Home » Pradeep Eshwar: ಅನ್ನಭಾಗ್ಯ ಶ್ರೀಮಂತರ ದೃಷ್ಟಿಯಿಂದ ರೇಷನ್ ಅಷ್ಟೇ, ಆದರೆ ನನ್ನಂತವನ ದೃಷ್ಟಿಯಲ್ಲಿ ಅನ್ನ ದೇವರು – ಪ್ರದೀಪ್ ಈಶ್ವರ್ ಮನ ಮುಟ್ಟುವ ಮಾತು !

Pradeep Eshwar: ಅನ್ನಭಾಗ್ಯ ಶ್ರೀಮಂತರ ದೃಷ್ಟಿಯಿಂದ ರೇಷನ್ ಅಷ್ಟೇ, ಆದರೆ ನನ್ನಂತವನ ದೃಷ್ಟಿಯಲ್ಲಿ ಅನ್ನ ದೇವರು – ಪ್ರದೀಪ್ ಈಶ್ವರ್ ಮನ ಮುಟ್ಟುವ ಮಾತು !

0 comments
Pradeep Eshwar

Pradeep Eshwar: ಸಿದ್ದರಾಮಯ್ಯನವರು ನೀಡಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಮನ ಮುಟ್ಟುವ ಮಾತನ್ನಾಡಿದ್ದಾರೆ. ಸಿದ್ಧರಾಮಯ್ಯರಿಗೆ ಹಸಿವಿನ ಅರಿವಿದೆ. ಬಡ ಜನರಿಗೆ ಅನ್ನ ಎಷ್ಟು ಮುಖ್ಯ ಎಂದು ಅವರಿಗೆ ತಿಳಿದಿದೆ. ಅದಕ್ಕಾಗಿಯೇ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ್ದಾರೆ. ಅನ್ನಭಾಗ್ಯ ಶ್ರೀಮಂತರ ದೃಷ್ಟಿಯಿಂದ ರೇಷನ್ ಅಷ್ಟೇ, ಆದರೆ ನನ್ನಂತವನ ದೃಷ್ಟಿಯಲ್ಲಿ ಅನ್ನ ದೇವರು ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಶಾಸಕ ಪ್ರದೀಪ್, ಗೃಹ ಜ್ಯೋತಿ ಯೋಜನೆ ಕೇವಲ ಮನೆಯನ್ನು ಬೆಳಗುತ್ತಿಲ್ಲ. ಕೋಟ್ಯಾಂತರ ಮಕ್ಕಳ ವಿದ್ಯಾಭ್ಯಾಸಕ್ಕೆ ಬೆಳಕು ನೀಡುತ್ತಿದೆ. ಸಾಕಷ್ಟು ಜನರ ಮಕ್ಕಳ ಆ ಬೆಳಕಿನಲ್ಲಿ ಓದುತ್ತಾರೆ. ವಿದ್ಯಾಭ್ಯಾಸಕ್ಕೆ ಗೃಹ ಜ್ಯೋತಿ ಉತ್ತಮ ಯೋಜನಾಗಿದೆ ಎಂದರು.

ಅಲ್ಲದೆ, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸಾ ಗುಣಮಟ್ಟ ಒಳ್ಳೆದಿರಬೇಕು. ಅದೇ ರೀತಿ ನೋಡಿಕೊಳ್ಳಬೇಕು‌. ಉತ್ತಮ ಚಿಕಿತ್ಸೆ ಸಿಗದೆ ನಾನು ನನ್ನ ಅಪ್ಪ – ಅಮ್ಮನನ್ನು ಕಳೆದುಕೊಂಡೆ. ಈ ರೀತಿಯ ಪರಿಸ್ಥಿತಿ ಯಾವ ಮನುಷ್ಯನಿಗೂ ಬರಬಾರದು. ಅದಕ್ಕಾಗಿ ಸರ್ಕಾರಿ ಆಸ್ಪತ್ರೆ ಉಳಿಸಬೇಕು, ಉತ್ತಮ ರೀತಿಯ ಚಿಕಿತ್ಸೆ ನೀಡಬೇಕು ಎಂದರು.

You may also like

Leave a Comment