Home » Karnataka budget 2023: ಸಿದ್ದರಾಮಯ್ಯ ಬಜೆಟ್: ಅಂಗನವಾಡಿ, ಆಶಾ-ರಿಗೆ ಬಂಪರ್ ಗಿಫ್ಟ್ – ಕೈಗೆ ಬರುತ್ತೆ 3000 ರೊಕ್ಕ, ಇಲ್ಲಿದೆ ನೋಡಿ ಪಕ್ಕಾ ಲೆಕ್ಕ !!

Karnataka budget 2023: ಸಿದ್ದರಾಮಯ್ಯ ಬಜೆಟ್: ಅಂಗನವಾಡಿ, ಆಶಾ-ರಿಗೆ ಬಂಪರ್ ಗಿಫ್ಟ್ – ಕೈಗೆ ಬರುತ್ತೆ 3000 ರೊಕ್ಕ, ಇಲ್ಲಿದೆ ನೋಡಿ ಪಕ್ಕಾ ಲೆಕ್ಕ !!

by ಹೊಸಕನ್ನಡ
0 comments
Karnataka budget 2023

Karnataka budget 2023: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವಿಧಾನಸಭೆಯಲ್ಲಿ ತಮ್ಮ 14ನೇ ಬಜೆಟ್(Karnataka budget 2023) ಮಂಡಿಸಿದ್ದು, ವಿವಿಧ ಇಲಾಖೆಗಳಿಗೆ ಕೋಟ್ಯಾಂತರ ರೂಪಾಯಿ ಅನುದಾನ ನೀಡಿದ್ದಾರೆ. ಜೊತೆಗೆ ಗ್ಯಾರಂಟಿ ಜಾರಿಗೆ ಒತ್ತು ನೀಡುವುದರೊಂದಿಗೆ ಕೆಲವು ಯೋಜನೆಗಳನ್ನೂ ಜಾರಿ ತಂದಿವೆ. ಇದರೊಂದಿಗೆ ಅಂಗನವಾಡಿ ಕಾರ್ಯಕರ್ತರಿಗೆ, ಅಡುಗೆ ಸಿಬ್ಬಂದಿಗಳಿಗೂ ಸಖತ್ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಹೌದು, ಹಲವು ಯೋಜನೆಗಳಿಗೆ, ಇಲಾಖೆಗಳಿಗೆ ಅನುದಾನ ಬಿಡುಗಡೆ ಮಾಡಿದ ಸಿಎಂ ಸಿದ್ದು, ಇದೇ ವೇಳೆ ಬಜೆಟ್‌ನಲ್ಲಿ ಆಶಾ ಕಾರ್ಯಕರ್ತೆಯರಿಗೆ, ಗ್ರಾಮ ಸಹಾಯಕರಿಗೆ ಮತ್ತು ಬಿಸಿಯೂಟ ತಯಾರಕರಿಗೆ ಹಾಗೂ ಸಹಾಯಕರಿಗೆ ತಲಾ 1000 ರೂ. ಗೌರವಧನ ಹೆಚ್ಚಳ ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಸೇವಾನುಭವ ಆಧಾರದಲ್ಲಿ 1000 ರೂ. – 1500 ರೂ.ಗಳಷ್ಟು ಗೌರವಧನ ಹೆಚ್ಚಳ ಮಾಡಲಾಗುವುದು ಅಂತ ತಿಳಿಸಿದ್ದಾರೆ.

ಹಾಗಾದರೆ ಇನ್ನು ಈ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ 3000 ರೂ ಹೆಚ್ಚಿಗೆ ದೂರತಂತೆ ಆಯಿತು. ಯಾಕೆಂದರೆ ಇದೀಗ ಸರ್ಕಾರ 1,000 ರೂ ಗೌರವಧನ ನೀಡುವುದಾಗಿ ಘೋಷಿಸಿದೆ. ಇದರೊಂದಿಗೆ ಸರ್ಕಾರದ ಪಂಚ ಗ್ಯಾರಂಟಿಗಳ ಪೈಕಿ ಒಂದಾಗಿರೋ ಗೃಹ ಲಕ್ಷ್ಮೀ ಯೋಜನೆಯಡಿ ಮಹಿಳೆಯರಿಗೆ ಪ್ರತೀ ತಿಂಗಳು 2000ರೂ ಕೂಡ ದೊರೆಯಲಿದೆ. ಹೀಗಾಗಿ 3000 ರೂ ಸಲೀಸಾಗಿ ಇವರ ಮಡಿಲು ಸೇರಲಿದೆ.

ಇಷ್ಟೇ ಅಲ್ಲದೆ ಪೌರಕಾರ್ಮಿಕರಿಗೆ ಮಾಸಿಕ 2,000 ರೂ. ಸಂಕಷ್ಟ ಭತ್ಯೆ. ಪ್ರವಾಸಿ ಗೈಡ್‌ಗಳಿಗೆ ಮಾಸಿಕ 2000 ರೂ. ಪ್ರೋತ್ಸಾಹಕ ನೀಡಲಾಗುವುದು ಅಂತ ತಿಳಿಸಿದ್ದಾರೆ. ಇನ್ನೂ ಜಲಜೀವನ್ ಮಿಷನ್ ಯೋಜನೆಯಡಿ ಮುಂದಿನ ಎರಡು ವರ್ಷಗಳಲ್ಲಿ ತಲಾ 25 ಲಕ್ಷ ಮನೆಗಳಿಗೆ ನಳ ಸಂಪರ್ಕ ಒದಗಿಸುವ ಹಾಗೂ 2022-23ನೇ ಸಾಲಿನಲ್ಲಿ 7,000 ಕೋಟಿ ರೂ.ಗಳನ್ನು ವೆಚ್ಚ ಭರಿಸುವ ಗುರಿ ಹೊಂದಲಾಗಿದೆ ಅಂತ ತಿಳಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದವರು, ಮೀನುಗಾರರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ಆದ್ಯತೆ ಅಂತ ಅವರು ಇದೇ ವೇಳೆ ತಿಳಿಸಿದ್ದಾರೆ.

ಇದನ್ನೂ ಓದಿ :ಕರ್ನಾಟಕ ಬಜೆಟ್ :ಮಹಿಳೆ – ಮಕ್ಕಳಿಗೆ ಇಷ್ಟೆಲ್ಲಾ ಸವಲತ್ತು ಸಿಗ್ತಿದ್ಯಾ ?

You may also like

Leave a Comment