Home » Pradeep eshwara- Dr. K Sudhakar: ಸುಧಾಕರ್ ಎದುರು ಸಿಡಿದೆದ್ದ ಪ್ರದೀಪ್ ಈಶ್ವರ್ : ಚಿಕ್ಕಬಳ್ಳಾಪುರದಲ್ಲಿ ಹಾಲಿ-ಮಾಜಿಗಳು ಆಣೆ ಪ್ರಮಾಣಗಳ ಹೈ ಡ್ರಾಮಾ

Pradeep eshwara- Dr. K Sudhakar: ಸುಧಾಕರ್ ಎದುರು ಸಿಡಿದೆದ್ದ ಪ್ರದೀಪ್ ಈಶ್ವರ್ : ಚಿಕ್ಕಬಳ್ಳಾಪುರದಲ್ಲಿ ಹಾಲಿ-ಮಾಜಿಗಳು ಆಣೆ ಪ್ರಮಾಣಗಳ ಹೈ ಡ್ರಾಮಾ

by ಹೊಸಕನ್ನಡ
0 comments
Pradeep eshwara-Dr K Sudhakar

Pradeep eshwara-Dr K Sudhakar : ಚಿಕ್ಕಬಳ್ಳಾಪುರ(Chikkaballapura) ಶಾಸಕ ಪ್ರದೀಪ್​ ಈಶ್ವರ್(Pradeep eshwaran) ಅವರು ತಮ್ಮ ಮಾತಿನ ಮೂಲವೇ ಸಾಕಷ್ಟು ಸುದ್ದಿ ಮಾಡಿದವರು. ಚುನಾವಣೆಯ ಸಂದರ್ಭದಲ್ಲೂ ಪ್ರದೀಪ್ ಅವರ ಮಾತುಗಳು ಮತದಾರರ ಮೇಲೆ ಭಾರೀ ಪ್ರಮಾಣ ಪ್ರಭಾವ ಬೀರಿದ್ದವು. ಅಲ್ಲದೇ ಚುನಾವಣೆಯಲ್ಲಿ ಪ್ರಭಾವಿ ಸಚಿವ ಡಾ ಸುಧಾಕರ್(DR K Sudhakar) ಅವರ ವಿರುದ್ಧವೇ ಗೆದ್ದು ಬಂದಿದ್ದರು. ಅಂತೆಯೇ ಇದೀಗ ಮತ್ತೆ ಪ್ರದೀಪ್ ಅವರು ಸುಧಾಕರ್ ವಿರುದ್ಧ ಹರಿಯಾಯುವುದನ್ನು ಮುಂದುವರೆಸಿದ್ದು ಆ ಜಗಳವೀಗ ಆಣೆ ಪ್ರಮಾಣದ ವರೆಗೂ ಬಂದು ನಿಂತಿದೆ.

ಹೌದು, ರಾಜ್ಯದ ಮಾಜಿ ಆರೋಗ್ಯ ಸಚಿವ(Ex Health minister) ಡಾ. ಕೆ ಸುಧಾಕರ್ ಹಾಗೂ ಶಾಸಕ ಪ್ರದೀಪ್ ಈಶ್ವರ್(Pradeep eshwara-Dr K Sudhakar) ನಡುವಿನ ಜಟಾಜಟಿ ಜೋರಾಗಿದೆ. ಈ ಹಿಂದೆ ಡಾ ಸುಧಾಕರ್ ಮಿನಿಸ್ಟರ್ ಆಗಿದ್ದಾಗ , ಕೋವಿಡ್ ವಿಚಾರದಲ್ಲಿ ಪಿತೂರಿ ನಡೆದಿದೆ ಎಂದು ಆರೋಪಿಸಿದ್ದ ಪ್ರದೀಪ್ ಈಶ್ವರ್ ವಿರುದ್ಧ ಸಿಡಿದೆದ್ದ ಮಾಜಿ ಸಚಿವರು, ಭೋಗನಂದೀಶ್ವರ ದೇವಸ್ಥಾನಕ್ಕೆ ಬಂದು ಪ್ರದೀಪ್ ದೀಪ ಹಚ್ಚುವಂತೆ ಸವಾಲು ಹಾಕಿದ್ದರು. ಈ ನಡುವೆ ಮಾಜಿ ಸಚಿವ ಡಾ. ಕೆ ಸುಧಾಕರ್ ಅವರ ಸವಾಲಿಗೆ ನಾನು ಸಿದ್ದ ಎಂದು ಶಾಸಕ ಪ್ರದೀಪ್ ಈಶ್ವರ್ ಉತ್ತರಿಸಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್ ನಾನು ದೀಪ ಹಚ್ಚಲು ಸಿದ್ಧನಿದ್ದೇನೆ ಎಂದು ಡಾ. ಕೆ ಸುಧಾಕರ್ ರಿಗೆ ಟಾಂಗ್ ಕೊಟ್ಟರು. ದೀಪದಿಂದ ದೀಪವ ಹಚ್ಚಬೇಕು ಮಾನವ ಎಂದು ಹಾಡು ಹಾಡಿಕೊಂಡು ದೀಪ ಹಚ್ಚುತ್ತೇನೆ. ಸುಧಾಕರ್ ಕೂಡ ತಮ್ಮ ಸಮಯದಲ್ಲಿ ಏನು ಅವ್ಯವಹಾರ ನಡೆಸಿಲ್ಲವೆಂದು ಅವರು ದೀಪ ಹಚ್ಚಲಿ ಎಂದು ಸವಾಲೆಸೆದರು.

