Rekha nair: ನಟನೆ ಜೊತೆಗೆ ತಮ್ಮ ಮಾತುಗಳಿಂದಲೂ ಆಗಾಗ ವಿವಾದಕ್ಕೀಡಾಗುವ ನಟಿ ರೇಖಾ ನಾಯರ್(Rekha nair) ಇದೀಗ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಮತ್ತೊಮ್ಮೆ ಸುದ್ದಿಗೆ ಗ್ರಾಸವಾಗಿದ್ದು, ಅವರ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ.
ಹೌದು, ಕಾಲಿವುಡ್(Kollywood) ನಟ ಪಾರ್ಥಿಬನ್(Parthiban) ನಿರ್ದೇಶನದ ಇರವಿನ್ ನಿಹಾಲ್ ಸಿನಿಮಾದಲ್ಲಿ ಬೆತ್ತಲೆ ದೃಶ್ಯದಲ್ಲಿ ನಟಿಸುವ ಮೂಲಕ ಭಾರೀ ಸುದ್ದಿಯಾಗಿದ್ದ ನಟಿ ರೇಖಾ ನಾಯರ್ ಇದೀಗ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಮತ್ತೊಮ್ಮೆ ಸುದ್ದಿಗೆ ಗ್ರಾಸವಾಗಿದ್ದಾರೆ. ಇತ್ತೀಚೆಗೆ ಅವರು ಯೂಟ್ಯೂಬ್‌ಗೆ(You tube)ನೀಡಿದ ಸಂದರ್ಶನ ಈಗ ವಿವಾದಕ್ಕೆ ಕಾರಣವಾಗಿದ್ದು, ಅವರು ನೀಡಿದ ಹೇಳಿಕೆಯೊಂದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.
ಸಂದರ್ಶನದಲ್ಲಿ ರೇಖಾ ಅವರಿಗೆ ‘ ಇತ್ತೀಚೆಗೆ ಹುಡುಗಿಯರು ತುಂಬಾ ಸೆಕ್ಸಿಯಾಗಿರುವಂತಹ ಉಡುಗೆಗಳನ್ನು ಧರಿಸುತ್ತಾರೆ. ಈ ಬಗ್ಗೆ ನಿಮ್ಮಅಭಿಪ್ರಾಯಏನು? ಎಂದು ಪ್ರಶ್ನಿಸಲಾಗಿದೆ. ಆಗ ರೇಖಾ ಅವರು “ಹುಡುಗಿಯರ ಸೊಂಟದ ಮೇಲೆ ಪುರುಷರು ಕೈಯಿಟ್ಟರೆ ಅದನ್ನು ಅವರು ಎಂಜಾಯ್(Enjoy) ಮಾಡಬೇಕು. ಅದನ್ನು ಬಿಟ್ಟು, ಪೋಲೀಸ್(Police) ಠಾಣೆಗೆ ತೆರಳಿ ದೂರು ನೀಡಬಾರದು. ಹೀಗೆ ಮಾಡೋದ್ರಿಂದ ಹುಡುಗಿಯರು ತಮ್ಮ ಸ್ವಾತಂತ್ರ್ಯವನ್ನು ದುರಪಯೋಗಪಡಿಸಿಕೊಳ್ಳುತ್ತಿದ್ದಾರೆ” ಎಂದು ತುಂಬಾ ಬೋಲ್ಡ್ ಉತ್ತರವನ್ನು ನೀಡಿದ್ದಾರೆ.
