Relationship: ಇಬ್ಬರ ಒಪ್ಪಿಗೆಯ ದೈಹಿಕ ಸಂಬಂಧದ (Relationship) ಬಳಿಕ ಕೆಲವು ಕಾರಣಗಳಿಂದ ವಿವಾಹದ ಭರವಸೆ ಈಡೇರದೆ ಇದ್ದರೆ ಅದನ್ನು ಅತ್ಯಾಚಾರ ಎಂದು ಪರಿಗಣಿಸಲಾಗುವುದಿಲ್ಲ ಎಂದು ಒಡಿಶಾ ಹೈಕೋರ್ಟ್ ಆದೇಶ ನೀಡಿದೆ.
ಹೌದು, ಇಬ್ಬರೂ ಒಪ್ಪಿ ‘ ಕೂಡಿ ‘ ದ ನಂತರ ಮದುವೆ ಮುರಿದು ಬಿದ್ದರೆ ಅದು ಅತ್ಯಾಚಾರ ಆಗಲ್ಲ. ಈಗಾಗಲೇ ವಿವಾಹಿತ ಮಹಿಳೆಯೊಬ್ಬರಿಂದ ಭುವನೇಶ್ವರ ಮೂಲದ ವ್ಯಕ್ತಿಯೊಬ್ಬರು ಎದುರಿಸಿದ್ದ ಅತ್ಯಾಚಾರದ ಆರೋಪವನ್ನು ಹೈಕೋರ್ಟ್ ರದ್ದುಗೊಳಿಸಿದೆ. ವ್ಯಕ್ತಿಯ ಸ್ನೇಹಿತೆಯಾಗಿದ್ದ ಆಕೆ ಐದು ವರ್ಷಗಳಿಂದ ಪತಿಯೊಂದಿಗೂ ವೈವಾಹಿಕ ವಿವಾದದಲ್ಲಿದ್ದು, ಅರ್ಜಿದಾರ ವ್ಯಕ್ತಿಯ ವಿರುದ್ಧ ಸಹ ಆರೋಪವನ್ನು ಮಾಡಿದ್ದಳು.
ಆದ್ದರಿಂದ ಉತ್ತಮ ನಂಬಿಕೆಯಿಂದ ಮಾಡಿದ ಭರವಸೆಯ ಉಲ್ಲಂಘನೆ ಮತ್ತು ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ನಂತರ ಇಬ್ಬರ ನಡುವೆ ಸೂಕ್ಷ್ಮ ವ್ಯತ್ಯಾಸವಿದೆ ಎಂದು ಕೋರ್ಟ್ ತಿಳಿಸಿದೆ.
ಇನ್ನು ಅರ್ಜಿದಾರರ ವಿರುದ್ಧದ ಇತರ ಆರೋಪಗಳಾದ ವಂಚನೆಯನ್ನು ತನಿಖೆಗೆ ಮುಕ್ತವಾಗಿ ಬಿಡಲಾಗಿದೆ ಎಂದು ನ್ಯಾಯಮೂರ್ತಿ ಆರ್.ಕೆ. ಪಟ್ನಾಯಕ್ ಆದೇಶದಲ್ಲಿ ತಿಳಿಸಿದ್ದಾರೆ.
