Government Scheme: ರಾಜ್ಯದಲ್ಲಿ ಕಾಂಗ್ರೆಸ್ (congress) ಅಧಿಕಾರದ ಚುಕ್ಕಾಣಿ ಹಿಡಿದಿದೆ. ಐದು ಗ್ಯಾರಂಟಿ ಘೋಷಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕೆಲವು ಗ್ಯಾರಂಟಿಗಳನ್ನು (Congress 5 Guarantee) ಜಾರಿಗೆ ತಂದಿದೆ. ಈಗಾಗಲೇ ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಕೂಡ ವ್ಯಕ್ತವಾಗಿದೆ. ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆಯೂ ಆರಂಭವಾಗಿದೆ. ಈ ಬೆನ್ನಲ್ಲೆ ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್ (Government Scheme) ಸಿಕ್ಕಿದೆ.
ಭಾರತದ ಆದಾಯ ತೆರಿಗೆ ಕಾನೂನಿನಲ್ಲಿ ಹಿರಿಯ ನಾಗರಿಕರಿಗೆ ಹಲವು ಪ್ರಯೋಜನಗಳನ್ನು ನೀಡಲಾಗಿದೆ. ಬ್ಯಾಂಕಿನಿಂದ ಪಡೆಯಲಾಗಿರುವ ಟ್ಯಾಕ್ಸ್, ಹಾಗೂ ಪೋಸ್ಟ್ ಆಫೀಸ್ ಸೇರಿದಂತೆ ಹಲವೆಡೆ ರಿಯಾಯಿತಿಗಳನ್ನು ಹಾಗೂ ಸೌಲಭ್ಯಗಳನ್ನು ನೀಡಲಾಗುತ್ತದೆ. ಅಡ್ವಾನ್ಸ್ ಟ್ಯಾಕ್ಸ್, ಸ್ಟ್ಯಾಂಡರ್ಡ್ ಡಿಡಕ್ಷನ್, ಮೆಡಿಕಲ್ ಇನ್ಸೂರೆನ್ಸ್ ಅಡಿಯಲ್ಲಿ ರಿಯಾಯಿತಿ ನೀಡಲಾಗಿದೆ.
ಈ ಬಾರಿ ಆರ್ಥಿಕ ವರ್ಷದಲ್ಲಿ 2 Tax Regime ಗಳನ್ನು ಜಾರಿಗೆ ತರಲಾಗಿದೆ. ಹಿರಿಯ ನಾಗರಿಕರಿಗೆ 3 ಲಕ್ಷಗಳ ಟ್ಯಾಕ್ಸ್ ವಿನಾಯಿತಿ ಹಾಗೂ ಸೂಪರ್ ಸೀನಿಯರ್ ಸಿಟಿಜನ್ ಗೆ 5,00,000 ಟ್ಯಾಕ್ಸ್ ರಿಯಾಯಿತಿಯನ್ನು ನೀಡಲಾಗುತ್ತಿದೆ.
ಆದಾಯ ತೆರಿಗೆ ಕಾಯ್ದೆ 80TTB ಅಡಿಯಲ್ಲಿ ಮೆಡಿಕಲ್ ಇನ್ಸೂರೆನ್ಸ್ ಪ್ರೀಮಿಯಂ ರಿಯಾಯಿತಿ ಕೂಡ ದೊರೆಯುತ್ತದೆ. 60 ವರ್ಷ ಮೇಲ್ಪಟ್ಟವರು ಈ ಸಮಯದಲ್ಲಿ ಒಂದು ಲಕ್ಷಕ್ಕೂ ಅಧಿಕ ಮೊತ್ತದ ಪ್ರಯೋಜನವನ್ನು ಪಡೆಯಬಹುದು.
