Home » Wimbledon 2023: ಆ ಕೊಠಡಿಯಲ್ಲಿ ಮಜಾ ಮಾಡಬೇಡಿ ಅಂದ ವಿಂಬಲ್ಡನ್ ತಂಡ, ಅದ್ಯಾಕೆ ಈ ರೂಲ್ಸ್ ?!

Wimbledon 2023: ಆ ಕೊಠಡಿಯಲ್ಲಿ ಮಜಾ ಮಾಡಬೇಡಿ ಅಂದ ವಿಂಬಲ್ಡನ್ ತಂಡ, ಅದ್ಯಾಕೆ ಈ ರೂಲ್ಸ್ ?!

0 comments

Wimbledon 2023: ವಿಂಬಲ್ಡನ್ ‘ಸ್ತಬ್ಧ ಕೊಠಡಿ’ಯನ್ನು (Quite Rooms) ಪ್ರಾರ್ಥನೆ, ಧ್ಯಾನಕ್ಕಾಗಿ ಮಾಡುವ ಸಲುವಾಗಿ ಪ್ರತ್ಯೇಕವಾಗಿ ಮೀಸಲಿಡಲಾಗಿದೆ. ಈ ಕೋಣೆಯನ್ನು ಲೈಂಗಿಕತೆಗೆ ಮತ್ತು ಆತ್ಮೀಯವಾಗಿರಲು ಬಳಕೆ ಮಾಡಬಾರದು ಎಂದು ಆಟಗಾರರು ಮತ್ತು ಪ್ರೇಕ್ಷಕರಿಗೆ ಟೂರ್ನಮೆಂಟ್ ಉನ್ನತ ಮಟ್ಟದ ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ.

2023ರ ಗ್ರ್ಯಾನ್ ಸ್ಲಾಮ್ ಜುಲೈ 3 ರಿಂದ ಆರಂಭವಾಗಿದ್ದು, ಟೆನಿಸ್ ಕ್ಯಾಲೆಂಡರ್ನಲ್ಲಿ ವಿಂಬಲ್ಡನ್ ಎಂಬುದು ಗ್ರಾಂಡ್ ಸ್ಲಾಮ್ ಆಗಿದ್ದು, ಈ ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ.ಈ ಹಿನ್ನೆಲೆಯಲ್ಲಿ ಶಾಂತಿಯನ್ನು ಸಾರುವ ಸ್ತಬ್ದ ಕೊಠಡಿಗಳನ್ನು(Quite Rooms) ದಂಪತಿಗಳು ಲೈಂಗಿಕತೆಗೆ ಬಳಕೆ ಮಾಡದಂತೆ ಟೂರ್ನಮೆಂಟ್ ಉನ್ನತ ಅಧಿಕಾರಿಗಳು ಆಟಗಾರರು ಮತ್ತು ಪ್ರೇಕ್ಷಕರಿಗೆ ಎಚ್ಚರಿಕೆ ನೀಡಿದ್ದಾರೆ.

ಪವಿತ್ರ ಸ್ಥಳದಲ್ಲಿ ಅನೈತಿಕ ಚಟುವಟಿಕೆಗೆ ಬಳಕೆ ಮಾಡುತ್ತಿದ್ದ ಆರೋಪ ಕೇಳಿ ಬಂದ ಹಿನ್ನೆಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ.ಆಲ್ ಇಂಗ್ಲೆಂಡ್ ಲಾನ್ ಟೆನಿಸ್ ಕ್ಲಬ್ (AELTC) ಮುಖ್ಯ ಕಾರ್ಯನಿರ್ವಾಹಕ ಸ್ಯಾಲಿ ಬೋಲ್ಟನ್ ಅವರು ‘ಸ್ಯಾಂಚುರಿ’ ಒಂದು ಪ್ರಮುಖ ಪವಿತ್ರ ಸ್ಥಳವಾಗಿದ್ದು, ಅದನ್ನು ಗೌರವಿಸುವಂತೆ ಒತ್ತಾಯ ಮಾಡಿದ್ದಾರೆ.ಜನರು ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಬೇಕೆಂಬುದು ನಮ್ಮ ಅಭಿಲಾಷೆ ಎಂದು ಯುಕೆಯಲ್ಲಿನ ದಿ ಟೆಲಿಗ್ರಾಫ್ ಪತ್ರಿಕೆಯು ಉಲ್ಲೇಖ ಮಾಡಿದೆ.

ಟೂರ್ನಮೆಂಟ್ ನಡೆಯುವ ಈ ಸ್ಥಳದಲ್ಲಿ ಎರಡು ಕೋಣೆಗಳನ್ನು ರಚಿಸಲಾಗಿದೆ. ಒಂದನ್ನು ಸುರಕ್ಷಿತ ಸ್ಥಳವೆಂದು ಗುರುತಿಸಲಾಗಿದೆ. ಜನದಟ್ಟಣೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಜನರು ಅಲ್ಲಿಗೆ ಪ್ರವೇಶಿಸಬಹುದು. ಆದರೆ, ಮತ್ತೊಂದು ಕೊಠಡಿಯಲ್ಲಿ ಲೈಂಗಿಕ ಕ್ರಿಯೆಗೆ ಬಳಕೆ ಆದ ಹಿನ್ನೆಲೆಯಲ್ಲಿ ವಿಂಬಲ್ಡನ್ ಅಧಿಕಾರಿಗಳು, ಈ ಕೊಠಡಿಗಳನ್ನು ಪ್ರಾರ್ಥನೆ, ಧ್ಯಾನ, ಹಾಲುಣಿಸಲು ಮಾತ್ರ ಬಳಸಬೇಕು ಎಂದು ಸೂಚಿಸಿದ್ದಾರೆ.

You may also like

Leave a Comment