Rahul Gandhi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಶನಿವಾರ ಹರಿಯಾಣದ ಸೋನಿಪತ್ ಜಿಲ್ಲೆಗೆ ದಿಢೀರ್ ಭೇಟಿ ನೀಡಿದರು. ಅಷ್ಟೇ ಅಲ್ಲ ಅಲ್ಲಿನ ಜನರೊಂದಿಗೆ ಸಂವಾದ ನಡೆಸಿ, ಕೃಷಿ ಭೂಮಿಯಲ್ಲಿ ಕೆಲಸ ಮಾಡುವ ರೈತರೊಂದಿಗೆ ಸಮಯ ಕಳೆದರು. ಈ ವೇಳೆ ರೈತ ಮಹಿಳೆಯರೊಂದಿಗೆ ರಾಹುಲ್ ಗಾಂಧಿ ಪ್ಯಾಂಟ್ ಮೇಲೆತ್ತಿ ಭತ್ತ ನಾಟಿ ಮಾಡಿದರು. ಸದ್ಯ ಈ ದೃಶ್ಯಗಳು ಎಲ್ಲೆಡೆ ವೈರಲ್ ಆಗುತ್ತಿದೆ.
ರಾಹುಲ್ ಗಾಂಧಿ ದೆಹಲಿಯಿಂದ ಹಿಮಾಚಲ ಪ್ರದೇಶಕ್ಕೆ ಹೋಗುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಸೋನಿಪತ್ ಜಿಲ್ಲೆಯ ಮದೀನಾ ಗ್ರಾಮದಲ್ಲಿ ಗಾಡಿ ನಿಲ್ಲಿಸಿ ಗದ್ದೆಯಲ್ಲಿ ಭತ್ತ ನಾಟಿ ಮಾಡುತ್ತಿದ್ದ ರೈತರೊಡನೆ ಸಂವಾದ ನಡೆಸಿ, ನಂತರ ಅವರೊಂದಿಗೆ ಸೇರಿ ಭತ್ತ ನಾಟಿ ಮಾಡಿದರು. ಜೊತೆಗೆ ರಾಹುಲ್ ಗಾಂಧಿ ಟ್ರ್ಯಾಕ್ಟರ್ ಕೂಡ ಓಡಿಸಿದ್ದಾರೆ.
ರೈತರೊಡನೆ ಸಮಯ ಕಳೆದ ರಾಹುಲ್ ಗಾಂಧಿ ಅವರಿಂದ ಕೃಷಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಟ್ರ್ಯಾಕ್ಟರ್ ಓಡಿಸಿ, ಭತ್ತ ನಾಟಿ ಮಾಡಿ ರೈತರಿಗೆ ಭತ್ತ ಬೆಳೆಯಲು ಪ್ರೇರೇಪಿಸಿದರು. ಸದ್ಯ
ರಾಹುಲ್ ಗಾಂಧಿ ಬಿಳಿ ಟೀ ಶರ್ಟ್ ಧರಿಸಿ ಟ್ರ್ಯಾಕ್ಟರ್ ಓಡಿಸಿದ ಹಾಗೂ ರೈತ ಮಹಿಳೆಯರ ಜೊತೆಗೆ ಭತ್ತದ ಸಸಿಯನ್ನು ನಾಟಿ ಮಾಡುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೋನಿಪತ್‌ನ ಕಾಂಗ್ರೆಸ್ ಶಾಸಕ ಜಗ್ಬೀರ್ ಸಿಂಗ್ ಮಲಿಕ್ ಇದು ಅನಿರೀಕ್ಷಿತ, ಪೂರ್ವ ಸಿದ್ಧತೆ ಇಲ್ಲದ ಭೇಟಿ ಎಂದು ಹೇಳಿದರು. ಕಾಂಗ್ರೆಸ್ ಕಾರ್ಯಕರ್ತರು, ನೆಟ್ಟಿಗರು ಕಾಂಗ್ರೆಸ್ ನಾಯಕನ ಕಾರ್ಯಕ್ಕೆ ಮೆಚ್ಚಿಕೊಂಡರೆ ಬಿಜೆಪಿ ನಾಯಕರು ಟೀಕಿಸಿದ್ದಾರೆ. ಒಟ್ಟಾರೇ ರಾಹುಲ್ ಗಾಂಧಿ ಗದ್ದೆಯಲ್ಲಿ ಭತ್ತ ನಾಟಿ ಮಾಡಿರುವ ಫೋಟೋಗಳು ಸಖತ್ ವೈರಲ್ ಆಗಿದೆ.
ಇದನ್ನೂ ಓದಿ: America: ಗಂಡ ಸತ್ತ ಮೇಲೆ 17 ರ ಮಗ ಬಂಧಿ ಮಾಡಿದ ಅಮ್ಮ, ಸ್ವಂತ ಮಗನನ್ನೇ ಹಿಡಿದಿಟ್ಟು ಕಾಮತೃಷೆ ಮುಗಿಸುತ್ತಿದ್ದ ತಾಯಿ !
