Home » Nurse patient love affair: ಆಸ್ಪತ್ರೆಯಲ್ಲೇ ರೋಗಿ ಜೊತೆ ಸಂಭೋಗ ನಡೆಸಿದ ನರ್ಸ್ !! ಆವೇಶ ಹೆಚ್ಚಾದಂತೆ ಸ್ಥಳದಲ್ಲೇ ರೋಗಿ ಸಾವು!!

Nurse patient love affair: ಆಸ್ಪತ್ರೆಯಲ್ಲೇ ರೋಗಿ ಜೊತೆ ಸಂಭೋಗ ನಡೆಸಿದ ನರ್ಸ್ !! ಆವೇಶ ಹೆಚ್ಚಾದಂತೆ ಸ್ಥಳದಲ್ಲೇ ರೋಗಿ ಸಾವು!!

0 comments
Nurse patient love affair

Nurse patient love affair: ಆಸ್ಪತ್ರೆಗಳಲ್ಲಿ ರೋಗಿಗಳನ್ನು ಗುಣಮುಖ ಮಾಡುವಲ್ಲಿ ನರ್ಸ್ ಗಳ ಪಾತ್ರ ಮಹತ್ವವಾದದ್ದು. ಇವರು ಯಾವುದೇ ಅನ್ಯ ಭಾವ ಮಾಡದೆ ತಮ್ಮ ಮನೆಯವರಂತೆ ರೋಗಿಗಳನ್ನು ಆರೈಕೆ ಮಾಡುತ್ತಾರೆ. ಆದರೆ ಶುಶ್ರೂಷೆ ಮಾಡಬೇಕಿದ್ದ ಮಹಿಳಾ ನರ್ಸ್ ರೋಗಿಯೊಂದಿಗೆ(patient) ಲವ್ವಿ ಡವ್ವಿ ಶುರು ಮಾಡಿ, ಕೊನೆಗೆ ಆತನ ಪ್ರಾಣಕ್ಕೆ ಕುತ್ತು ತಂದಿರುವ ಘಟನೆ ಬೆಳಕಿಗೆ ಬಂದಿದೆ.

ಹೌದು, ನರ್ಸ್‌ (UK Nurse) ಜತೆ ಸಂಭೋಗ ನಡೆಸುತ್ತಿರುವ ಸಂದರ್ಭದಲ್ಲಿಯೇ ರೋಗಿಯೊಬ್ಬ ಮೃತಪಟ್ಟಿರುವ ಘಟನೆ ಯುನೈಟೆಡ್ ಕಿಂಗ್‌ಡಮ್‌ನ (United Kingdom) ವೇಲ್ಸ್‌ನಲ್ಲಿ ನಡೆದಿದೆ. ಒಂದು ವರ್ಷದ ಹಿಂದೆ ಆಸ್ಪತ್ರೆ ದಾಖಲಾಗಿದ್ದ ರೋಗಿ ಜೊತೆಗೆ 42 ವರ್ಷದ ನರ್ಸ್ ಪೆನೆಲೋಪ್ ವಿಲಿಯಮ್ಸ್‌ಗೆ ಪ್ರೇಮಂಕುರ ಶುರುವಾಗಿದೆ. ಇವರ ಪ್ರೀತಿಯ ಆಟ ಎಲ್ಲೆ ಮೀರಿತ್ತು. ಕೆಲವೇ ದಿನಗಳಲ್ಲಿ ಅಫೈರ್ ಮತ್ತೊಂದು ಹಂತಕ್ಕೆ ತಲುಪಿತ್ತು. ರೋಗಿಯು ಕಾಯಿಲೆಯಿಂದ ಗುಣಮುಖನಾಗಿ ಡಿಸ್ಚಾರ್ಜ್ ಆಗಿದ್ದರು, ನರ್ಸ್ ಮಾತ್ರ ರೋಗಿಯನ್ನು ಬಿಟ್ಟಿರಿಲಿಲ್ಲ.

ಡಯಾಲಿಸ್ (Dialysis) ಸೇರಿದಂತೆ ಹಲವು ಚಿಕಿತ್ಸೆಗಾಗಿ ಪ್ರತಿ ತಿಂಗಳು ರೋಗಿಯು ಆಸ್ಪತ್ರೆಗೆ ಬರಲೇಬೇಕಿತ್ತು. ಈ ಸಂದರ್ಭದಲ್ಲಿ ನರ್ಸ್ ಆಗಾಗ ಭೇಟಿಯಾಗುತ್ತಿದ್ದಳು. ಹೀಗೆ ಒಂದು ಡಯಾಲಿಸಿಸ್‌ಗಾಗಿ ಆಸ್ಪತ್ರೆಗೆ(hospital) ಬಂದಿದ್ದ ರೋಗಿಯನ್ನು ನರ್ಸ್ ಪಾರ್ಕಿಂಗ್ ಆವರಣಕ್ಕೆ ಕರೆದುಕೊಂಡು ಹೋದಳು. ಕಾರಿನಲ್ಲಿಯೇ ತನ್ನ ಕಾಮದಾಟವನ್ನು ಶುರುಮಾಡಿದ್ದಾಳೆ.

