Ration Card – Aadhaar Link : ರಾಜ್ಯದ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ (Government) ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ. ಇದೀಗ ಪಡಿತರ ಚೀಟಿ ಫಲಾನುಭವಿಗಳಿಗೆ ಮುಖ್ಯ ಮಾಹಿತಿಯೊಂದು (Ration Card Big Update) ಹೊರಬಿದ್ದಿದೆ. ಈ ಹಿಂದೆ ಕೇಂದ್ರ ಸರ್ಕಾರವು ಪಡಿತರ ಚೀಟಿಯೊಂದಿಗೆ (Ration Card) ಆಧಾರ್ ಕಾರ್ಡ್ ಲಿಂಕ್ ಮಾಡಲು ಸೂಚನೆ ನೀಡಿದೆ. ಜೂನ್ 30ರೊಳಗೆ ಪಡಿತರ ಚೀಟಿಯನ್ನು ಆಧಾರ್ ಕಾರ್ಡ್’ಗೆ ಲಿಂಕ್ ಮಾಡದಿದ್ದರೆ ಪಡಿತರ ಚೀಟಿ ರದ್ದಾಗುತ್ತದೆ ಎಂದು ಹೇಳಲಾಗಿತ್ತು.
ಇದೀಗ ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ (Ration Card – Aadhaar Link) ಮಾಡುವ ಗಡುವು ಮುಂದೂಡಲಾಗಿದೆ. ರೇಷನ್ ಕಾರ್ಡ್ಗೆ ಆಧಾರ್ ನಂಬರ್ ಲಿಂಕ್ ಮಾಡುವ ಕಾರ್ಯಕ್ಕೆ ಜೂನ್ 30 ಎಂದು ಇದ್ದ ಡೆಡ್ಲೈನ್ ಅನ್ನು ಸೆಪ್ಟಂಬರ್ 30ಕ್ಕೆ ವಿಸ್ತರಿಸಲಾಗಿದೆ. ನೀವು ಸಮೀಪದ ಪಡಿತರ ಕಚೇರಿಗೆ ಹೋಗಿ ಉಚಿತವಾಗಿ ಆಧಾರ್ ನಂಬರ್ ಲಿಂಕ್ ಮಾಡಬಹುದು. ಅಥವಾ ಆನ್ಲೈನ್ನಲ್ಲೂ ಲಿಂಕ್ ಮಾಡಬಹುದು.
ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಕುಟಂಬ ಪಡಿತರ (Priority Household Ration) ಯೋಜನೆಯ ಫಲಾನುಭವಿಗಳು ತಮ್ಮ ರೇಷನ್ ಕಾರ್ಡನ್ನು ಆಧಾರ್ಗೆ ಲಿಂಕ್ ಮಾಡುವುದು ಕಡ್ಡಾಯಪಡಿಸಲಾಗಿದೆ. ನಕಲು ಪಡಿತರ ಚೀಟಿಗಳು ಬರುತ್ತಿದ್ದು, ಸುಳ್ಳು ಹೇಳಿ ಜನರು ಪಡಿತರ ಚೀಟಿ ಪಡೆಯುವುದನ್ನು ತಪ್ಪಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ.
ಆನ್ಲೈನ್ನಲ್ಲಿ ಆಧಾರ್, ರೇಷನ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?
• ಸರ್ಕಾರದ ಅಧಿಕೃತ ವೆಬ್ಸೈಟ್ food.wb.gov.in ಗೆ ಭೇಟಿ ನೀಡಿ.
• ಅಗತ್ಯವಿರುವ ವಿವರಗಳನ್ನು ನಮೂದಿಸಿ. ಆಧಾರ್ ಕಾರ್ಡ್ ಸಂಖ್ಯೆ, ಪಡಿತರ ಚೀಟಿ ಸಂಖ್ಯೆ ಮತ್ತು ನಿಮ್ಮ ನೋಂದಾಯಿತ ಮೊಬೈಲ್ ಯನ್ನು ಎಂಟ್ರಿ ಮಾಡಬೇಕು.
• ಮುಂದುವರೆಸಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ಅಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಫೋನ್ ಸಂಖ್ಯೆಗೆ ಒಂದು ಓಟಿಪಿ ಬರುತ್ತದೆ.
• ಆ ಓಟಿಪಿ ಅಂಕೆಯನ್ನು ಅಲ್ಲೇ ನೀಡಲಾಗುವ ಜಾಗದಲ್ಲಿ ಭರ್ತಿ ಮಾಡಿದ್ರೆ ನಿಮ್ಮ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ಗಳು ಒಂದಕ್ಕೊಂದು ಲಿಂಕ್ ಆಗುತ್ತವೆ.
ರೇಷನ್ ಕಾರ್ಡ್’ಗೆ ಆಧಾರ್ ಲಿಂಕ್ ಮಾಡೋದು ಹೇಗೆ?
• ನಿಮ್ಮ ರೇಷನ್ ಕಾರ್ಡ್ನಲ್ಲಿರುವ ಎಲ್ಲಾ ಕುಟುಂಬ ಸದಸ್ಯರ ಆಧಾರ್ ಕಾರ್ಡ್ನ ಫೋಟೋ ಕಾಪಿ ತೆಗೆದುಕೊಂಡು ಸಮೀಪದ ರೇಷನ್ ಅಂಗಡಿಗೆ ಹೋಗಬೇಕು.
• ರೇಷನ್ ಕಾರ್ಡ್ ಯಾರ ಹೆಸರಲ್ಲಿದೆಯೋ ಅವರ ಪಾಸ್ಪೋರ್ಟ್ ಗಾತ್ರದ ಫೋಟೋ ತೆಗೆದುಕೊಂಡು ಹೋಗಬೇಕು.
• ನಿಮ್ಮ ಬ್ಯಾಂಕ್ ಖಾತೆ ಆಧಾರ್ಗೆ ಲಿಂಕ್ ಆಗಿಲ್ಲದೇ ಇದ್ದರೆ ಬ್ಯಾಂಕ್ ಪಾಸ್ಬುಕ್ನ ಒಂದು ಪ್ರತಿ ಇವೆಲ್ಲಾ ಪಡಿತರ ಅಂಗಡಿಯಲ್ಲಿ ನೀಡಿ.
• ಅಲ್ಲಿ ನಿಮ್ಮ ಆಧಾರ್ ಬಯೋಮೆಟ್ರಿಕ್ ಮಾಹಿತಿ ದೃಢಪಡಿಸಲು ಫಿಂಗರ್ ಪ್ರಿಂಟ್ ಪಡೆಯಲಾಗುತ್ತದೆ.
• ಬಳಿಕ ಆಧಾರ್ ಜೊತೆ ನೊಂದಾಯಿತವಾದ ನಿಮ್ಮ ಮೊಬೈಲ್ ನಂಬರ್ಗೆ ಸಂದೇಶ ಬರುತ್ತದೆ.
ಇದನ್ನು ಓದಿ: RTO Rules Break: ಶಕ್ತಿ ಯೋಜನೆಗೆ ಶಾಕ್ ಕೊಟ್ಟ RTO – ಪ್ರತಿ ಪ್ರಯಾಣಿಕನಿಗೆ 200 ರೂ. ದಂಡ ?!
