Home » Car accident: ಮಣಿಪಾಲದಲ್ಲಿ ಕಾರು ಅವಘಡ: KMC ವೈದ್ಯ ಸ್ಥಳದಲ್ಲೇ ಮೃತ್ಯು, ಇನ್ನಿಬ್ಬರಿಗೆ ಗಾಯ!

Car accident: ಮಣಿಪಾಲದಲ್ಲಿ ಕಾರು ಅವಘಡ: KMC ವೈದ್ಯ ಸ್ಥಳದಲ್ಲೇ ಮೃತ್ಯು, ಇನ್ನಿಬ್ಬರಿಗೆ ಗಾಯ!

0 comments
Car accident

Car accident : ಉಡುಪಿ: ಮಣಿಪಾಲದ ರಜತಾದ್ರಿ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ಶುಕ್ರವಾರ ತಡರಾತ್ರಿ ಕಾರೊಂದು ಅಪಘಾತಕ್ಕೀಡಾದ ಪರಿಣಾಮ ಮಣಿಪಾಲದ ಕೆಎಂಸಿ ಆಸ್ಪತ್ರೆಯ ವೈದ್ಯರೊಬ್ಬರು ನಿಧನರಾದ ಘಟನೆ ವರದಿಯಾಗಿದೆ.

ಶುಕ್ರವಾರ ತಡರಾತ್ರಿ ಒಂದು ಗಂಟೆ ಸುಮಾರಿಗೆ ನಡೆದ ಭೀಕರ (Car accident ) ಅವಘಡದ ತೀವ್ರತೆಗೆ ಮೃತಪಟ್ಟ ವೈದ್ಯರನ್ನು ಕೆಎಂಸಿ ಆಸ್ಪತ್ರೆಯ ಮೂಳೆ ತಜ್ಞ ಹೈದರಾಬಾದ್ ಮೂಲದ ಡಾ. ಸೂರ್ಯ ನಾರಾಯಣ ಯಾನೆ ಡಾ. ಸೂರಿ(26) ಎಂದು ಗುರುತಿಸಲಾಗಿದೆ. ಮಣಿಪಾಲದ ಹೋಟೆಲ್ ಹಾಟ್ ಆ್ಯಂಡ್ ಸ್ಪೆಸಿ ಎದುರುಗಡೆ ಕಡಿದಾದ ತಿರುವಿನಲ್ಲಿ ನಿಯಂತ್ರಣ ತಪ್ಪಿದ ಕಾರು ಮೊದಲು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಉರುಳಿ ಬಿತ್ತು ಎಂದು ತಿಳಿದುಬಂದಿದೆ. ಈ ಘಟನೆಯಲ್ಲಿ ವೈದ್ಯರೊಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

 

ಇದನ್ನು ಓದಿ: Aadhaar PAN linking: ಆಧಾರ್ ಪಾನ್ ಲಿಂಕ್ ಮಾಡಲು 1,000 ಕಟ್ಟಿದರೂ ಚಲನ್ ಬಂದಿಲ್ವಾ? ಜಸ್ಟ್ ಹೀಗೆ ಮಾಡಿ ಸಾಕು ! 

You may also like

Leave a Comment