ಅಲ್ಲದೆ “ನಾನು ಹಾಕುವ ಡ್ರೆಸ್‌ನ(Dress) ಬಗ್ಗೆ ಸಾಕಷ್ಟು ಮಹಿಳೆಯರು ಪ್ರಶ್ನೆ ಮಾಡುತ್ತಾರೆ. ಹಾಗೇನಾದರೂ ನಾನು ಸೊಂಟ ಕಾಣಿಸುವಂಥ ಡ್ರೆಸ್ ಹಾಕಿದ್ದಾಗ, ಯಾರಾದರೂ ಪುರುಷ ನನ್ನ ಸೊಂಟದ ಮೇಲೆ ಕೈಯಿಟ್ಟರೆ ನಾನದನ್ನು ಎಂಜಾಯ್ ಮಾಡುತ್ತೇನೆ. ಸೀರೆ(Saree) ಉಟ್ಟುಕೊಂಡಾಗ ಸೊಂಟ ಕಾಣೋದು ಸಾಮಾನ್ಯ. ನಾನೂ ಹಾಗೆಯೇ ಉಡುತ್ತೇನೆ. ಬಸ್‌ನಲ್ಲಿ ಹೋಗುವಾಗ ಯಾವುದಾದರೂ ಹುಡುಗರು ನನ್ನ ಸೊಂಟದ ಮೇಲೆ ಕೈಯಿಟ್ಟರೆ ನನಗೇನೂ ಅನಿಸೋದಿಲ್ಲ. ಸೊಂಟ ಕಾಣುವಂಥ ಡ್ರೆಸ್ ಹಾಕಿಕೊಂಡು ಮಾಲ್‌ಗೆ ಹೋದಾಗ, ಹುಡುಗ್ರು ಅದನ್ನೇ ನೋಡುತ್ತಾರೆ. ಹಾಗೇನಾದರೂ ನಾನು ಸ್ವಲ್ಪ ಪ್ರಮಾಣದಲ್ಲಿ ನನ್ನ ಬ್ಲೌಸ್‌ಅನ್ನು ಜಾರಿಸಿದರೆ, ಆತ ದಿಟ್ಟಿಸಿ ನೋಡವುದು ಇನ್ನೂ ಹೆಚ್ಚಾಗುತ್ತದೆ. ಈ ದಿನಗಳಲ್ಲಿ ಮಹಿಳೆಯರೂ ಕೂಡ ಇಂಥ ಮಾನಸಿಕತೆಗಳಿಂದ ಹೊರಬರಬೇಕು ಎಂದು ಹೇಳಿದ್ದಾರೆ ನಟಿ ರೇಖಾ.
ಅಂದಹಾಗೆ ರೇಖಾ ಅವರು ಕೆಲ ಸಿನಿಮಾ ಮತ್ತು ಟೆಲಿವಿಷನ್ ಶೋಗಳಲ್ಲಿ ನಟಿಸಿದ್ದಾರೆ. ವಿವಾದಗಳಿಂದಲೇ ಆಗಾಗ ರೇಖಾ ಸದ್ದು ಮಾಡುತ್ತಿರುತ್ತಾರೆ. ಇರವಿನ್ ನಿಹಾಲ್ ಸಿನಿಮಾದಲ್ಲಿ ಪಾರ್ಥಿಬನ್ ತಾಯಿಯ ಪಾತ್ರ ಮಾಡಿರುವ ನಟಿ ರೇಖಾ ನಾಯರ್, ತಮ್ಮ ಎದೆಯ ಭಾಗವನ್ನು ತೋರಿಸುವ ದೃಶ್ಯವೊಂದರಲ್ಲಿ ನಟಿಸಿದ್ದಾರೆ. ಇದೇ ದೃಶ್ಯದಿಂದಾಗಿ ನಟ-ವಿಮರ್ಶಕ ಬೈಲ್ವಾನ್ ರಂಗನಾಥನ್ ಅವರು ರೇಖಾ ನಾಯರ್ ಅವರನ್ನು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಕಟುವಾಗಿ ಟೀಕಿಸಿದ್ದರು. ಇದರ ಬೆನ್ನಲ್ಲೇ ರಂಗನಾಥನ್ ಅವರು ಮುಂಜಾನೆ ಜಾಗಿಂಗ್ ಮಾಡುವಾಗ ಸಾರ್ವಜನಿಕ ಸ್ಥಳದಲ್ಲಿ ಎದುರಾದ ಅವರನ್ನು ರೇಖಾ ನಾಯರ್ ತರಾಟೆಗೆ ತೆಗೆದುಕೊಂಡಿದ್ದರು. ಇದು ಭಾರೀ ಸುದ್ದಿಯಾಗಿತ್ತು.
