Home » Solar Stove: ದುಬಾರಿ ಗ್ಯಾಸ್ ನಿಂದ ಪರಿಹಾರ ನೀಡಲಿದೆ ಈ ಸೋಲಾರ್‌ ಸ್ಟವ್‌ ! ತಿಂಗಳಿಗೆ ಕನಿಷ್ಠ 1,100 ರೂ. ಉಳಿತಾಯ ಗ್ಯಾರಂಟಿ !

Solar Stove: ದುಬಾರಿ ಗ್ಯಾಸ್ ನಿಂದ ಪರಿಹಾರ ನೀಡಲಿದೆ ಈ ಸೋಲಾರ್‌ ಸ್ಟವ್‌ ! ತಿಂಗಳಿಗೆ ಕನಿಷ್ಠ 1,100 ರೂ. ಉಳಿತಾಯ ಗ್ಯಾರಂಟಿ !

by Mallika
0 comments
Solar Stove

Solar Stove: ಹಣದುಬ್ಬರ ದೇಶದಲ್ಲಿ ಹೆಚ್ಚಾಗಿದ್ದು, ಸಾಮಾನ್ಯ ಜನರು ಇದರಿಂದ ನಿರಂತರ ತೊಂದರೆಗೊಳಗಾಗುವುದು ಸರ್ವೇಸಾಮಾನ್ಯವಾಗಿದೆ. ಇದರಲ್ಲೂ ದೇಶದಲ್ಲಿ ಅಡುಗೆ ಅನಿಲದ ಬೆಲೆ ಗಗನಕ್ಕೇರಿದ್ದು, ಗ್ಯಾಸ್‌ ಸಿಲಿಂಡರ್‌ ಬೆಲೆ ಇಂದು ಕಡಿಮೆಯಾಗುತ್ತದೆ, ನಾಳೆ ಕಡಿಮೆಯಾಗುತ್ತದೆ ಎಂಬ ಆಸೆ ಜನಸಾಮಾನ್ಯರು ಕಂಡಿದ್ದೇ ಆಯಿತು. ಅದಕ್ಕಾಗಿ ಬಂದಿದೆ, ಈ ಸೋಲಾರ್‌ ಸ್ಟವ್‌. ಇದು ಜನಸಾಮಾನ್ಯರಿಗೆ ಪರಿಹಾರ ನೀಡಬಲ್ಲದು. ಏಕೆಂದರೆ ಇದರ ಬಳಕೆಗೆ ಗ್ಯಾಸ್‌ ಅಥವಾ ವಿದ್ಯುತ್ತಿನ ಅಗತ್ಯವಿಲ್ಲ. ಇದಕ್ಕೆ ನಿಮಗೆ ಬೇಕಾಗಿರುವುದು ಕೇವಲ ಸೂರ್ಯನ ಬೆಳಕು. ಇದಕ್ಕೆ ಯಾರೊಬ್ಬರೂ ಒಂದು ನಯಾಪೈಸೆ ದುಡ್ಡು ಖರ್ಚು ಮಾಡುವ ಅಗತ್ಯವಿಲ್ಲ. ಈ ಸೋಲಾರ್‌ ಸ್ಟವ್‌(Solar Stove) ಬಳಕೆ ಮಾಡುವುದರಿಂದ ಜನಸಾಮಾನ್ಯರು ತಿಂಗಳಿಗೆ ರೂ.1100 ಉಳಿಸಬಹುದು.

ಭಾರತದ ಪ್ರಮುಖ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ಒಳಾಂಗಣದಲ್ಲಿ ಬಳಸುವ ಸೌರ ಸ್ಟೌವ್ ಅನ್ನು ಪರಿಚಯಿಸಿದೆ. ಇದನ್ನು ರೀಚಾರ್ಜ್ ಮಾಡಬಹುದು. ಸೂರ್ಯನ ಕಿರಣಗಳಿಂದ ಚಾರ್ಜ್ ಆಗುವ ಈ ಸ್ಟವ್ ಅನ್ನು ಅಡುಗೆಮನೆಯಲ್ಲಿ ಇಟ್ಟುಕೊಂಡು ಬಳಸಬಹುದು. ಈ ಒಲೆ ಖರೀದಿಸುವ ವೆಚ್ಚವನ್ನು ಹೊರತುಪಡಿಸಿ, ನಿರ್ವಹಣೆಗೆ ಯಾವುದೇ ಖರ್ಚು ಇರುವುದಿಲ್ಲ.

