Home » Gruha Lakshmi Scheme: ಗೃಹ ಲಕ್ಷೀ ಯೋಜನೆ ಬಗ್ಗೆ ಬಿಗ್ ಅಪ್ಡೇಟ್.. !! ಈ ದಾಖಲೆ ಇಲ್ಲಾಂದ್ರೆ ಯಾವುದೇ ಕಾರಣಕ್ಕೂ ಸಿಗಲ್ಲ 2000 ರೂ!!

Gruha Lakshmi Scheme: ಗೃಹ ಲಕ್ಷೀ ಯೋಜನೆ ಬಗ್ಗೆ ಬಿಗ್ ಅಪ್ಡೇಟ್.. !! ಈ ದಾಖಲೆ ಇಲ್ಲಾಂದ್ರೆ ಯಾವುದೇ ಕಾರಣಕ್ಕೂ ಸಿಗಲ್ಲ 2000 ರೂ!!

by ಹೊಸಕನ್ನಡ
0 comments

Gruha Lakshmi Scheme: ಕಾಂಗ್ರೆಸ್ ಸರ್ಕಾರ(Congress Government) ತನ್ನ 5 ಗ್ಯಾರಂಟಿಗಳಲ್ಲಿ ಈಗಾಗಲೇ ಶಕ್ತಿ ಯೋಜನೆ, ಗೃಹಜ್ಯೋತಿ ಯೋಜನೆ ಹಾಗೂ ಅನ್ನ ಭಾಗ್ಯ ಯೋಜನೆಗಳಿಗೆ ಚಾಲನೆಯನ್ನು ನೀಡಿದೆ. ಇದೀಗ ಗೃಹ ಲಕ್ಷ್ಮೀ ಯೋಜನೆಯ ಅನುಷ್ಠಾನಕ್ಕೆ ಪಕ್ರಿಕ್ರಿಯೆಗಳನ್ನು ನಡೆಸುತ್ತಿದೆ. ಇನ್ನು ಈ ಗೃಹ ಲಕ್ಷ್ಮೀ(Gruha Lakshmi Scheme) ಯೋಜನೆಯಡಿಯಲ್ಲಿ 2,000 ರೂ ಪಡೆಯಬೇಕಾದರೆ ಕಡ್ಡಾಯವಾಗಿ ಈ ದಾಖಲೆಗಳು ಬೇಕೇ ಬೇಕೆಂದು ಸರ್ಕಾರ ತಿಳಿಸಿದೆ.

ಹೌದು, ಜೂನ್ 15ರಿಂದ ಗೃಹ ಲಕ್ಷ್ಮೀ ಯೋಜನೆಖೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಬೇಕಿತ್ತು ಆದರೆ ಕಾರಣಾಂತರಗಳಿಂದ ಮಹಿಳೆಯರಿಗೆ ಎರಡು ಸಾವಿರ ರೂಪಾಯಿಗಳನ್ನು ಕೊಡುವ ಈ ಯೋಜನೆ ಇನ್ನೂ ಜಾರಿಗೆ ಬಂದಿಲ್ಲ ಆದರೆ ಜುಲೈ 14 ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್(Lakshmi hebbalkar) ಹೇಳಿದ್ದಾರೆ. ಅಲ್ಲದೆ ಇದೀಗ ಸಿಎಂ ಸಿದ್ದರಾಮಯ್ಯ(CM Siddaramaiah) ಕೂಡ ಪ್ರತಿಕ್ರಿಯಿಸಿ 16 ರಿಂದ ಮನೆ ಒಡತಿಯರ ಖಾತೆಗೆ 2 ಸಾವಿರ ಹಣ ಜಮಾ ಮಾಡುವ ಪ್ರಕ್ರಿಯೆ ಆರಂಭವಾಗಲಿದೆ. ಇದಕ್ಕೆ ಅರ್ಜಿ ಸಲ್ಲಿಸಲು ಏನೆಲ್ಲಾ ದಾಖಲೆಗಳು ಬೇಕು ಗೊತ್ತಾ?

ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:
• ನಿವಾಸ ಪ್ರಮಾಣ ಪತ್ರ
• ವರ್ಗ ಪ್ರಮಾಣ ಪತ್ರ
• 10ನೇ ಪ್ರಮಾಣ ಪತ್ರ
• ಪಡಿತರ ಚೀಟಿ/ರೇಷನ್ ಕಾರ್ಡ್
• ಅರ್ಜಿದಾರರ ಫೋಟೋಗಳು
• ಮನೆಯ ಯಜಮಾನಿ ಎನ್ನುವುದಕ್ಕೆ ಘೋಷಣಾ ಅರ್ಜಿ
• ಮೊಬೈಲ್ ಸಂಖ್ಯೆ
• ಮನೆಯ ನಂಬರ್
• ಆಧಾರ್ ಕಾರ್ಡ್
• ಪ್ಯಾನ್ ಕಾರ್ಡ್
• ಬ್ಯಾಂಕ್ ಖಾತೆ

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಯಾರು?
• ಮನೆಯಲ್ಲಿ ಎಷ್ಟೇ ಹೆಂಗಸರು ಇದ್ದರು ಮನೆಯ ಯಜಮಾನಿ ಯಾರೋ ಅವರಿಗೆ ಮಾತ್ರ ಗ್ರಹಲಕ್ಷ್ಮಿ ಯೋಜನೆಯ ಅಡಿಯಲ್ಲಿ 2000 ಸಿಗುತ್ತವೆ.
• ಇನ್ನು ಮಹಿಳೆ ಸರ್ಕಾರಿ ನೌಕರಿಯಲ್ಲಿ ಇದ್ದರೆ ಆಕೆಗೆ 2000 ಸಿಗುವುದಿಲ್ಲ.
• ಮನೆಯ ಯಜಮಾನಿ ಅಥವಾ ಯಜಮಾನಿಯಾ ಗಂಡ ತೆರಿಗೆ ಪಾವತಿದಾರರಾಗಿದ್ದರೆ, ಜಿ ಎಸ್ ಟಿ ಪಾವತಿಸುತ್ತಿದ್ದರೆ ಅಂಥವರಿಗೆ ಸಾವಿರ ರೂಪಾಯಿಗಳು ಸಿಗುವುದಿಲ್ಲ.

ಸುದ್ದಿಗಾರರ ಜೊತೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್(Lakshmi hebbalkar) ‘ಜುಲೈ 3 ಅಥವಾ 4ರಂದು ಈ ಬಗ್ಗೆ ನಾವು ಘೋಷಣೆ ಮಾಡುತ್ತೇವೆ. ಆಗಸ್ಟ್ ತಿಂಗಳಿಂದ ಮನೆ ಯಜಮಾನಿ ಖಾತೆಗೆ 2 ಸಾವಿರ ರೂ. ಹಾಕುತ್ತೇವೆ ಎಂದರು. ಅರ್ಜಿ ಸ್ವೀಕಾರ ಜುಲೈ 14ರಿಂದ ಆರಂಭವಾಗಲಿದ್ದು, ಆಗಸ್ಟ್ 15ಕ್ಕೆ ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮೆ ಆಗಲಿದೆ. ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ಗಳಲ್ಲಿ ಯಜಮಾನಿ ಎಂದು ಗುರುತಿಸಿಕೊಂಡ ಮಹಿಳೆಯರಿಗೆ ಈ ಯೋಜನೆಯ ಲಾಭ ಸಿಗಲಿದೆ’ ಎಂದಿದ್ದಾರೆ.

ಇದನ್ನೂ ಓದಿ: Free current Scheme: ಉಚಿತ ವಿದ್ಯುತ್ ಅರ್ಜಿ ಪಡೆಯಲು ಸರ್ಕಾರದಿಂದ ಡೆಡ್ ಲೈನ್ ಘೋಷಣೆ

You may also like

Leave a Comment