Home » Nithyananda: ನಿತ್ಯಾನಂದನ ಕೈಲಾಸದಲ್ಲಿ ಪ್ರಿಯ ಶಿಷ್ಯೆ ರಂಜಿತಾಳೇ ಪ್ರಧಾನ ಮಂತ್ರಿ, ಉಳಿದ ಖಾತೆ ಹಂಚಿಕೆ ಬಾಕಿ !!

Nithyananda: ನಿತ್ಯಾನಂದನ ಕೈಲಾಸದಲ್ಲಿ ಪ್ರಿಯ ಶಿಷ್ಯೆ ರಂಜಿತಾಳೇ ಪ್ರಧಾನ ಮಂತ್ರಿ, ಉಳಿದ ಖಾತೆ ಹಂಚಿಕೆ ಬಾಕಿ !!

0 comments
Nithyananda

Nithyananda: ದೇವರ ಹೆಸರಲ್ಲಿ ಹೊಸ ಸಾಮ್ರಾಜ್ಯ ಕಟ್ಟಿಕೊಂಡಿರುವ ನಿತ್ಯಾನಂದ ಸ್ವಾಮೀಜಿ ಬಗ್ಗೆ ಇಲ್ಲೊಂದು ಇಂಟರೆಸ್ಟಿಂಗ್ ಸುದ್ದಿ ಇದೆ. ಈಗಾಗಲೇ ಭಾರತ ಬಿಟ್ಟು ಪರಾರಿಯಾಗಿರುವ ನಿತ್ಯಾನಂದ (Nithyananda) ಈಕ್ವೆಡಾರ್‌ನ ಕರಾವಳಿಯಲ್ಲಿ ದ್ವೀಪವೊಂದನ್ನು ತನ್ನದೇ ಆದ ದೇಶವಾಗಿ ನಿರ್ಮಿಸಿಕೊಂಡು ತನ್ನ ಶಿಷ್ಯರ ಜೊತೆ ವಾಸಿಸುತ್ತಿದ್ದಾನೆ.

ನಿತ್ಯಾನಂದ ತನ್ನ ದೇಶಕ್ಕೆ ಯುನೈಟೆಟ್ ಸ್ಟೇಟ್ಸ್ ಆಫ್ ಕೈಲಾಸ (ಕೈಲಾಸ ದೇಶ) ಎಂದು ನಾಮಕರಣ ಮಾಡಿಕೊಂಡಿದ್ದು, ಅಲ್ಲಿ ಪ್ರತ್ಯೇಕ ಕರೆನ್ಸಿ, ಪ್ರತ್ಯೇಕ ಆಡಳಿತವನ್ನು ಸ್ಥಾಪಿಸಿಕೊಂಡಿರುವುದಾಗಿ ಸುದ್ದಿ ಆಗಿತ್ತು, ಇದೀಗ ಕೈಲಾಸ ದೇಶ ಮತ್ತೆ ಸುದ್ದಿಯಲ್ಲಿದೆ.

ಹೌದು, ಅತ್ಯಾಚಾರ ಆರೋಪದಿಂದ ದೇಶದಿಂದ ಪಲಾಯನ ಮಾಡಿದ್ದ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಕೈಲಾಸ ಎಂಬ ದೇಶವನ್ನು ನಿರ್ಮಾಣಮಾಡಿಕೊಂಡಿದ್ದು, ಇದೀಗ ಈ ದೇಶಕ್ಕೆ ನಟಿ ರಂಜಿತಾಳನ್ನು ಪ್ರಧಾನಿ ಆಗಿ ಘೋಷಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈಗಾಗಲೇ 2019ರಲ್ಲಿ ಅಂದರೆ 13 ವರ್ಷಗಳ ಹಿಂದೆ ಬಿಡದಿ ಬಳಿಯ ಧ್ಯಾನ ಪೀಠದಲ್ಲಿ ನಿತ್ಯಾನಂದ- ರಂಜಿತಾ ರಾಸಲೀಲೆ ನಡೆಸಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿತ್ತು. ಈ ವಿಚಾರ ಭಾರೀ ಸುದ್ದಿಯಾಗಿತ್ತು. ಈ ಪ್ರಕರಣ ಇತ್ಯರ್ಥವಾಗದ ಹಂತದಲ್ಲೇ ಆರತಿ ರಾವ್ ಎಂಬುವವರು ನಿತ್ಯಾನಂದ ತಮ್ಮ ಮೇಲೆ ಲೈಂಗಿತ ಅತ್ಯಾಚಾರ ನಡೆಸಿದ್ದಾರೆ ಎಂದು ದೂರು ದಾಖಲಿಸಿದ್ದರು.