ಈ ನಡುವೆ ಕೊಟ್ಟ ಮಾತಿನಂತೆ ಇಂದು ಚಿಕ್ಕಬಳ್ಳಾಪುರದಲ್ಲಿ ಪ್ರದೀಪ್ ಈಶ್ವರ್ ವೆಬ್ ಸೈಟ್ ಲಾಂಚ್ ಮಾಡಿದ್ದಾರೆ. ಪ್ರದೀಪ್ ಈಶ್ವರ್ ಹೆಸರಿನಲ್ಲಿ ವೆಬ್ ಸೈಟ್ ಉದ್ಘಾಟನೆ ಮಾಡಲಾಗಿದ್ದು, ಸಾರ್ವಜನಿಕರಿಂದ ಅಹವಾಲುಗಳನ್ನು ದೂರುಗಳನ್ನು ಸ್ವೀಕರಿಸಲು ವೆಬ್ ಸೈಟ್ ನಿರ್ಮಿಸಿದ್ದಾರೆ.

ವೆಬ್ ಸೈಟ್ ನಲ್ಲಿ ಸಾರ್ವಜನಿಕರು ತಮ್ಮ ಸಮಸ್ಯೆಗಳು ದೂರುಗಳನ್ನು ಸಲ್ಲಿಸಬಹುದು. ವೆಬ್ ಸೈಟ್ ಮೂಲಕ ಬಂದ ದೂರುಗಳಿಗೆ ತಕ್ಷಣ ನಾನು ಸ್ಪಂದಿಸುತ್ತೇನೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲರೂ ಅರ್ಜಿ ಸಲ್ಲಿಸಬಹುದು ಎಂದು ಪ್ರದೀಪ್ ಈಶ್ವರ್ ತಿಳಿಸಿದ್ದಾರೆ. ಹಾಗೂ ವೆಬ್ ಸೈಟ್ ಹಾಗೂ ಸ್ಪಂದಿಸಲೂ 100 ಜನ ಸಿಬ್ಬಂದಿಯನ್ನ ನೇಮಿಸಲಾಗಿದೆ. ಸಿಬ್ಬಂದಿ 24×7 ಕೆಲಸ ಮಾಡುತ್ತಾರೆ. ಕಾರ್ಪೊರೇಟ್ ಮಾದರಿಯಲ್ಲಿ ಕೆಲಸ ನಿರ್ವಹಿಸುತ್ತೇವೆ. ಇಂದಿನಿಂದಲೇ ಸಾರ್ವಜನಿಕರು ವೆಬ್ ಸೈಟ್ ನಲ್ಲಿ ಅರ್ಜಿ ದೂರು ಅಹವಾಲುಗಳನ್ನು ಆಲಿಸಬಹುದು ಎಂದು ಪ್ರದೀಪ್ ಈಶ್ವರ್ ವಿವರಿಸಿದ್ದಾರೆ.

ಇದನ್ನೂ ಓದಿ: Madhya pradesh: ಮುಸ್ಲಿಂ ಯುವತಿಯೊಂದಿಗೆ ಮಾತು: ದಲಿತ ಯುವಕರಿಗೆ ಮಲ ತಿನ್ನಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ಮುಸ್ಲಿಂ ಕುಟುಂಬ!!

You may also like

Leave a Comment