Heart Attack: ಇತ್ತೀಚೆಗೆ ಜಿಮ್‌ನಲ್ಲಿ ಹೃದಯಾಘಾತದಿಂದ (Heart Attack) ಸಾವನ್ನಪ್ಪಿರುವ ಹಲವು ಘಟನೆಗಳು ನಮ್ಮ ಕಣ್ಣಮುಂದಿವೆ. ಕಳೆದ ವರ್ಷ, ಖ್ಯಾತ ಸ್ಟ್ಯಾಂಡ್‌ಅಪ್ ಕಾಮಿಡಿಯನ್ ರಾಜು ಶ್ರೀವಾಸ್ತವ ಹೃದಯಾಘಾತದಿಂದ ನಿಧನರಾದರು. ಜತೆಗೆ ಕನ್ನಡದ ನಟ ಪುನೀತ್ ರಾಜ್ಕುಮಾರ್ ಕೂಡ ಹೃದಯಾಘಾತದಿಂದ ನಿಧನರಾದರು.
ಇದೀಗ ಇನ್ನೊಂದು ಅಂತಹದೆ ಘಟನೆ ಬೆಳಕಿಗೆ ಬಂದಿದೆ. ಹೌದು, ಜಿಮ್‌ನಲ್ಲಿ ವರ್ಕೌಟ್ ಮಾಡಿದ ಬಳಿಕ ಎದೆಯಲ್ಲಿ ನೋವು ಕಾಣಿಸಿಕೊಂಡು ಹಠಾತ್ ಹೃದಯಾಘಾತದಿಂದ ಯುವಕ ಮೃತಪಟ್ಟಿರುವ ಘಟನೆ ತೆಲಂಗಾಣದ ಖಮ್ಮಂ ಬಳಿ ನಡೆದಿದೆ.
ಖಮ್ಮಂ ಕೃಷಿ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮಾಜಿ ಕಾಂಗ್ರೆಸ್ ಮುಖಂಡ ರಾಧಾ ಕಿಶೋರ್ರ ಪುತ್ರ ಶ್ರೀಧರ(31) ಬೆಳಿಗ್ಗೆ ಜಿಮ್‌ನಿಂದ ಮನೆಗೆ ಹಿಂದಿರುಗಿದ ಕೂಡಲೇ ಅಸ್ವಸ್ಥಗೊಂಡಿದ್ದು, ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆತನನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಶ್ರೀಧರ್ ಭಾನುವಾರ ಮನೆಯಲ್ಲಿ ತಮ್ಮ ಸಹೋದರನ ಮಗಳ ಹುಟ್ಟುಹಬ್ಬದಲ್ಲಿ ಪಾಲ್ಗೊಂಡಿದ್ದರು. ಮರುದಿನ ಸೋಮವಾರ ಎಂದಿನಂತೆ ಜಿಮ್‌ಗೆ ಹೋಗಿದ್ದ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಸದ್ಯ ತೆಲಂಗಾಣ ಮತ್ತು ಆಂಧ್ರದಲ್ಲಿ ಇತ್ತೀಚಿಗೆ ಹಠಾತ್ ಹೃದಯಾಘಾತಕ್ಕೆ ಬಲಿಯಾದ ಘಟನೆಗಳ ಸರಣಿಗೆ ಈ ಘಟನೆ ಸಾಕ್ಷಿಯಾಗಿದೆ.
ಇದನ್ನು ಓದಿ: ಮದ್ಯಪ್ರಿಯರಿಗೆ ಶಾಕ್ ಮೇಲೆ ಶಾಕ್ !! ಈ ದಿನದಿಂದಲೇ ಹೆಚ್ಚಾಗಲಿದೆ ಇವುಗಳ ಬೆಲೆ !!
