Home » Pension For Unmarried people: ಅವಿವಾಹಿತರಿಗೆ ಪಿಂಚಣಿ ಘೋಷಿಸಿದ ಸರ್ಕಾರ, 30 ದಿನದ ಒಳಗೆ ಜಾರಿ

Pension For Unmarried people: ಅವಿವಾಹಿತರಿಗೆ ಪಿಂಚಣಿ ಘೋಷಿಸಿದ ಸರ್ಕಾರ, 30 ದಿನದ ಒಳಗೆ ಜಾರಿ

by Mallika
0 comments
Pension For Unmarried people

Pension For Unmarried people: ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್(Manohar Lal Khattar) ಅವರು ರಾಜ್ಯದಲ್ಲಿ ಅವಿವಾಹಿತರಿಗೆ ಶೀಘ್ರದಲ್ಲೇ ಪಿಂಚಣಿ (Pension For Unmarried people) ಯೋಜನೆಯನ್ನು ಜಾರಿಗೆ ತರುವುದಾಗಿ ಘೋಷಿಸಿದ್ದಾರೆ. ಇನ್ನೊಂದು ತಿಂಗಳೊಳಗೆ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಕರ್ನಾಲ್ ಜಿಲ್ಲೆಯ ಕಲಂಪುರ್‌ದಲ್ಲಿ ನಡೆದ ಜನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “45-60 ವಯೋಮಾನದ ಅವಿವಾಹಿತರಿಗೆ ರಾಜ್ಯ ಸರ್ಕಾರದಿಂದ ಪಿಂಚಣಿ ಕೊಡುವ ಬಗ್ಗೆ ಚರ್ಚಿಸಲಾಗಿದ್ದು, ಇನ್ನೊಂದು ತಿಂಗಳಲ್ಲಿ ಈ ಬಗ್ಗೆ ಸಚಿವ ಸಂಪುಟದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂದು ಖಟ್ಟರ್ ಭರವಸೆ ನೀಡಿದ್ದಾರೆ.

‘ಜನ ಸಂವಾದ’ ಕಾರ್ಯಕ್ರಮದ ಸಂದರ್ಭದಲ್ಲಿ 60 ವರ್ಷದ ಅವಿವಾಹಿತ ವ್ಯಕ್ತಿಯ ಪಿಂಚಣಿ (pension) ಸಂಬಂಧಿತ ದೂರಿಗೆ ಪ್ರತಿಕ್ರಿಯಿಸಿದ ಖಟ್ಟರ್, ‘ನಮ್ಮ ಸರ್ಕಾರವು ಹೊಸ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಯೋಜಿಸುತ್ತಿದೆ’ ಎಂದು ಹೇಳಿದರು. ಇದೇ ವೇಳೆ, ಮುಂದಿನ ಆರು ತಿಂಗಳೊಳಗೆ ರಾಜ್ಯದಲ್ಲಿ ವೃದ್ಧ ಪಿಂಚಣಿಯನ್ನು(OLD age pension) ತಿಂಗಳಿಗೆ 3000 ರೂ.ಗೆ ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದರು.

ಅವಿವಾಹಿತರಿಗೆ ಪಿಂಚಣಿ ನೀಡುವ ಯೋಜನೆಯನ್ನು ಜಾರಿಗೆ ತರುವುದಾಗಿ ಸಿಎಂ ಮನೋಹರ್ ಲಾಲ್ ಖಟ್ಟರ್ ಘೋಷಿಸಿದ್ದಾರೆ. ಕರ್ನಾಲ್‌ ಜಿಲ್ಲೆಯ ಕಲಾಂಪುರ ಗ್ರಾಮದಲ್ಲಿ ಸೋಮವಾರ ನಡೆದ ಜನಸಂವಾದ ಕಾರ್ಯಕ್ರಮದಲ್ಲಿ ಈ ವಿಚಾರವನ್ನು ಪಸ್ತಾಪಿಸಿದರು.

ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ಇಂಟರ್‌ನೆಟ್ ಸಂಪರ್ಕ ಕಲ್ಪಿಸುವಂತೆ ಕರ್ನಾಲ್ ಜಿಲ್ಲಾಧಿಕಾರಿಗೆ ಮುಖ್ಯಮಂತ್ರಿ ಸೂಚಿಸಿದರು. ಶೇ.70 ರಿಂದ ಶೇ.80ರಷ್ಟು ಕೆಲಸಗಳು ಆನ್‌ಲೈನ್‌ನಲ್ಲಿ ನಡೆಯುತ್ತಿದ್ದು, ಹಾಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್‌ನೆಟ್‌ ಸೇವೆ ಅಗತ್ಯವಾಗಿದ್ದು, ಪ್ರತಿ ಹಳ್ಳಿಗೂ ಬಿಎಸ್‌ಎನ್‌ಎಲ್‌ ಇಂಟರ್‌ನೆಟ್‌ ಸೇವೆ ದೊರೆಯುವ ಮೊದಲ ಜಿಲ್ಲೆ ಕರ್ನಾಲ್ ಆಗಲಿದೆ ಎಂದು ಹೇಳಿದರು.

 

ಇದನ್ನು ಓದಿ: LPG price Hiked: LPG ಬೆಲೆಯಲ್ಲಿ ದಿಡೀರ್ ಹೆಚ್ಚಳ, ತಕ್ಷಣದಿಂದ ಜಾರಿ 

You may also like

Leave a Comment