Nicotine: ಆಗ ತಾನೇ ಹುಟ್ಟಿದ ಮಗುವಿನ ದೇಹದಲ್ಲಿ 60 ಮಿ.ಲೀ. ನಿಕೋಟಿನ್(Nicotine) ಪತ್ತೆಯಾಗಿದೆ. ಹೌದು, ಆಗಷ್ಟೇ ಹುಟ್ಟಿದ ಮಗು ಅಳುತ್ತಿರಲಿಲ್ಲ. ಅಷ್ಟೇ ಅಲ್ಲ ಮೈಯೆಲ್ಲಾ ನೀಲಿಗಟ್ಟಿತ್ತು. ಇದರಿಂದಾಗಿ ಮಗುವನ್ನು ತಕ್ಷಣವೇ ಐಸಿಯುನಲ್ಲಿ ಇರಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೇರೆಡೆ ಆಸ್ಪತ್ರೆಗೆ ಮಗುವನ್ನು ಕರೆದೊಯ್ದಾಗ ಅಲ್ಲಿನ ವೈದ್ಯರಿಗೆ ಅಚ್ಚರಿಯೇ ಕಾದಿತ್ತು.
ಯಾಕಂದ್ರೆ ಮಗುವನ್ನು ಪರೀಕ್ಷಿಸಿದಾಗ ವೈದ್ಯರಿಗೆ ಮಗುವಿನ ದೇಹದಲ್ಲಿ 60 ಎಂಎಲ್ನಷ್ಟು ನಿಕೋಟಿನ್ ಇರುವುದು ಪತ್ತೆಯಾಗಿದೆ. ಅದು ಹೇಗೆ ಬಂತು ಗೊತ್ತಾ? ಇದು ಬಂದಿದ್ದು ತಾಯಿಯಿಂದಲೇ. ತಾಯಿಯ ಕೆಟ್ಟ ಚಟದಿಂದ.
ಹೌದು, ಆರಂಭದಲ್ಲಿ ಮಗುವಿಗೆ ಉಸಿರಾಟದ ಸಮಸ್ಯೆ ಕಂಡುಬಂದಿದೆ. ನಂತರ ಮಗುವನ್ನು ಪರೀಕ್ಷಿಸಿದಾಗ ದೇಹದಲ್ಲಿ ನಿಕೋಟಿನ್ ಅಂಶ ಪತ್ತೆಯಾಗಿದೆ. ತಾಯಿಯ ತಂಬಾಕಿನ ಚಟ ಮಗುವಿಗೆ ತಗುಲಿದೆ.
ಮಹಿಳೆ 15ನೇ ವಯಸ್ಸಿನಿಂದ ತಂಬಾಕು ಚಟಕ್ಕೆ ಒಳಗಾಗಿದ್ದರು.
ತಾಯಿ ತಂಬಾಕು ವ್ಯಸನಿ, ದಿನಕ್ಕೆ 10-15 ಬಾರಿ ತಂಬಾಕು ಸೇವಿಸುತ್ತಿದ್ದಳು. ಆ ನಿಕೋಟಿನ್ ರಕ್ತದ ಮೂಲಕ ಭ್ರೂಣವನ್ನು ತಲುಪಿದೆ. ಇದೀಗ 5 ದಿನಗಳ ಬಳಿಕ ಮಗುವಿನ ಆರೋಗ್ಯ ಸುಧಾರಿಸುತ್ತಿದೆ
