Shruti Haasan: ನಟಿ ಶೃತಿ ಹಾಸನ್(Shruti Haasan) ಹಾಗೂ ಶಾಂತನು ಹಜಾರಿಕಾ (Shantanu Hajarika) ಪರಸ್ಪರ ಪ್ರೀತಿಸುತ್ತಿದ್ದಾರೆ. ಇವರ ಬಗ್ಗೆ ಗೊತ್ತಿಲ್ಲದವರೇ ಇಲ್ಲ. ಈ ಇಬ್ಬರು ಮುಂಬೈನ ಐಷಾರಾಮಿ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದು, ಲೀವ್ ಇನ್ ರಿಲೇಶನ್ಶಿಪ್ ನಲ್ಲಿದ್ದಾರೆ. ಇದಕ್ಕೆ ಅವರ ಕುಟುಂಬದವರ ಬೆಂಬಲವೂ ಇದೆ. ನಟಿ ಶ್ರುತಿ ಹಾಸನ್ ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಆಕ್ಟಿವ್ ಆಗಿರುತ್ತಾರೆ. ಅವರು ಆಗಾಗ ಶಾಂತನು ಜೊತೆಗಿನ ಹೊಸ ಹೊಸ ವಿಡಿಯೋ, ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಇದೀಗ ನಟಿ ತನ್ನ ಬಾಯ್ ಫ್ರೆಂಡ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ ಗೊತ್ತಾ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
ಕಮಲ್ ಹಾಸನ್ (Kamal Haasan) ಮಗಳು ನಟಿ ಶ್ರುತಿ ಹಾಸನ್ (Shruthi Haasan) ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಶ್ರುತಿ ಹಾಸನ್ ಬಾಯ್ಫ್ರೆಂಡ್ ವಿಚಾರಕ್ಕೂ ಆಗಾಗ ಸುದ್ದಿ ಆಗುತ್ತಾರೆ. ಇದೀಗ ತನ್ನ ಬಾಯ್ ಫ್ರೆಂಡ್ ಶಾಂತನು ಅವರನ್ನು ‘ಭೂಮಿಯಲ್ಲಿರುವ ಮೋಸ್ಟ್ ಅನ್ರೊಮ್ಯಾಂಟಿಕ್’(Most unromantic) ವ್ಯಕ್ತಿ ಎಂದು ಕರೆದಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ.
ಶ್ರುತಿ ತನಗಾಗಿ ಹೂವುಗಳನ್ನು(flower) ಆರ್ಡರ್ ಮಾಡಿದ್ದರು, ಆದರೆ ಶಾಂತನು ಅವುಗಳನ್ನು ತೆಗೆದುಕೊಂಡನು. ಇದಕ್ಕೆ ಕೋಪಗೊಂಡ ಶ್ರುತಿ ಹಾಸನ್ “ಈ ಹೂವುಗಳನ್ನು ನನಗಾಗಿ ಆರ್ಡರ್ ಮಾಡಿದ್ದೇನೆ. ನೀನು ಮೋಸ್ಟ್ ಅನ್ರೊಮ್ಯಾಂಟಿಕ್ ವ್ಯಕ್ತಿ. ನನಗಾಗಿ ನೀನು ಎಂದಿಗೂ ಹೂವುಗಳನ್ನು ತಂದುಕೊಡಲಿಲ್ಲ. ಹಾಗಾಗಿ ನಾನೇ ಆರ್ಡರ್ ಮಾಡಿ ತೆಗೆದುಕೊಂಡೆ’ ಎಂದಿದ್ದಾರೆ. ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ನಟಿ ಶ್ರುತಿ ಹಾಸನ್ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಶ್ರುತಿ ಹಾಸನ್ ಗೆ ಈ ವರ್ಷದ ಆರಂಭದಲ್ಲಿ, ಎರಡು ಹಿಟ್ ಸಿನಿಮಾಗಳು ದೊರೆತವು. ಚಿರಂಜೀವಿ ಅಭಿನಯದ ವಾಲ್ತೇರು ವೀರಯ್ಯ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದರೆ, ಬಾಲಯ್ಯ ವೀರಸಿಂಹ ರೆಡ್ಡಿ ಸಿನಿಮಾ ಕೂಡ ಸೂಪರ್ ಹಿಟ್ ಆಯಿತು. ಅಲ್ಲದೆ ಅವರ ನಟನೆಯ ‘ಸಲಾರ್’ ಸಿನಿಮಾ ಸಹ ಸದ್ದು ಮಾಡುವ ನಿರೀಕ್ಷೆಯಿದೆ. ಈ ಚಿತ್ರದಲ್ಲಿ ಪ್ರಭಾಸ್ಗೆ ಜೊತೆಯಾಗಿ ನಟಿಸಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾವು ಸೆಪ್ಟೆಂಬರ್ ತಿಂಗಳಲ್ಲಿ ತೆರೆ ಕಾಣಲಿದೆ.
ಇದನ್ನು ಓದಿ: Crime News: ಸೋದರ ಮಾವನಿಂದ ಸೊಸೆಯ ಅತ್ಯಾಚಾರಕ್ಕೆ ಯತ್ನ; ಬ್ಲೇಡ್‌ನಿಂದ ಆತನ ʼಪ್ರೈವೇಟ್ ಪಾರ್ಟ್ʼನ್ನೇ ಕತ್ತರಿಸಿದ ಯುವತಿ!
