Gruha Jyoti Scheme: ಐದು ಗ್ಯಾರಂಟಿ ಘೋಷಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕೆಲವು ಗ್ಯಾರಂಟಿಗಳನ್ನು (Congress 5 Guarantee) ಜಾರಿಗೆ ತಂದಿದೆ. ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.
ರಾಜ್ಯದ ಜನತೆ ರಾಜ್ಯ ಸರ್ಕಾರದ ಈ ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಕೆಗೆ ಮುಂದಾಗಿದ್ದಾರೆ. ಈ ಮಧ್ಯೆ ಗೃಹ ಜ್ಯೋತಿ ಯೋಜನೆ (Gruha Jyoti Scheme) ಬಗ್ಗೆ ಮಹತ್ವದ ಮಾಹಿತಿ ಹೊರಬಿದ್ದಿದೆ.
ಸಾಕಷ್ಟು ಜನರು ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಇನ್ನೂ ಹಲವಾರು ಜನರು ಬಾಕಿ ಇದ್ದಾರೆ. ಹಾಗಿರುವಾಗ ರಾಜ್ಯದ ಜನತೆಗೆ ಸಿಹಿಸುದ್ದಿ ಇಲ್ಲಿದೆ. ಇನ್ಮುಂದೆ ಗ್ರಾಹಕರಿದ್ದಲ್ಲಿಗೆ ತೆರಳಿ ನೋಂದಣಿ ಮಾಡಿಕೊಳ್ಳಲು ಇಂಧನ ಇಲಾಖೆ ನಿರ್ಧರಿಸಿದೆ. ಆಯಾ ವಲಯದ ಎಸ್ಕಾಂಗಳು ಗ್ರಾಹಕರಿದ್ದಲ್ಲಿಗೆ ತೆರಳಿ ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಳ್ಳಲಿವೆ. ಈ ಬಗ್ಗೆ ಈಗಾಗಲೇ ಎಸ್ಕಾಂಗಳು ಚಿಂತನೆ ನಡೆಸಿವೆ.
ಇದನ್ನು ಓದಿ: HD Kumaraswamy: ಉಚಿತ ಅಕ್ಕಿ ಕೊಡಿ, ಜತೆಗೆ ಜನರಿಗೆ ‘ಎಣ್ಣೆ’ ಕೊಡಿ, ಹೆಚ್ ಡಿ ಕುಮಾರ ಸ್ವಾಮಿ ಎಣ್ಣೆ ಪರ ಭರ್ಜರಿ ಬ್ಯಾಟಿಂಗ್ !
