Viral video: ತಾಯಿ ಮಕ್ಕಳಿಗೋಸ್ಕರ ಏನನ್ನೂ ಮಾಡಲು ಸಿದ್ಧ. ಮಕ್ಕಳು ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವ ಸಂಖ್ಯೆ ವಿರಳ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral video) ಆಗಿರುವ ವೀಡಿಯೋ ತಾಯಿ ತಿಮಿಂಗಿಲ ಮತ್ತು ಮರಿ ತಿಮಿಂಗಿಲಗಳ ಬಂಧ ಮನಮುಟ್ಟುವಂತಿದೆ.
ಹೌದು, ತಾಯಿ ಮನುಷ್ಯ ಬಿಸಾಕಿರುವ ಬಲೆಯಲ್ಲಿ ಸಿಕ್ಕಿಕೊಂಡಿರುವಾಗ ಮರಿಗಳು ಅಮ್ಮನ ರಕ್ಷಣೆಗೆ ಮನುಷ್ಯರ ಸಹಾಯ ಕೇಳಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ್ರೆ ನೀವು ಕೂಡ ಎಂತಹ ಸುಂದರ ಬಾಂಧವ್ಯ ಎನ್ನುತ್ತೀರಾ!!.
ವಿಡಿಯೋದಲ್ಲಿ ಸಮುದ್ರದಲ್ಲಿ ಹಡಗು ಚಲಿಸುತ್ತಿದೆ. ಅದರಲ್ಲಿ ಒಂದಿಷ್ಟು ಜನರಿದ್ದಾರೆ. ಸ್ವಲ್ಪ ಸಮಯದ ನಂತರ ಹಡಗಿನ ಹತ್ತಿರ ತಿಮಿಂಗಿಲವೊಂದು ಬರುತ್ತದೆ. ತಿಮಿಂಗಿಲದ ಕಣ್ಣುಗಳು ಹತಾಶೆಯಿಂದ ಕೂಡಿದ್ದವು ಮತ್ತು ಸಹಾಯ ಕೋರುವಂತೆ ಹಡಗಿನಲ್ಲಿದ್ದ ಜನರಿಗೆ ಕಾಣಿಸಿದವು. ಜೊತೆಗೆ ತಿಮಿಂಗಿಲ ಏನೋ ಹೇಳುತ್ತಿದೆ ಎಂಬಂತೆ ವಿಡಿಯೋದಲ್ಲಿ ಕಾಣಿಸುತ್ತದೆ.
ತಿಮಿಂಗಿಲದ ಹಾವ-ಭಾವ ತಿಳಿದ ರಕ್ಷಣಾ ಗುಂಪು ಅದನ್ನು ಹಿಂಬಾಲಿಸುತ್ತದೆ. ತಿಮಿಂಗಿಲಗಳು ಮುಂದೆ ಸಾಗಿ ಅವರಿಗೆ ದಾರಿ ತೋರಿಸುತ್ತದೆ. ಸ್ವಲ್ಪ ದೂರ ಹೋದಾಗ ಅಲ್ಲಿ ದೊಡ್ಡ ತಿಮಿಂಗಿಲದ ಬಾಲ ಮೀನು ಹಿಡಿಯುವ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿರುವುದು ಕಂಡು ಬರುತ್ತದೆ.
ಅಲ್ಲಿಯೇ ಇದ್ದ ಎರಡು ಮರಿ ತಿಮಿಂಗಿಲಗಳು ನೋವಿನಿಂದ ಕಿರುಚುತ್ತಿದ್ದವು. ಇದನ್ನರಿತ ರಕ್ಷಣಾ ಸಿಬ್ಬಂದಿ ಬಲೆಯನ್ನು ಕತ್ತರಿಸಿದರು. ಬಲೆ ಕತ್ತರಿಸಿದ್ದೇ ಎಲ್ಲಾ ತಿಮಿಂಗಿಲಗಳು ಖುಷಿಯಿಂದ ಮುಂದಕ್ಕೆ ಚಲಿಸಿದವು. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಈ ರಕ್ಷಣಾ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
https://twitter.com/alvinfoo/status/1672799939435569152?s=20
ಇದನ್ನು ಓದಿ: Relationship: ಇಬ್ಬರೂ ಒಪ್ಪಿ ‘ ಕೂಡಿ ‘ ದ ನಂತರ ಮದುವೆ ಮುರಿದು ಬಿದ್ದರೆ ಅದು ಅತ್ಯಾಚಾರ ಆಗಲ್ಲ : ಹೈಕೋರ್ಟ್
