Home » Dr. Parameshwar: ಅಲ್ಲಾನ ಕೃಪೆಯಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ಸ್ ಅಧಿಕಾರ ಹಿಡಿದಿದೆ : ಗೃಹ ಸಚಿವ ಪರಮೇಶ್ವರ್ !!

Dr. Parameshwar: ಅಲ್ಲಾನ ಕೃಪೆಯಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ಸ್ ಅಧಿಕಾರ ಹಿಡಿದಿದೆ : ಗೃಹ ಸಚಿವ ಪರಮೇಶ್ವರ್ !!

by ಹೊಸಕನ್ನಡ
5 comments
Dr. Parameshwar

Dr. Parameshwar: ‘ರಾಜ್ಯದಲ್ಲಿ ಕಾಂಗ್ರೆಸ್(Congress) ಅಧಿಕಾರಕ್ಕೆ ಬರಲು ಅಲ್ಲಾನ ಕೃಪೆ, ಆಶೀರ್ವಾದ ಕಾರಣ. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಗೃಹ ಮಂತ್ರಿಯಾಗಿದ್ದೇನೆ’ ಎಂದು ಗೃಹ ಸಚಿವ ಡಾ. ಪರಮೇಶ್ವರ್(Dr. Parameshwar) ಅವರು ಮುಸ್ಲಿಂ ಬಂಧುಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಹೌದು, ಗುರುವಾರ ಮುಸ್ಲಿಂ ಭಾಂಧವರ ಬಕ್ರಿದ್ (Bakrid) ಹಬ್ಬದ ಹಿನ್ನೆಲೆಯಲ್ಲಿ ಕೊರಟಗೆರೆ (Koratagere) ಪಟ್ಟಣದ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮುಸ್ಲಿಂ (Muslim) ಬಾಂಧವರಿಗೆ ಶುಭ ಕೋರಿದ ಅವರು ‘ಅಲ್ಲಾನ (Allah) ಕೃಪೆಯಿಂದ ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರ ಬಂದಿದೆ. ನಿಮ್ಮ ಆಶೀರ್ವಾದದಿಂದ ನಾನು ಗೃಹಸಚಿವನಾಗಿದ್ದೇನೆ. ಆ ದೇವರ ಆಶೀರ್ವಾದ ಇಲ್ಲದೇ ಇದ್ದರೆ ನಾನು ಶಾಸಕನಾಗುತ್ತಿರಲಿಲ್ಲ ಎಂದು’ ಹೇಳಿದ್ದಾರೆ.

ಬಳಿಕ ಮಾತನಾಡಿದ ಅವರು ‘ಬಕ್ರಿದ್’ ಹಬ್ಬ ತ್ಯಾಗ ಬಲಿದಾನದ ಸಂಕೇತ. ಅಲ್ಲಾ ಬೇರೆ ಬೇರೆ ರೀತಿಯಲ್ಲಿ ಪರೀಕ್ಷೆ ಮಾಡುತ್ತಾನಂತೆ. ತನ್ನ ಮಗನನ್ನೂ ಬಲಿ ಕೊಡಬೇಕು ಎನ್ನುವ ತ್ಯಾಗ ದೊಡ್ಡದು. ರಂಜಾನ್(Ramjan) ವೇಳೆ ಇಲ್ಲಿಗೆ ಬಂದಿದ್ದೆ. ಆಗ ಚುನಾವಣೆ ಇತ್ತು. ಈ ಸಂದರ್ಭ ನಾನು ಬಂದು ಮತ ಕೇಳಿದ್ದೆ. ನನ್ನನ್ನು ಗೆಲ್ಲಿಸಿದ್ದೀರಿ ಎಂದರು.

ಎಲ್ಲೋ ಒಂದುಕಡೆ ಮುಸ್ಲಿಮರಿಗೆ ಹಿಂದಿನ ಸರ್ಕಾರದಿಂದ ಆತಂಕ ಇತ್ತು. ಭಯದ ವಾತಾವರಣ ಇತ್ತು. ಅದೆಲ್ಲವನ್ನೂ ಬಿಟ್ಟು ಕಾಂಗ್ರೆಸ್‌ಗೆ ಮತಹಾಕಿದ್ದೀರಿ. ಕಾಂಗ್ರೆಸ್ ಜ್ಯಾತ್ಯಾತೀತ ಪಕ್ಷ. ಹಾಗಾಗಿ ಅವರು ನಮ್ಮ ಜೊತೆ ನಿಂತಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಈ ವೇಳೆ ಧಾರ್ಮಿಕ ಮುಖಂಡರು ಪರಮೇಶ್ವರ್ ಅವರಿಗೆ ಟೋಪಿ ಧಾರಣೆ ಮಾಡಿ ಸಿಎಂ(CM) ಆಗಲಿ ಎಂದು ಶುಭಹಾರೈಸಿದರು.

You may also like

Leave a Comment