Tumkur: ನೀರಿಗೆ ಬಿದ್ದ ತನ್ನ ಇಬ್ಬರು ಮಕ್ಕಳನ್ನು ರಕ್ಷಿಸಲು ನದಿಗೆ ಹಾರಿ ತನ್ನ ಮಕ್ಕಳನ್ನು ರಕ್ಷಿಸಿ ತಾನು ಪ್ರಾಣತ್ಯಾಗ ಮಾಡಿಕೊಂಡ ಘಟನೆ ತುಮಕೂರು (Tumkur) ಜಿಲ್ಲೆಯಲ್ಲಿ ನಡೆದಿದೆ.
ಮನು (30) ಮೃತ ಮಹಿಳೆಯಾಗಿದ್ದಾರೆ. ಅವರು ತನ್ನ ಇಬ್ಬರು ಪುಟಾಣಿ ಮಕ್ಕಳೊಂದಿಗೆ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದರು. ಈ ವೇಳೆ ಮಕ್ಕಳು ಕೆರೆ ದಡದಲ್ಲಿ ಆಟವಾಡುತ್ತಿದ್ದರು. ಈ ವೇಳೆ ಇಬ್ಬರು ಮಕ್ಕಳು ಕೂಡ ಆಕಸ್ಮಾತ್ ಆಗಿ ಕೆರೆಗೆ ಬಿದ್ದಿದ್ದಾರೆ.
ಮನು ಅವರಿಗೆ ಈಜು ಬರುತ್ತಿರಲಿಲ್ಲ. ತನಗೆ ಈಜು ಬಾರದಿದ್ದರೂ ಆಕೆ ಮಕ್ಕಳನ್ನು ರಕ್ಷಿಸಲು ನೀರಿಗೆ ಹಾರಿದ್ದಾಳೆ. ಅಷ್ಟೇ ಅಲ್ಲದೆ, ನೀರಿಗೆ ಬಿದ್ದ ತನ್ನಿಬ್ಬರು ಮಕ್ಕಳನ್ನು ಕೂಡಾ ಆಕೆ ರಕ್ಷಿಸಿ ದಡ ಸೇರಿಸಿದ್ದು ತಾನು ಮಾತ್ರ ನೀರುಪಾಲಾದ ದುರ್ಘಟನೆ ಇದಾಗಿದೆ.
ಈ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ರಥಸಂದ್ರ ಗ್ರಾಮದ ಕೆರೆಯಲ್ಲಿ ನಡೆದಿದೆ. ತಕ್ಷಣವೇ ಕೆರೆಗೆ ಹಾರಿದ ಮನು ಮಕ್ಕಳಿಬ್ಬರನ್ನು ರಕ್ಷಿಸಿ ನೀರಿನಿಂದ ಮೇಲೆ ಎತ್ತಿ ಹಾಕಿದ್ದಾಳೆ. ಮಕ್ಕಳನ್ನು ಮೇಲಕ್ಕೆ ಎತ್ತಿ ಹಾಕುವಷ್ಟರಲ್ಲಿ ಆಕೆ ತನ್ನೆಲ್ಲ ಶಕ್ತಿಯನ್ನು ಕಳೆದುಕೊಂಡಿದ್ದಾಳೆ. ಅಷ್ಟರಲ್ಲಿ ಈಜು ಬಾರದ ಕಾರಣ ಆಕೆ ನೀರಿನಿಂದ ಮೇಲೆ ಬರಲಾಗದೇ ಕೆರೆಯಲ್ಲೇ ಮುಳುಗಿ ಸಾವನ್ನಪ್ಪಿದ್ದಾಳೆ. ಇಬ್ಬರು ಮಕ್ಕಳಿಗೆ ಎರಡನೆಯ ಬಾರಿ ಜೀವ ನೀಡಿದ ಅಮ್ಮನ ಪ್ರಾಣ ಕೆರೆಯಲ್ಲಿ ಚೆಲ್ಲಿ ಕೊಂಡಿದೆ.
ಇದನ್ನೂ ಓದಿ: ʼಪೊಗರುʼ ಚಿತ್ರದಲ್ಲಿ ನಟಿಸಿದ, ಕಬ್ಬಿಣದ ಬಾಡಿ ಹೊಂದಿದ ನಟ 30ರ ಹರೆಯದಲ್ಲೇ ಸಾವು!
