Mobile Tower: ಸಿಗದ ಪ್ರೀತಿಗೆ, ಹಿಡಿದ ಹುಚ್ಚಿಗೆ, ಕುಡಿದ ಮತ್ತಿಗೆ ಟವರ್ ಹತ್ತಿದವರನ್ನು ನೋಡಿರುತ್ತೇವೆ. ಇನ್ನೊಬ್ಬ ಯುವಕ ಅದ್ಯಾವುದೋ ಬೇರೆ ಕಾರಣಕ್ಕೆ ಟವರ್ ಏರಿ (Mobile Tower) ಕುಳಿತಿದ್ದಾನೆ. ಮಾಮೂಲಾಗಿ ಅಲ್ಲದೆ, ಆತ ನಗ್ನವಾಗಿ ಮೊಬೈಲ್ ಟವರ್ ಹತ್ತಿ ಅತ್ತಿಂದಿತ್ತ ನೇತಾಡುತ್ತಿದ್ದ ಘಟನೆಯೊಂದು ನಡೆದಿದೆ.
ಕಂಬಿಯಿಂದ ಜೋತು ಬೀಳುವುದು, ಕಂಬಿ ಹಿಡಿದು ಸುತ್ತುವುದು, ಬೀಳುವಂತೆ ಆಡುವುದು ಮುಂತಾದುವನ್ನು ಮಾಡುತ್ತಿದ್ದ ಇವನ ಹುಚ್ಚಾಟಕ್ಕೆ ದಂಗಾದ ಗ್ರಾಮಸ್ಥರು ಯುವಕನನ್ನು ಕೆಳಗಿಳಿಸಲು ಅಲಮೇಲ ಪೊಲೀಸರ ಮೊರೆ ಹೋಗಿದ್ದಾರೆ. ವಿಜಯಪುರದ ಜಿಂದಗಿ ತಾಲೂಕಿನಲ್ಲಿ ಈ ಘಟನೆ ನಡೆದಿದೆ.
ಈತ ತೆಗ್ಗಿಹಳ್ಳಿಯ ಸತೀಶ್ (25) ಎನ್ನುವ ಯುವಕ ಎಂದು ತಿಳಿದು ಬಂದಿದೆ. ಈತನ ಮಾನಸಿಕ ಸ್ಥಿತಿ ಹದಗಿಟ್ಟಿದ್ದು. ಅಸಲಿಗೆ ಈತ ಬಳಗನೂರಿನಲ್ಲಿರುವ ಆತನ ಸಂಬಂಧಿಕರ ಹೊಲಕ್ಕೆ ಬಂದು ಟವರ್ ಏರಿದ್ದಾನೆ.
ಮಾತಿಗೆ ಜಗ್ಗದವನನ್ನು ಗುಟ್ಕಾ ಮೆತ್ತಗಾಗಿಸಿತ್ತು:
ಮಾನಸಿಕವಾಗಿ ಹದಗೆಟ್ಟಿದ್ದ ಹಿತ ಗುಟುಕ ಪ್ರಿಯ ಎಂದು ತಿಳಿದ ಈತನ ಸ್ನೇಹಿತರು ಗುಟುಕಾ ಪಾಕೆಟ್ ಗಳನ್ನು ಕೈಯಲ್ಲಿ ಹಿಡಿದು ಟವರ್ ಏರಿದ್ದರು. ಅದನ್ನು ನೋಡುತ್ತಿದ್ದಂತೆ ಆನಂದ ತುಂದಿಲನಾದ ಸತೀಶ್ ಟವರ್ ತುದಿಯಿಂದ ಸರ ಸರ ಕೆಳಗಿಳಿದಿದ್ದಾನೆ. ಸತೀಶ್ ಮೂಲತಃ ತೆಗ್ಗಿಹಳ್ಳಿಯಾಗಿದ್ದು ತಾಯಿ ಜೊತೆಗೆ ಬಳಗನೂರಿಗೆ ಸಂಬಂಧಿಕರ ಮನೆಗೆ ಬಂದಿದ್ದ. ಟವರ್ ಹೇಳಿದ ಸತೀಶ್ ಈ ಹಿಂದೆ ಎರಡು ಬಾರಿ ತೆಗ್ಗಿಹಳ್ಳಿಯಲ್ಲೂ ಟವರ್ ಏರಿ ಕುಳಿತಿದ್ದ ಎನ್ನಲಾಗಿದೆ. ಅವನಿಗೆ ಮಾಟ ಮಂತ್ರ ಮಾಡಿಸಿದ್ದಾರೆ ಎಂದು ಮಾನಸಿಕ ಅಸ್ವಸ್ಥನಾಗಿದ್ದಾನೆ ಎನ್ನುವುದು ಅಲ್ಲಿನವರ ಅಂಬೋಣ.