ಈ ಹಿನ್ನೆಲೆ ನಿತ್ಯಾನಂದ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. 2019ರಲ್ಲಿ ದೇಶ ಬಿಟ್ಟಿದ್ದ ನಿತ್ಯಾನಂದ, ‘ಕೈಲಾಸ’ ದೇಶ ನಿರ್ಮಿಸಿಕೊಂಡು, ಸಕಲ ವೈಭೋಗಗಳೊಂದಿಗೆ ಬದುಕುತ್ತಿದ್ದಾರೆಂದು ಹೇಳಲಾಗಿದೆ.

ಇನ್ನು ನಿತ್ಯಾನಂದ ವೆಬ್‌ಸೈಟ್‌ನಲ್ಲಿ ರಂಜಿತಾ ಫೋಟೊ ಕೆಳಗೆ ‘ನಿತ್ಯಾನಂದಮಯಿ’ ಎಂಬ ಹೆಸರಿದೆ. ಅದರ ಕೆಳಭಾಗದಲ್ಲಿ ಹಿಂದುಗಳಿಗಾಗಿ ಸ್ವಾಮಿ ನಿರ್ಮಿಸಿದ ಕೈಲಾಸ ದೇಶದ ಪ್ರಧಾನಿಯಾಗಿ ಘೋಷಿಸಿರುವುದಾಗಿ ಹೇಳಲಾಗಿದೆ.

ಅಮೆರಿಕ ದೇಶವಾದ ಈಕ್ವೆಡಾರ್‌ನಲ್ಲಿ ನಿತ್ಯಾನಂದ ಖಾಸಗಿ ದ್ವೀಪ ಪ್ರದೇಶವನ್ನು ಖರೀದಿಸಿ ಇದು ನನ್ನ ದೇಶ ಎಂದು ಘೋಷಿಸಿಕೊಂಡಿದ್ದಾನೆ. ಟ್ರಿನಿಡಾಡ್ ಮತ್ತು ಟೊಬ್ಯಾಗೊ ನಗರಗಳಿಂದ ಈ ದ್ವೀಪ ಸಮೀಪದಲ್ಲಿದೆ. ಅಂದರೆ ಅಮೆರಿಕ ದೇಶದ ಕೆಳಭಾಗದಲ್ಲಿ ನಿತ್ಯಾನಂದನ ದೇಶ ಇದೆ. ಈ ದೇಶಕ್ಕೆ ‘ಕೈಲಾಸ’ ಎಂದು ಹೆಸರಿಟ್ಟಿದ್ದಾನೆ. ತನ್ನ ದೇಶಕ್ಕೆ ಪ್ರತ್ಯೇಕ ಧ್ವಜ, ಲಾಂಛನ, ಪ್ರತ್ಯೇಕ ಪಾಸ್‌ಪೋರ್ಟ್ ಕೂಡ ತಯಾರಿಸಿಕೊಂಡಿದ್ದಾನೆ. ಇದನ್ನು ಹಿಂದೂ ರಾಷ್ಟ್ರವೆಂದು ಆತ ಬಣ್ಣಿಸಿದ್ದಾನೆ. ಅಲ್ಲಿ ನಿತ್ಯಾನಂದ ಹೇಳಿದ್ದೇ ಶಾಸನ. ರಂಜಿತಾ ಹಾಗೂ ಆಕೆಯ ಸಹೋದರಿ ಸೇರಿದಂತೆ ಸಾಕಷ್ಟು ಜನ ಭಕ್ತರು ಆ ದೇಶದಲ್ಲಿದ್ದಾರೆ.

ಖ್ಯಾತ ತಮಿಳು ನಟಿ ರಂಜಿತಾ ಕೆಲ ತೆಲುಗು, ಕನ್ನಡ, ಮಲಯಾಳಂ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಹಿರಿಯ ನಟ ಅಶೋಕ್‌ ಕುಮಾರ್‌ ಅವರ ಮಗಳು ರಂಜಿತಾ. 1992ರಲ್ಲಿ ‘ನಾಡೋಡಿ ತೆಂಡ್ರಲ್’ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ‘ಪುರುಷೋತ್ತಮ’, ‘ಶೃಂಗಾರ ರಾಜ’, ‘ಅಗ್ನಿ ಐಪಿಎಸ್’ ಹಾಗೂ ‘ಅಜ್ಜು’ ಎನ್ನುವ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆಕೆಯ ಸಿನಿಮಾಗಳನ್ನು ನೋಡಿ ಆಕರ್ಷಣೆಗೆ ಒಳಗಾಗಿ ಆಕೆಯನ್ನು ನಿತ್ಯಾನಂದ ಪಡೆದುಕೊಂಡನು ಎನ್ನುವ ಸುದ್ದಿ ಇದೆ.

 

ಇದನ್ನು ಓದಿ: World’s Richest Actor: ಜಗತ್ತಿನ ಶ್ರೀಮಂತ ನಟ ಯಾರು ? ಪಟ್ಟಿಯಿಂದ ಶಾರುಕ್ ಔಟ್ ; ಈತನೇ ನೋಡಿ ವಿಶ್ವದ ಮೋಸ್ಟ್ ರಿಚ್ ನಟ ! 

You may also like

Leave a Comment