Home » Belthangadi: ಬೆಳ್ತಂಗಡಿ: 27 ಹರೆಯದ ಯುವ ವೈದ್ಯ ಹೃದಯಾಘಾತಕ್ಕೆ ಬಲಿ

Belthangadi: ಬೆಳ್ತಂಗಡಿ: 27 ಹರೆಯದ ಯುವ ವೈದ್ಯ ಹೃದಯಾಘಾತಕ್ಕೆ ಬಲಿ

0 comments
Belthangadi

Belthangadi: ನೇತ್ರಾವತಿ ಉಗಮ ಸ್ಥಾನಕ್ಕೆ ಚಾರಣಕ್ಕೆ ತೆರಳಿದ್ದ ಎಂಬಿಬಿಎಸ್ ಪದವೀಧರ ಯುವಕ ಹೃದಯಾಘಾತದಿಂದ ಮೃತಪಟ್ಟ ಧಾರುಣ ಘಟನೆ ನಡೆದಿದೆ.

ಬೆಳ್ತಂಗಡಿ (Belthangadi) ತಾಲೂಕಿನ ಮಲವಂತಿಗೆ ಗ್ರಾಮದಲ್ಲಿರುವ ಎಳನೀರು ಎಂಬಲ್ಲಿಯ ಗುತ್ಯಡ್ಕ ಸಮೀಪ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ನೇತ್ರಾವತಿ ಉಗಮ ಸ್ಥಾನಕ್ಕೆ ಚಾರಣಕ್ಕೆ ತೆರಳಿದ್ದ ಎಂಬಿಬಿಎಸ್ ಪದವೀಧರ ಯುವಕನೊಬ್ಬ ಮೃತಪಟ್ಟ ಘಟನೆ ಜೂನ್ 30 ರಂದು ನಡೆದಿದೆ. ಚಿಕ್ಕಪ್ರಾಯದ ಅದು ವೈದ್ಯರೊಬ್ಬರು ಹೃದಯಾಘಾತದಿಂದ ಮರಣವನ್ನಪ್ಪಿದ್ದು ಆತಂಕ ಸೃಷ್ಟಿಸಿದೆ.

ಮೂಲತಃ ಮೈಸೂರಿನ ಜೆಪಿ ನಗರದ ನಿವಾಸಿ, 27 ವರ್ಷದ ರಕ್ಷಿತ್ ಮೃತಪಟ್ಟ ಯುವಕನಾಗಿದ್ದಾನೆ. ಹೃದಯಾಘಾತದಿಂದ ಆತ ಮೃತಪಟ್ಟಿರುವುದಾಗಿ ಪ್ರಾಥಮಿಕ ವರದಿಗಳು ತಿಳಿಸಿವೆ. ಆತ ತನ್ನ ಇತರ ಐದು ಮಂದಿ ಗೆಳೆಯರೊಂದಿಗೆ ಹೊರನಾಡಿಗೆ ಬಂದಿದ್ದು ಅಲ್ಲಿಂದ ಶುಕ್ರವಾರ ಚಾರಣ ಹೊರಟಿದ್ದರು.

ನೇತ್ರಾವತಿ ಉಗಮ ಸ್ಥಾನ ತಲುಪಲು, ಉಜಿರೆಯಿಂದ ಹೊರಟ ಅವರು ಸಂಸೆ ಮೂಲಕ ಸಾಗಿ ಎಳನೀರು ಗಡಿ ದಾಟಿದ್ದರು. ಅಲ್ಲಿಂದ ನಾಲ್ಕು ಕಿಲೋ ಮೀಟರ್ ದೂರ ನಡೆದಾಗ ಅವರಿಗೆ ಎದುಸಿರು ಬಂದಿತ್ತು. ಚಾರಣ ನಡೆಸಿದಾಗಲೆ ತೀವ್ರ ಎದೆ ನೋವಿನಿಂದ ಬಳಲಿದ ಅವರನ್ನು ತಂಡದ ಇತರ ಸದಸ್ಯರ ಜತೆ ಸ್ಥಳೀಯರು ಹೊತ್ತು ತಂದು ಕಳಸ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಅಲ್ಲಿನ ವೈದ್ಯರು ಪರೀಕ್ಷಿಸಿದಾಗ ಯುವಕ ಮೃತಪಟ್ಟಿರುವುದು ತಿಳಿದುಬಂದಿದೆ.

ಚಿಕ್ಕಮಗಳೂರು ಜಿಲ್ಲೆಯ ಸಂಸೆಯ ಸಮೀಪ ಇರುವ ಈ ಸ್ಥಳವಿದ್ದರೂ, ಇದು ಬೆಳ್ತಂಗಡಿ ತಾಲೂಕಿನ ವ್ಯಾಪ್ತಿಗೆ ಬರುತ್ತದೆ. ಆರಂಭದಲ್ಲಿ ಕಳಸ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಈಗ ಘಟನೆ ನಡೆದ ಸ್ಥಳ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದ್ದುದುದರಿಂದ ಬೆಳ್ತಂಗಡಿ ಪೊಲೀಸರು ಅಲ್ಲಿಗೆ ಪರಿಶೀಲನೆ ನಡೆಸಿದ್ದಾರೆ.

 

ಇದನ್ನು ಓದಿ: Accident: ಮಹಾರಾಷ್ಟ್ರದಲ್ಲಿ ಭೀಕರ ಬಸ್‌ ದುರಂತದ ಪರಿಣಾಮ 25 ಮಂದಿ ಸಾವು!

You may also like

Leave a Comment