ಕಿಡ್ನಿ (kidney) ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಯು ಲೈಂಗಿಕ ಕ್ರಿಯೆ (Sex) ವೇಳೆಯೆ ಅಸ್ವಸ್ಥಗೊಂಡಿದ್ದಾನೆ. ತೀವ್ರ ಅಸ್ವಸ್ಥನಾಗಿ ಕುಸಿದ ರೋಗಿಯನ್ನು ಆಸ್ಪತ್ರೆ ದಾಖಲಿಸುವ ಪ್ರಯತ್ನಕ್ಕೆ ಮಾಡದೆ, ಆ್ಯಂಬುಲೆನ್ಸ್ ಪಕ್ಕದಲ್ಲೇ ಇದ್ದರೂ ನೆರವನ್ನು ಪಡೆಯದೆ, ರೋಗಿಯನ್ನು ಕಾರಿನಲ್ಲೇ (car) ಬಿಟ್ಟು ನರ್ಸ್ ಮತ್ತೆ ತನ್ನ ಕರ್ತವ್ಯಕ್ಕೆ ಹಾಜರಾದಳು.

ಆಸ್ಪತ್ರೆ ಸಿಬ್ಬಂದಿಗಳು ಪಾರ್ಕಿಂಗ್‌ನತ್ತ ತೆರಳಿದಾಗ ವ್ಯಕ್ತಿಯೊಬ್ಬರು ಕಾರಿನಲ್ಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ತಕ್ಷಣ ವೈದ್ಯರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ, ಡಯಾಲಿಸ್‌ಗೆ ಬಂದಿದ್ದ ರೋಗಿ ಮೃತಪಟ್ಟಿರುವುದು ಎಂದು ತಿಳಿದುಬಂದಿದೆ. ಆದರೆ ರೋಗಿಯು ಬೆತ್ತಲಾಗಿ ಕಾರಿನಲ್ಲಿ ಮೃತಪಟ್ಟಿರುವುದರಿಂದ ಅನುಮಾನ ಗೊಂಡ ವೈದ್ಯರು(Doctor) ತಕ್ಷಣ ಪೊಲೀಸ್ ಗೆ ಈ ವಿಷಯವನ್ನು ತಿಳಿಸಿದ್ದಾರೆ.

ಪೊಲೀಸರು ಈ ಬಗ್ಗೆ ವಿಚಾರಣೆಯ ವೇಳೆ ನರ್ಸ್ ಮತ್ತು ರೋಗಿಯ ಪ್ರೇಮದಾಟದ (nurse and patient love affair) ಮಾಹಿತಿ ಲಭ್ಯವಾಗಿದೆ. ವಿಚಾರಣೆಯ ವೇಳೆ ಬಾಯಿಬಿಟ್ಟ ನರ್ಸ್ ತನಗೆ ರೋಗಿಯೊಂದಿಗೆ ಸಂಬಂಧವಿರುವ ಬಗ್ಗೆ ಒಪ್ಪಿಕೊಂಡಿದ್ದಾಳೆ. ಸಂಭೋಗ ನಡೆಸುವ ಉದ್ದೇಶದಿಂದ ಆತನನ್ನು ಕರೆದಿದ್ದೆ. ಆತನಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಮೃತಪಟ್ಟ ಎಂಬ ಸ್ಫೋಟಕ ಮಾಹಿತಿಗಳು ಬಹಿರಂಗವಾಗಿದೆ. ಆ ಬಳಿಕ ಆಕೆಯನ್ನು ಆಸ್ಪತ್ರೆಯ ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ವರದಿ ತಿಳಿಸಿದೆ.

 

ಇದನ್ನು ಓದಿ: ದ.ಕ. : ಗ್ರಾಮ ಪಂಚಾಯತ್ ಉಪಚುನಾವಣೆಯಲ್ಲಿ ಪುತ್ತಿಲ ಪರಿವಾರ ಸ್ಪರ್ಧೆ ,ನಾಮಪತ್ರ ಸಲ್ಲಿಕೆ 

You may also like

Leave a Comment