Home » Congress Government Vs Sri Ramulu: ಹಿಂದೂ ಕಾರ್ಯಕರ್ತರು ಒಬ್ಬೊಬ್ರೇ ಓಡಾಡಬೇಡಿ, ಈ ಸರ್ಕಾರ ಇರೋ ತನಕ ಎಲ್ರುನೂ ಕೊಲ್ತಾರೆ: ಶ್ರೀರಾಮುಲು ಎಚ್ಚರಿಕೆ

Congress Government Vs Sri Ramulu: ಹಿಂದೂ ಕಾರ್ಯಕರ್ತರು ಒಬ್ಬೊಬ್ರೇ ಓಡಾಡಬೇಡಿ, ಈ ಸರ್ಕಾರ ಇರೋ ತನಕ ಎಲ್ರುನೂ ಕೊಲ್ತಾರೆ: ಶ್ರೀರಾಮುಲು ಎಚ್ಚರಿಕೆ

1 comment
Congress Government Vs Sri Ramulu

Congress Government Vs Sri Ramulu: ಮಾಜಿ ಸಚಿವ ಶ್ರೀರಾಮುಲು ಹತ್ಯೆ ಆಗಿರುವ ಯುವಾ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್​ ಅವರ ನಿವಾಸಕ್ಕೆ ಇಂದು ಭೇಟಿ ನೀಡಿದ್ದು, ಈ ಕೊಲೆಯ ವಿಚಾರವನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಹೋರಾಟ‌ ಮಾಡುತ್ತೇವೆ. ನಿಮ್ಮ ಕುಟುಂಬಕ್ಕೆ ನ್ಯಾಯ ಕೊಡಿಸುತ್ತೇನೆ, ಎಲ್ಲರಿಗೂ ಶಿಕ್ಷೆಯಾಗಬೇಕು, ನಾವೆಲ್ಲ ಹೋರಾಟ ಮಾಡುತ್ತೇವೆ ಎಂದು ವೇಣುಗೋಪಾಲ್​ ಕುಟುಂಬಸ್ಥರಿಗೆ ಸಾಂತ್ವನ ಜೊತೆಗೆ ಭರವಸೆ ನೀಡಿದ್ದಾರೆ.

ಮೈಸೂರು (Mysore) ಜಿಲ್ಲೆಯ ಟಿ.ನರಸೀಪುರದಲ್ಲಿ (T. Narasipura) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಬಿ.ಶ್ರೀರಾಮುಲು (Sriramulu) ಪ್ರಕಾರ, ಹಿಂದೂ ಕಾರ್ಯಕರ್ತರು (Hindu Activist) ಯಾರೂ ಒಬ್ಬೊಬ್ಬರೆ ಓಡಾಡಬೇಡಿ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress Government) ಇರುವವರೆಗೆ ಎಲ್ಲರನ್ನೂ ಕೊಲ್ಲುತ್ತಾರೆ. ಈ ಸರ್ಕಾರದಲ್ಲಿ ಯಾರಿಗೂ ರಕ್ಷಣೆ ಇಲ್ಲದಂತಾಗಿದೆ ಎಂದು ಅವರು ಹೇಳಿದರು.

ಮುಖ್ಯವಾಗಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದ ಮೇಲೆ ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ವೇಣುಗೋಪಾಲ್‌ ನಾಯಕ ಹಿಂದೂ ಸಂಘಟನೆಯಲ್ಲಿ ಕೆಲಸ‌‌ ಮಾಡುತ್ತಿದ್ದನು. ವೇಣುಗೋಪಾಲ್ ಮೊಬೈಲ್​ ಪರಿಶೀಲನೆ ಮಾಡಿದರೇ ಗೊತ್ತಾಗುತ್ತೆ ಎಂದರು.

ಮೊಬೈಲ್​ ಪರಿಶೀಲಿಸಿದರೇ ಯಾರೆಲ್ಲ ಕರೆ ಮಾಡಿದ್ದಾರೆ ಗೊತ್ತಾಗುತ್ತೆ. ವೇಣುಗೋಪಾಲ್ ನಾಯಕ​ ಯಾವ ಕ್ರಿಮಿನಲ್ ಕೆಲಸ ಮಾಡಿಲ್ಲ. ಇದು ಧರ್ಮದ ವಿಚಾರವಾಗಿ ನಡೆದಿರುವ ಕೊಲೆ. ಧರ್ಮ ಅಂತ ಬಂದಾಗ ನಾವೆಲ್ಲ ಒಂದೇ. ಇದರಲ್ಲಿ ಯಾವುದೇ ಪಕ್ಷ ಅನ್ನುವುದು ಇಲ್ಲ. ಕೊಲೆಯ ಬಗ್ಗೆ ಸಂಪೂರ್ಣ ತನಿಖೆ ನಡೆದರೆ ಯಾರ ಕುಮ್ಮಕ್ಕಿನಿಂದ ಆಗಿರುವುದು ಎಂಬುದು ಗೊತ್ತಾಗುತ್ತೆ.

ಒಟ್ಟಿನಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾಂಗ್ರೆಸ್ ಸರ್ಕಾರ ಬಂದ ನಂತರ ಯಾರಿಗೂ ರಕ್ಷಣೆ ಇಲ್ಲದಂತಾಗಿದೆ ಎಂದು ರಾಮುಲು ಆರೋಪ ಮಾಡಿದ್ದಾರೆ.

 

ಇದನ್ನು ಓದಿ: Viral News: ಪೂಜೆ ಸಲ್ಲಿಸಲು ಬಂದಿದ್ದ ವ್ಯಕ್ತಿಗೆ ವೆಜ್ ಬಿರಿಯಾನಿಯಲ್ಲಿ ಸಿಕ್ಕಿದ್ದು ಕೋಳಿ ಕಾಲು ! ನಂತರ ಆದದ್ದೇನು ?! 

You may also like

Leave a Comment