ಸೌರೊಲೆಯನ್ನು ಬಯಸಲು ಹೊಂದಿದ್ದರೆ ಇದಕ್ಕಾಗಿ ನಿಮಗೆ ಸೌರಫಲಕ ಬೇಕಾಗುತ್ತದೆ. ಇದರ ಮೂಲಕ ಸೌರ ಒಲೆ ಉರಿಯುತ್ತದೆ. ಸೌರ ಸ್ಟವ್‌ನಲ್ಲಿಯೇ ಸಣ್ಣ ಸೌರ ಫಲಕ ಇದೆ. ಇದು ಸೂರ್ಯನ ಕಿರಣಗಳಿಂದ ಚಾರ್ಜ್‌ ಆಗುತ್ತದೆ. ಇದರ ಇನ್ನೊಂದು ವಿಶೇಷತೆ ಏನೆಂದರೆ ಇದು ಚಾರ್ಜ್‌ ಮಾಡಿ ಇಟ್ಟುಕೊಳ್ಳಬಹುದು. ಚಳಿಗಾಲದಲ್ಲಿ ಎಲ್ಲರಿಗೂ ಗೊತ್ತಿರುವ ಹಾಗೆ ಸೂರ್ಯನ ಬೆಳಕು ಕಡಿಮೆ ಇರುತ್ತದೆ. ಆ ಸಮಯದಲ್ಲಿ ನೀವು ಈ ಚಾರ್ಜಿಂಗ್‌ ಉಪಯೋಗ ಮಾಡಿಕೊಳ್ಳಬಹುದು. ಮತ್ತು ಅಡುಗೆ ಮಾಡಬಹುದು. ಈ ಸೋಲಾರ್‌ ಸ್ಟವ್‌ ಮೂಲಕ ಒಮ್ಮೆ ಚಾರ್ಚ್‌ ಮಾಡಿದರೆ ನೀವು ಮೂರು ಬಾರಿ ಅಡುಗೆ ಮಾಡಬಹುದು.

ಇಲ್ಲಿಯವರೆಗೆ, ದೇಶದಲ್ಲಿ ತಯಾರಿಸಲಾದ ಎಲ್ಲಾ ಸೋಲಾರ್ ಸ್ಟೌವ್ಗಳು ಬಹುತೇಕ ಒಂದೇ ರೀತಿಯ ಹೋಲಿಕೆಯನ್ನು ಹೊಂದಿವೆ. ಆದರೆ ಇಂಡಿಯನ್ ಆಯಿಲ್ ವಿಶಿಷ್ಟವಾದ ಸ್ಟೌ ಅನ್ನು ಅಭಿವೃದ್ಧಿಪಡಿಸಿದೆ. ನಿಮ್ಮ ಅಡುಗೆಮನೆಯಲ್ಲಿ ಇರಿಸಿ ಮತ್ತು ಸೌರ ಫಲಕವನ್ನು ಛಾವಣಿಯ ಮೇಲೆ ಅಥವಾ ಹೊರಭಾಗದಲ್ಲಿ ಇರಿಸಿ ಇದರಿಂದ ನೀವು ಆಹಾರವನ್ನು ಬೇಯಿಸಲು ಸೂರ್ಯನಿಂದ ಶಕ್ತಿಯನ್ನು ಪಡೆಯಬಹುದು. ಈ ಸ್ಟೌವ್ ಅನ್ನು ಪ್ರಧಾನಿ ಮೋದಿ ಅವರು ಉದ್ಘಾಟನೆ ಮಾಡಿದ್ದಾರೆ. ಈ ಸೋಲಾರ್ ಸ್ಟವ್ ದೇಶದ ಸಾಮಾನ್ಯ ಜನರಿಗೆ 7 ವರ್ಷಗಳಲ್ಲಿ ಒಂದು ಲಕ್ಷ ಕೋಟಿ ರೂಪಾಯಿಗಳನ್ನು ಉಳಿಸಲು ಸಹಾಯ ಮಾಡುತ್ತದೆ.

ಈ ಸೌರ ಒಲೆಯ ಜೀವಿತಾವಧಿ ಸುಮಾರು 10 ವರ್ಷ. ಯಾವುದೇ ಹಣವನ್ನು ಖರ್ಚು ಮಾಡದೆ ದಿನಕ್ಕೆ ಮೂರು ಊಟವನ್ನು ಸುಲಭವಾಗಿ ಬೇಯಿಸಲು ಸಾಧ್ಯವಾಗುತ್ತದೆ. ಇದರ ವಿಶೇಷತೆ ಎಂದರೆ ಬಿಸಿಲಿನಲ್ಲಿ ಇಡಬೇಕಾಗಿಲ್ಲ ಮತ್ತು ರಾತ್ರಿಯಲ್ಲೂ ಅಡುಗೆ ಮಾಡುವ ಸಾಮರ್ಥ್ಯ ಹೊಂದಿದೆ. ಈ ಸ್ಟೌವ್‌ ಅನ್ನು ಕೇಬಲ್‌ ವಯರ್‌ ಮೂಲಕ ಸೌರ ಫಲಕಕ್ಕೆ ಜೋಡಿಸಲಾಗುತ್ತದೆ, ಅಲ್ಲಿಂದ ಸೂರ್ಯನ ಕಿರಣ ಶಕ್ತಿ ಪಡೆಯಲು ಅನುಕೂಲವಾಗುವಂತೆ ಮಾಡಲಾಗಿದೆ. ನೀವೇನಾದರು ಈ ಸೋಲಾರ್‌ ಸ್ಟವ್‌ ಖರೀದಿ ಮಾಡಲು ಬಯಸಿದೆ ಇದರ ಬೆಲೆ ಮಾರುಕಟ್ಟೆಯಲ್ಲಿ 15 ಸಾವಿರದಿಂದ 30 ಸಾವಿರದವರೆಗೆ ಇದೆ.

ಅಡುಗೆ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರೀ ಇಳಿಕೆ, ಕೇವಲ 820 ರೂ. ಸಿಗಲಿದೆ ಗ್ಯಾಸ್ !

You may also like

Leave a Comment