸುವ QR ಕೋಡ್ ಶೀಟ್‌ಗಳ ರೂಪದಲ್ಲಿದೆ. ಆ ಪೋಸ್ಟರ್‌ಗಳ ಮೇಲೆ ‘PhonePe’ ಎಂದು ಬರೆಯಲಾಗಿದೆ.
ಈ ಪೋಸ್ಟರ್ ಫೋನ್ ಪೆ ಕಂಪನಿಯ ಗಮನಕ್ಕೆ ಬಂದಿದ್ದು, ಕಾಂಗ್ರೆಸ್ ಗೆ ಎಚ್ಚರಿಕೆ ನೀಡಿದೆ. ಈ ಬಗ್ಗೆ PhonePe ತನ್ನ Twitter ಖಾತೆಯಲ್ಲಿ ಪೋಸ್ಟ್ ಮಾಡಿದ್ದು, PhonePeಯ ಬ್ರ್ಯಾಂಡ್ ಲೋಗೋವನ್ನು ಯಾವುದೇ ಮೂರನೇ ವ್ಯಕ್ತಿಗಳು ಅನಧಿಕೃತವಾಗಿ ಬಳಸಬಾರದು. ಅನಧಿಕೃತ ಬಳಕೆಗೆ ನಾವು ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ. ನಾವು ಯಾವುದೇ ರಾಜಕೀಯ ಪ್ರಚಾರ ಅಥವಾ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ. ನಮ್ಮ ಬ್ರಾಂಡ್ ಲೋಗೋ ಮತ್ತು ಕಂಪೆನಿಯ ಬಣ್ಣವನ್ನು ಹೊಂದಿರುವ ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳನ್ನು ತೆಗೆದುಹಾಕುವಂತೆ ಮಧ್ಯಪ್ರದೇಶ ಕಾಂಗ್ರೆಸ್‌ಗೆ ವಿನಂತಿಸುತ್ತೇವೆ ಎಂದು ಪಕ್ಷದ ರಾಜ್ಯ ಘಟಕದ ಟ್ವಿಟರ್ ಹ್ಯಾಂಡಲ್ ಅನ್ನು ಟ್ಯಾಗ್ ಮಾಡಿ PhonePe ಹೇಳಿದೆ.
ಅಲ್ಲದೆ, ಪೋಸ್ಟರ್ ಅಂಟಿಸಿದ ಅಪರಿಚಿತರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜೊತೆಗೆ ಬಿಜೆಪಿ ಕಾರ್ಯಕರ್ತರೊಬ್ಬರು ತಮ್ಮ ಪಕ್ಷಕ್ಕೆ ಮಾನಹಾನಿ ಮಾಡಲಾಗುತ್ತಿದೆ ಎಂದು ದೂರು ನೀಡಿದ್ದಾರೆ. ಇದನ್ನು ಆಧರಿಸಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಗ್ವಾಲಿಯರ್ ಎಸ್ಪಿ ರಾಜೇಶ್ ಸಿಂಗ್ ಚಂದೇಲ್ ತಿಳಿಸಿದ್ದಾರೆ.
ಇದನ್ನು ಓದಿ: Bangalore Mysore Expressway: ಬೆಂ- ಮೈ ಎಕ್ಸ್ಪ್ರೆಸ್ ವೇ ಬಗ್ಗೆ ಸಂಸದ ಪ್ರತಾಪ್ ಸಿಂಹ ಹೇಳಿದ್ದೇನು ಗೊತ್ತಾ?
